ಮನಮಂಥನ
ಅವರೇನೂ ಹೇಳಲಿಲ್ಲ ಆದರೂ ಉಪ್ಪು ತಿನ್ನದೆ ಇದ್ದರೆ, ಬ್ಲಡ್ ಪ್ರೆಷರಿಗೆ ಒಳ್ಳೆಯದು ಅಲ್ಲವೇ? ಅದಕ್ಕೇ ಇಷ್ಟೇ ಊಟ ಮಾಡಿ ಮಲಕ್ಕೋತೀನಿ' ಎಂದು ಹೇಳಿ ಮಲಗಲು ಹೋದ.
ಬೆಳಿಗ್ಗೆ ಎದ್ದಾಗ ಲವಲವಿಕೆಯಾಗಿಯೇ ಇದ್ದ. ಪ್ರಾತರ್ವಿಧಿಗಳನ್ನು ಎಂದಿ ನಂತೆ ಮುಗಿಸಿದ. ಬೆಳಗಿನ ತಿಂಡಿಗೆ ಆತುರವಾಗಿ ಕುಳಿತಾಗ 'ಈಗ ಹೇಗಿದ್ದೀರಿ ಅಂದ್ರೆ!' ಎಂದು ಹೆಂಡತಿ ಕೇಳಿದಳು. ಆತನಕ, ಹಿಂದಿನ ಸಂಜೆಯ ಅಡಾಉಡಿ ಯೆಲ್ಲವೂ ಮರೆತೇ ಹೋಗಿತ್ತು. ಹೆಂಡತಿಯ ಪ್ರಶ್ನೆಯು ಆ ನೆನಪನ್ನು ಕೆರಳಿಸಿತು. ಈಗೇನೂ ಅಂತಹ ಸುಸ್ತಿಲ್ಲ, ಔಷಧಿಯಿಂದ ಗುಣವಾಗಿರಬೇಕು. ಕೆಲಸಕ್ಕೆ ಹೋಗಿ ನೋಡ್ತೀನಿ, ಸುಸ್ತಾದರೆ ಮನೆಗೆ ಹಿಂತಿರುಗುತ್ತೀನಿ' ಎಂದು ಹೇಳಿದ. ತಿಂಡಿ ತಿಂದು ಕಚೇರಿಗೆ ಹೋದ. ಹತ್ತು ಹದಿನೈದು ನಿಮಿಷಗಳಲ್ಲಿ ಮನೆಗೆ ಹಿಂತಿರುಗಿದ. 'ಯಾಕೋ ಒಂದು ತರಹ ಆಗ್ತಾ ಇದೆ, ಅನುಭವಸ್ಥ ಡಾಕ್ಟರ ಸಲಹೆಯನ್ನು ಪಡೆಯೋಣ ಅನ್ನಿಸುತ್ತೆ. ನೀನು ನನ್ನ ಜತೆಯಲ್ಲಿ ಬಾ, ದಾರಿಯಲ್ಲಿ ಏನಾದರೂ ಲಕ್ವಾಗಿಕ್ವಾ ಹೊಡೆದರೆ !' ಎಂದು ಹೇಳಿ ಅವಳನ್ನೂ ಕರೆದುಕೊಂಡು ಬೇರೆ ಡಾಕ್ಟರ ಬಳಿಗೆ ಹೋದ.
ಈ ರೀತಿ ಆರಂಭವಾಯಿತು ಅವನ ಬೇರೆ ಅವನ ನರಳಾಟ, ಎಂದಿನಂತೆ ಕೆಲವು ದಿನಗಳು ದುಡಿಯುತ್ತಿದ್ದ ಸಾಕಷ್ಟು ಚೂಟಿಯಾಗಿ ಕೆಲಸವನ್ನು ಮಾಡುತ್ತಿದ್ದ. ಇನ್ನು ಕೆಲವು ವೇಳೆ ತಾನು ಹೆದರಿ ಒದ್ದಾಡುವುದರ ಜತೆಗೆ ಹೆಂಡತಿಯನ್ನೂ ಹೆದರಿಸಿ ಕಂಗೆಡಿಸುತ್ತಿದ್ದ.
ಬ್ಲಡ್ ಪ್ರೆಷರ್ : ಇ.ಸಿ.ಜಿ. ಎಕ್ಸ್‌ರೆ ; ವಿಧವಿಧ ರಕ್ತ ಪರೀಕ್ಷೆಗಳು, ಎಲ್ಲವೂ ಹಲವಾರು ಕಡೆ ವಿಫುಲವಾಗಿ ಆದುವು, ಅವನ ನರಳಾಟ ತಪ್ಪಲಿಲ್ಲ.
'ನೋಡಿ, ನೋಡಿ, ನಾಡಿ ಕುಂಟೆಬಿಲ್ಲೆಯನ್ನು ಆಡುತ್ತಿದೆ. ಅಯ್ಯಯ್ಯೋ ನಿಂತೇ ಹೋಯಿತು ! ಎಷ್ಟು ಹೊತ್ತು ನಿಂತೇ ಹೋಗಿತ್ತು ? ಅಬ್ಬಾ ! ಕಣ್ಣು ಯಾಕೋ ಮಂಜಾಗುತ್ತಿಲ್ಲ. ಮೆದುಳಿನಲ್ಲಿ ಎಲ್ಲಾದರೂ ಹೆಮೊರೇಜ್ ಆಗಿರಬಹುದೇ ? ಲಕ್ವಾ ಬಡಿಯದ ಹಾಗೆ ಏನು ಮಾಡಬೇಕು? ಸಂಪೂರ್ಣವಾಗಿ ಉಪ್ಪು ಬಿಟ್ಟಿದ್ದೇನೆ. ಆದರೂ ಬ್ಲಡ್ ಪ್ರೆಷರ್ ಇಳಿದೇ ಇಲ್ಲವಲ್ಲ! ಯಾಕೆ ?'
ಇತ್ಯಾದಿ ದಿನದಿನದ ಪಲ್ಲವಿಯಾಯಿತು ; ಕಂಡ ಕಂಡ ಡಾಕ್ಟರ ಬಳಿಗೆ ಹೋದಾಗಲೆಲ್ಲ. ಹೆಂಡತಿಯನಕ ಬಳಿಯಲ್ಲೇ ಸದಾ ಇರಬೇಕು. ಅವನು ನರಳುವುದಂತಿರಲಿ, ಆಕೆಗೂ ನರಕಯಾತನೆ.
ದಿಳ್ಳಿಯ ಸುಪ್ರೀಂ ಕೋರ್ಟಿನಲ್ಲಿ ಲಾಯರಾಗಬೇಕು. ಅಷ್ಟಾದರೆ ಸಾಲದು