ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೨

ಮನಮಂಥನ

ಜಾರಿದ ನೆಲದ ಮೇಲಕ್ಕೆ ಬಿದ್ದ. ಬಿದ್ದುಕೊಂಡೇ ಇದ್ದ, ಒಂದೆರಡು ನಿಮಿಷಗಳಾದರೂನೂ, 'ಲತೀಫನಿಗೆ ಏನೋ ಆಯಿತು. ಜ್ಞಾನತಪ್ಪಿ ಬಿದ್ದು ಬಿಟ್ಟಿದ್ದಾನೆ' ಎಂದು ಜತೆಯವರು ಅವನ ಸುತ್ತ ಓಡಿಬಂದು ನಿಂತರು. ತಣ್ಣೀರನ್ನು ಅವನ ತಲೆಗೆ ಒಬ್ಬರು ತಟ್ಟಿದರು. ಕಚೇರಿಯ ಬೀಗದ ಕೈ ಅನ್ನು ಅವನ ಕೈಗೆ ಮತ್ತೊಬ್ಬರು. ಸಿಕ್ಕಿಸಿದರು. ಟೈ ಅನ್ನು ಸಡಿಲಿಸಿ, ಷರ್ಟಿನ ಗುಂಡಿಯನ್ನು ಬಿಚ್ಚಿದರು ಮತ್ತೊಬ್ಬರು. ದೊಡ್ಡ ಕಚೇರಿಯಲ್ಲಿ ಡ್ಯೂಟಿ ಮೇಲಿದ್ದ ಡಾಕ್ಟರನ್ನು ಕರೆತರಲು ಇನ್ನಿಬ್ಬರು ಓಡಿದರು. ಡಾಕ್ಟರು ಬಂದರು. ಗುಂಪನ್ನು ಚದುರಿಸಿದರು. ಒದ್ದೆ ತಲೆಯಲ್ಲಿ ಬಿದ್ದಿದ್ದ ಲತೀಫನಿಗೆ ಇನ್ಸಕ್ಷನ್ ಕೊಟ್ಟರು, ಯಾರಿಗೂ ಕಾಣದಂತೆ ಒಳಶುಂಠಿಯನ್ನು ಬಲವಾಗಿಟ್ಟರು. ಆಗ ಲತೀಫ್ ಎದ್ದು ಕುಳಿತ. "ಕೈಕಾಲುಗಳು ಹಠಾತ್ತನೆ ಕುಸಿದುಬಿದ್ದುವು. ಏನು ಮಾಡುವುದಕ್ಕೂ ಆಗಲಿಲ್ಲ. ಸಹಾಯಕ್ಕೆ ಯಾರನ್ನಾದರೂ ಕರೆಯೋಣ ಅಂದರೆ ಧ್ವನಿಯೇ ಹೊರಡಲಿಲ್ಲ, ಬಿದ್ದೇ ಬಿಟ್ಟೆ. ನೀವೆಲ್ಲಾ ಮಾತನಾಡಿದ್ದೂ, ಮಾಡಿದ್ದೂ, ಎಲ್ಲವೂ ಚೆನ್ನಾಗಿ ತಿಳಿಯುತ್ತಿತ್ತು. ಆದರೆ ಮಾತನಾಡಲು ಆಗಲಿಲ್ಲ.' ಎಂದು ತನಗಾದುದನ್ನು ವಿವರಿಸಿದ.

'ಈಗ ಸ್ವಸ್ಥವಾಗಿದ್ದೀನಿ. ಮಾಡುತ್ತಿದ್ದ ಕೆಲಸವನ್ನು ಮುಂದುವರೆಸುತ್ತೀನಿ' ಎಂದು ಎದ್ದು ನಿಂತ. 'ಇವತ್ತು ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೋ. ಮುಂದೆ ಹೀಗಾಗದಂತೆ ಡಾಕ್ಟರ ಬಳಿ ಚಿಕಿತ್ಸೆಯನ್ನು ಮಾಡಿಸಿಕೊ' ಎಂದು ಜೊತೆಯವರು ಒತ್ತಾಯಪಡಿಸಿ, ಆಟೋರಿಕ್ಷಾವನ್ನು ತರಿಸಿ, ಅದರಲ್ಲಿ ಕೂಡಿಸಿ ಕಳಿಸಿದರು.

ಅನಂತರ ಈ ರೀತಿಯ ಕೈಕಾಲು ಕುಸಿದು ಬೀಳುವ ಪ್ರಸಂಗಗಳು ಲತೀಫನನ್ನು ಆಗೊಮ್ಮೆ ಈಗೊಮ್ಮೆ ಕಾಡಲಾರಂಭಿಸಿದುವು. ಹೊತ್ತುಗೊತ್ತು ಅಂತ ಇಲ್ಲ; ಆ ಸ್ಥಳ, ಈ ಜಾಗ; ಎಂದೂ ಇಲ್ಲ. ಇವರಿದ್ದಾರೆ ಅವರಿಲ್ಲ ಎನ್ನುವ ಅಡ್ಡಿಗಳೂ ಇಲ್ಲ. ಸುಳಿವು ಸೂಚನೆಯನ್ನು ಕೊಡದೆ ಭರಸಿಡಿಲು ಬಡಿದ ಹಾಗೆ ಅವನಿಗೆ ಬಡಿಯುತ್ತಿತ್ತು, ಈ ಬೇನೆ. ಡಾಕ್ಟರ ಬಳಿಗೆ ಹೋದ.

ಆಮೂಲಾಗ್ರವಾಗಿ ಅವನ ದೇಹಾರೋಗ್ಯವನ್ನು ಪರೀಕ್ಷಿಸಲಾಯಿತು. ಅದರಲ್ಲೂ ಹೃದಯವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಯಿತು. sudden collapse ಆಗುವಂತೆ ಇವನ ಬ್ಲಡ್‌ಪ್ರೆಷರ್ ಸರಂತ ಏಕೆ ಇಳಿಯುತ್ತೆ? ಸ್ವಲ್ಪ ಕಾಲದಲ್ಲಿ ತನ್ನಷ್ಟಕ್ಕೆ ತಾನೇ ಸರಿಹೋಗುತ್ತದಲ್ಲಾ? ಹೇಗೆ? ದೇಹದಲ್ಲಿ ದಿಟವಾದ ಬೇನೆ ಇದ್ದಿದ್ದರೆ, ಅಷ್ಟು ಬೇಗ ಚೇತರಿಸಿಕೊಳ್ಳಲು ಸಾಧ್ಯವಿರುವುದಿಲ್ಲ.

ಲತೀಫ್ ಯಾರು ಅಂತ? ನಮ್ಮೂರಿನಲ್ಲಿ ಆಖಾಡಾದ ಉಸ್ತಾದ್