ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೫೧

ಪಟೇಲರ ಮನೆಯಲ್ಲಿ ಸೊಸೆ ಉಳಿದುಕೊಂಡಳು. ಷಹರಿಗೆ ಹೋಗಿ ವಿದ್ಯಾಭ್ಯಾಸವನ್ನು ಶ್ಯಾಮಾನಾಯ್ಕ ಮುಂದುವರೆಸಿದ. ಬಿ.ಎಸ್‌ಸಿ. ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ಪಡೆದ. ಐ.ಎ.ಎಸ್. ಪರೀಕ್ಷೆಗೆ ಕೂತ. ಅಲ್ಲಿಯೂ ಬ್ಯಾಂಕ್ ಬಂದಿತು. ಮನೆಗೆ ಬಂದ ಹೆಂಡತಿಯ ಪುಣ್ಯದಿಂದ ಹೀಗೆ ಯಶಸ್ವಿಯಾದೆ ಎಂದು ಶ್ಯಾಮಾನಾಯ್ಕನಿಗೆ ಅನಿಸಿತ್ತು. ಐ.ಎ.ಎಸ್. ಫಲಿತಾಂಶಗಳು ಪ್ರಕಟವಾಗುವುದಕ್ಕೂ ಲಚ್ಚಮ್ಮಣ್ಣಿ ಹೆಣ್ಣು ಮಗುವನ್ನು ಸುಸೂತ್ರವಾಗಿ ಹೆತ್ತಳು, ಎಂದು ಅವಳ ತೌರಿನಿಂದ ತಂತಿ ಬರುವುದಕ್ಕೂ ತಾಳೆಯಾಯಿತು. ಹೆಂಡತಿ ಮತ್ತು ಮಗಳ ಭಾಗ್ಯಾತಿಶಯದಿಂದ ಬ್ಯಾಂಕ್ ಬಂತು ಎಂದುಕೊಂಡ ಶ್ಯಾಮಾನಾಯ್ಕ, ತಂದೆಯು ಕೂಡ ಮಗನ ಈ ರೀತಿ ನಂಬುವಂತೆ, ಬಾಲ್ಯದಿಂದಲೂ Brain wash ಮಾಡುತ್ತಲೇ ಇದ್ದ.

ಲಚ್ಚಮ್ಮಣ್ಣಿ, ಮೂರು ಹೆಣ್ಣಿನ ತಾಯಿಯಾಗಿದ್ದರೂ, ಮದುವೆಯ ಹುಡುಗಿಯಂತೆಯೇ ಎಳಕಾಗಿ ಕಾಣುತ್ತಿದ್ದಳು. ಗಂಡನಿಗನಕ ಅಚ್ಚುಮೆಚ್ಚಾಗಿದ್ದಳು. ಸಾಮಾನ್ಯ ಸ್ವಭಾವವಿದ್ದುದರಿಂದ, ಧಾರಾಳಿಯೂ ಆದುದರಿಂದ ಮನೆಯ ಆಳು ಕಾಳುಗಳ ಗೌರವವನ್ನು ಪಡೆದಿದ್ದಳು, ನೆರೆಹೊರೆಯವರಿಂದ ಹೊಗಳಿಸಿಯೂ ಕೊಂಡಿದ್ದಳು. ಅತ್ತೆ ಅತ್ತಿಗೆ ನಾದಿನಿಯರು ಇರದ ಮನೆಯಲ್ಲಿ ಮಾವನ ಕಣ್ಮಣಿಯೂ ಆಗಿದ್ದಳು.

ಇಂತಹ ಪುಣ್ಯಶಾಲಿ ಹುಡುಗಿಗೆ ಬರಬಾರದ ಬೇನೆ ಬರಬೇಕೆ ? ಅಷ್ಟು ಆರೋಗ್ಯವಂತಳಾಗಿದ್ದಳು, ಕೂತರೆ ಸುಸ್ತು, ನಿಂತರೆ ಸುಸ್ತು, ಎಂದು ನರಳಲಾರಂಭಿಸಿದಳು, ಇಪ್ಪತ್ತುಮೂರರ ಚೆಲುವೆ ಶ್ರೀಮಂತರ ಸೊಸೆಯಾದವಳು, ದೊಡ್ಡ ಅಧಿಕಾರಿಯ ಹೆಂಡತಿಯಾದವಳು, ನರಳಲಾರಂಭಿಸಿದರೆ, ಅತ್ಯಾಧುನಿಕ ಚಿಕಿತ್ಸೆಯು ನೀಡಲ್ಪಡಬೇಕು. ಸುಪ್ರಸಿದ್ಧ ವೈದ್ಯರ ಸಲಹೆಯನ್ನು ಪಡೆಯಲಾಯಿತು.

ಬ್ಲಡ್ ಕೌಂಟ್ ಸ್ವಲ್ಪಕಡಿಮೆಯಾಗಿದೆ, ಮಿಕ್ಕಂತೆ ಎಲ್ಲ ಆರೋಗ್ಯ ಚೆನ್ನಾಗಿದೆ; ಎಂದು ರಕ್ತವೃದ್ಧಿಯನ್ನು ಮಾಡುವ ಚಿಕಿತ್ಸೆಯನ್ನು ಒಂದೆರಡು ತಿಂಗಳು ಮಾಡಲಾಯಿತು. ರಕ್ತವೃದ್ಧಿಯಾಯಿತು ಎಂದರು ವೈದ್ಯರುಗಳು ; ಸುಸ್ತು ಮಾತ್ರ ಲಚ್ಚಮ್ಮಣ್ಣಿಗೆ, ಮೊದಲಿನಂತೆಯೇ ಇತ್ತು.

ವೈಟಮಿನ್‌ಗಳ ಕೊರತೆಯಿಂದ ಹೀಗಾಗುವುದೂ ಉಂಟು, ಎಂದು ಅಕಾರಾದಿಯಾಗಿ ಎಲ್ಲಾ ವೈಟಮಿನ್‌ಗಳನ್ನೂ ಕೊಡಲಾರಂಭಿಸಿದರು. ಈಗ ಸ್ವಲ್ಪ ವಾಸಿಯಲ್ಲವೇ ? ಎಂದು ವೈದ್ಯರು ಗೋಗರೆದು ಕೇಳಿದಾಗ, ಸ್ವಲ್ಪ ವಾಸಿ ಅನಿಸುತ್ತೆ ಎಂದು ಲಚ್ಚಮ್ಮಣ್ಣಿಯು ಹೇಳುತ್ತಿದ್ದಳು. ಡಾಕ್ಟರಿಗೆ ತೃಪ್ತಿಯಾಗುತ್ತಿತ್ತು. ಆದರೆ ಲಚ್ಚಮ್ಮಣ್ಣಿಗೆ ಸುಸ್ತೋ ಸುಸ್ತು. ಬಚ್ಚಲ ಮನೆಯಿಂದ ಮಲಗುವ ಕೋಣೆಗೆ