ಮನಮಂಥನ
ಲಚ್ಚಮ್ಮಣ್ಣಿ ಶ್ರೀಮಂತಿನಿ, ಹಾಗೂ ಬಿಡುಗೈ ಸ್ವಭಾವದವಳು. ಮೂರನೆಯ ದಿನ ದಿಂದಲೇ ಪುರಾಣವನ್ನು ಹೇಳಲು ಪ್ರಾರಂಭಿಸಿದರು.
ಮತ್ತ್ವಗಂಧಿಯನ್ನು ಶಂತನು ಚಕ್ರವರ್ತಿ ಬಯಸಿ ಮದುವೆಯಾದುದೂ; ಬ್ರಹ್ಮಚಾರಿಯಾಗಿ ಉಳಿಯುವೆನೆಂದು ಭೀಷ್ಮ ಪ್ರತಿಜ್ಞೆಯನ್ನು ಮಾಡಿದುದೂ, ನಂತರ ಯೋಜನಗಂಧಿಯು ಚಕ್ರವರ್ತಿನಿ ಆದ ಕತೆ.
'ಮೀನುಗಾರರ ಮನೆಯಲ್ಲಿ ಹುಟ್ಟಿ ಬೆಳೆದ ಮೊಗವೀರರ ಹೆಣ್ಣು. ಹಳ್ಳಿಯ ಪೆದ್ದು ಹುಡುಗಿಯೇ ಆಗಿರಬೇಕು. ಚಕ್ರವರ್ತಿಯಾದರೋ ಅರಮನೆಯಲ್ಲಿ ಸುಸಂಸ್ಕೃತ ಬಾಳನ್ನು ನಡೆಸುವವ. ಈ ಹಳ್ಳಿಯ ಹೆಣ್ಣು ಅರಮನೆಯ ಸುಸಂಸ್ಕೃತ ವಾತಾವರಣದಲ್ಲಿ ಹೇಗೆ ಬಾಳಿದಳು?' ಎಂದು ಲಚ್ಚಮ್ಮಣ್ಣಿಯು ಸ್ವಲ್ಪ ಕುತೂಹಲದಿಂದ ಕೇಳಿದಳು.
ಲೋಕಾನುಭವವನ್ನು ಪಡೆದಿದ್ದ ಪಂಡಿತ, ಸಹಜವಾಗಿ ಜಾಣ ಈ ಪ್ರಶ್ನೆಯನ್ನು ಲಚ್ಚಮ್ಮಣ್ಣ ಏಕೆ ಕೇಳಿದಳು? ಮತ್ಯಗಂಧಿಯಂತೆ ತಾನೂ ಹಳ್ಳಿಯ ಹುಡುಗಿ. ಅವಳಂತೆ ಇವಳೂ ಶ್ರೀಮಂತ, ಸುಸಂಸ್ಕೃತ, ಗಂಡನ ಮನೆಗೆ ಹೋಗಿದ್ದಳು. ಅಧಿಕಾರಿ ಗಂಡನಿಗೆ, ಮನೆಗೆ ಬರುವ ಗೆಳೆಯರು, ತುಂಬಾ ಇರುತ್ತಾರೆ. ಆ ನಾಗರಿಕರೊಂದಿಗೆ ಈಕೆ ನಡವಳಿಕೆಯಲ್ಲಿ ಏನಾದರೂ ಎಡವಿರಬಹುದೇ? ಅದರಿಂದಾಗಿ ತುಂಬಾ ಅವಮಾನಪಟ್ಟು ಹೀಗೆ ಕೊರಗಿರಬಹುದೇ? ಮುಂದೆ ನಾಗರಿಕ ರೀತಿಯಲ್ಲಿ ಬಾಳುವುದು ಸಾಧ್ಯವೇ? ಅದನ್ನು ಕಲಿಯಲಾದೀತೆ ? ಎನ್ನುವ ಆತಂಕವು ಇವಳನ್ನು ಕಾಡುತ್ತಿದೆಯೇ? ಎಂದೆಲ್ಲಾ ಯೋಚಿಸತೊಡಗಿದರು. ನಂತರ ಕತೆಯನ್ನು ಹೇಳುವಾಗ, ಈ ವಿಷಯದ ಮೇಲೆ ಹೆಚ್ಚು ಗಮನವನ್ನಿಟ್ಟರು.
ಶಂತನು ಚಕ್ರವರ್ತಿಯ ಮನೆಯಲ್ಲಿ, ಬಂದವರೆದುರು, ಮತ್ತ್ವಗಂಧಿಯು ಯಾವ ರೀತಿಯಲ್ಲಿ ಮೊದಮೊದಲು ಪೆಚ್ಚುಪೆಚ್ಚಾಗಿ ನಡೆದುಕೊಂಡಳು ; ಹಾಸ್ಯಾಸ್ಪದವಾದ ರೀತಿಯಲ್ಲಿ ಸಂಭಾಷಿಸುತ್ತಿದ್ದಳು ; ಇವೆಲ್ಲವನ್ನೂ ವಿಧವಿಧವಾಗಿ ತಮ್ಮ ಲೋಕಾನುಭವದ ನೆರವಿನಿಂದ, ಬಣ್ಣಗಟ್ಟಿ ಬಣ್ಣಿಸಿದರು. ಅನಂತರ ಏಕಾಂತದಲ್ಲಿ ಅರಸನನ್ನು ಸಂಕೋಚವಿಲ್ಲದೆ ಕೇಳಿ ನಾಗರಿಕ ಶಿಷ್ಟಾಚಾರಗಳನ್ನು ಹೇಗೆ ಕಲಿತು ಕೊಂಡಳು ? ಆಮೇಲೆ ಹುಟ್ಟು ಚಕ್ರವರ್ತಿನಿಯಂತೆ ಹೇಗೆ ನಡೆದುಕೊಂಡಳು ; ಇವೆಲ್ಲವನ್ನೂ ಹಲವಾರು ನಿದರ್ಶನಗಳನ್ನು ಕೊಟ್ಟು ವಿವರಿಸಿದರು.
ಎಂಟು ಹತ್ತು ದಿನ ಪುರಾಣದ ಕತೆಗಳನ್ನು ಕೇಳಿದ ಮೇಲೆ ಲಚ್ಚಮ್ಮಣ್ಣಿಯ