೫೫
ಮುಖವು ಸ್ವಲ್ಪ ಸ್ವಲ್ಪ ಪ್ರಸನ್ನವಾಗಲಾರಂಭಿಸಿತು. ಕೊಂಚ ಊಟವನ್ನು ಮಾಡಿದರೂ,ಆಸಕ್ತಿಯಿಂದ ಉಣ್ಣಲಾರಂಭಿಸಿದಳು. ನೀವು ಕೊಟ್ಟ ಲೇಹ ಈಗ ಕೆಲಸ ಮಾಡುತ್ತಿದೆಎಂದು ಪಂಡಿತರಿಗೆ ಹೇಳಿದಳು. ತಿಂಗಳೊಪ್ಪತ್ತಿನಲ್ಲಿ ಮೊದಲಿದ್ದ ಉತ್ಸಾಹವೂ,ನಗು ಸರಸಿತನವೂ ಪುನಃ ಕಾಣಿಸಿಕೊಂಡಿತು. ಕೈತುಂಬಾ ದಕ್ಷಿಣೆ ಮತ್ತು ಉಡುಗೊರೆಯನ್ನು ಪಂಡಿತರಿಗೆ ಕೊಟ್ಟ ಜಿಗಿಜಿಗಿಯುತ್ತಾ ಗಂಡನ ಮನೆಗೆ ಹೋದಳು. ತಾನು ಮನೆಯಲ್ಲಿರದಿದ್ದರೂ, ಮಕ್ಕಳನ್ನು ಅದರದಿಂದ ಸಾಕಿದ, ಗಂಡ ಮಾವಂದಿರ ಮೇಲೆ ತುಂಬಾ ಅಭಿಮಾನವುಂಟಾಯಿತು. ಅವೂ ಹಾಗೆ ದೃಷ್ಟಿ ಬಡಿಯುವಂತೆ ಬೆಳೆದಿದ್ದುವು. ನಗು ನಗುತ್ತಲೂ ಇದ್ದುವು. ಯಾವ ಸಂಕೋಚವೂ ಇರದೆ, ಮೊಂಡುತನವನ್ನೂ ತೋರಿಸದೆ, ನಾಗರಿಕ ಶಿಷ್ಟಾಚಾರದ ಪಾಠಗಳನ್ನು ಗಂಡನಿಂದ ತಾನೇ ಕೇಳಿ ಕಲಿತುಕೊಂಡಳು. ಶ್ಯಾಮಾನಾಯ್ಕನಿಗನಕ ಬಲು ಖುಷಿ, ತಪ್ಪು ಎಂದು ತಿಳಿದುಕೊಂಡರೆ ಮುಂದೆ ತಿದ್ದಿಕೊಳ್ಳಬಹುದು. ಅಂತಹ ಹೆಂಡತಿಯು ಸಿಕ್ಕಿದ್ದಾಳಲ್ಲ ಎಂಬ ಹೆಮ್ಮೆ ಇಷ್ಟು ದಿನವೂ ಹೀಗೇಕೆ ಕೇಳಿ ಕಲಿತುಕೊಳ್ಳಲಿಲ್ಲ ಎಂಬ ಸಮಸ್ಯೆಯೂ ಉಂಟಾಗಿತ್ತು. ಆಗಿ ಹೋದದ್ದನ್ನೆಲ್ಲಾ ಕಟ್ಟಿಕೊಂಡು ಈಗೇನಾಗಬೇಕು ? ಇನ್ನು ಮುಂದೆ ನಾಲ್ಕು ಜನ ಸರಿಯವರೆದುರಿಗೆ, ಇವಳ ಪೆಚ್ಚು ನಡವಳಿಕೆಯಿಂದ ತಲೆತಗ್ಗಿಸಬೇಕಾಗಿಲ್ಲವಲ್ಲ ;ಎಂದು ಸಂತಸಪಟ್ಟ.
ಪಂಡಿತರು ಪುರಾಣದ ಕತೆಗಳನ್ನು ಹೇಳುವಾಗ, ಒಂದು ರೀತಿಯಲ್ಲಿ ಉಪದೇಶವನ್ನೂ ಮಾಡಿದ್ದರು. ಮತ್ತ್ವಗಂಧಿಯ ಉದಾಹರಣೆಯನ್ನು ಬಳಸಿಕೊಂಡು, ಮುಂದೆ ಏನು ಮಾಡಬೇಕು, ಹೇಗೆ ಮಾಡಬೇಕು, ಎನ್ನುವುದನ್ನು ಉಪದೇಶಿಸಿದ್ದರು. ನೇರವಾಗಿ ಉಪದೇಶ ಮಾಡಿದರೆ, ತಿರುಗಿ ಬೀಳುವಂತೆ, ಸ್ವಾಭಿಮಾನವು ಕೆರಳಿಸುತ್ತದೆ. ಅದೂ ಬಡತನದಿಂದ ಹಠಾತ್ತನೆ ಶ್ರೀಮಂತಿಕೆಗೆ ಏರಿದ ಮಂದಿಯಲ್ಲಿ. ಆದುದರಿಂದಲೇ ಹಿರಿಯರು ಬದುಕಿ ಕೆಟ್ಟವರೊಂದಿಗೆ ಹೇಗಾದರೂ ಬಾಳಬಹುದು. ಆದರೆ ಕೆಟ್ಟು ಬದುಕಿದವರೊಂದಿಗೆ ಬಾಳಲು ಬಲು ಕಷ್ಟ ಎಂದನ್ನುತ್ತಿದ್ದರು.
ನಿದರ್ಶನಗಳ ಮೂಲಕ ಮಾಡಿದ ಉಪದೇಶದಿಂದ, ಲಚ್ಚಮ್ಮಣ್ಣಿಯ ಸ್ವಾಭಿಮಾನಕ್ಕೆ ಧಕ್ಕೆಯಾಗಲಿಲ್ಲ. ಆದುದರಿಂದಲೇ ಆಕೆ ಆ ಬುದ್ಧಿವಾದವನ್ನು ಅಂಗೀಕರಿಸಲು ಸುಲಭ ಸಾಧ್ಯವಾಯಿತು.
ಓದುಗರ ಮನಸ್ಸನ್ನು ನಿರ್ಮಲಗೊಳಿಸಿ, ಹಿತವಾದ ಬುದ್ಧಿವಾದವನ್ನು ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಹೇಳುವುದೇ ಸಾಹಿತ್ಯದ ಪ್ರಯೋಜನ. ಹೀಗಾಗುತ್ತದೆ ಎಂದು ತಿಳಿಯದೆ ಇದ್ದರೂ ಫಲಿತಾಂಶವೇನೋ ಆಗಿಯೇ