ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೫೭

ಕೃತಕೃತ್ಯವಾಗಿವೆ.

ಪುರಾಣದ ಪುಣ್ಯಕತೆಗಳಲ್ಲಿ, ಸಾಹಿತ್ಯದ ಹಿತಮಾರ್ಗವೂ ಗೀತೆಯ ಉಪದೇಶಾವಿಧಾನಗಳೂ ಸಮ ಸಮ ಸ್ವಾರಸ್ಯವಾಗಿ ಮಿಲನವಾಗಿವೆ. ಆದಕಾರಣ ಜನಸಾಮಾನ್ಯರಲ್ಲಿ ಅವು ಅತಿ ಪ್ರಿಯವೂ ಪ್ರಯೋಜನಕಾರಿಯೂ ಆಗಿವೆ. ಗೀತೋಪದೇಶವನ್ನು ಅರಿಯಲು ವಿಚಾರಶಕ್ತಿಯು ಸಾಕಷ್ಟಿರಬೇಕು. ಇದು ಶತಾಂಶ ಹತ್ತಿಪ್ಪತ್ತು ಮಂದಿಯಲ್ಲಿ ಮಾತ್ರ ಇರುತ್ತದೆ. ಆದರೆ ಸಾಹಿತ್ಯದ ಹಿತ ಮಾರ್ಗವು ಜನಸಾಮಾನ್ಯರೆಲ್ಲರಿಗೂ ಸುಲಭವಾಗಿ ತಿಳಿಯುತ್ತದೆ.

ಮನೋವಿಜ್ಞಾನಿಗಳು ಇಂದು ಮಾಡುತ್ತಿರುವ ಪ್ರಯೋಗಗಳು, ಬಳಸುತ್ತಿರುವ ವಿಧಾನಗಳು, ಇವೆಲ್ಲವನ್ನೂ ಇನ್ನೂ ಅತಿ ಹೆಚ್ಚು ಫಲಪ್ರದವಾಗುವಂತೆ, ಪುರಾಣ, ಗೀತೆ, ಇತ್ಯಾದಿಗಳಲ್ಲಿ, ನಮ್ಮ ಹಿರಿಯರು ಸಾಧಿಸುತ್ತಿದ್ದರು. ಇದನ್ನು ಮನಗಂಡ ನಾವು, ಆಧುನಿಕ ಮನೋವಿಜ್ಞಾನವು ಯಾವ ರೀತಿಯಲ್ಲಿ ಮುಂದುವರೆಯಬೇಕು ಎನ್ನುವುದನ್ನು ಸೂಚಿಸಬೇಕು.

ಪುರಾಣದ ಕತೆಯ ಮೂಲಕ ಸಾಧಿಸಲ್ಪಟ್ಟ 'ಮಾನಸಿಕ ಚಿಕಿತ್ಸೆ' ಎಂದನ್ನುವ ಉಪದೇಶವು ಲಚ್ಚಮ್ಮಣ್ಣಿಯ ಆತಂಕವನ್ನು ಶಮನಮಾಡಿತ್ತು. ಏಕೆಂದರೆ ಯಾವ ಆತಂಕವು ಕಾಡುತ್ತಿತ್ತೋ, ಅದರ ಪರಿಹಾರ ಮಾರ್ಗವೂ ಹೇಳಲ್ಪಟ್ಟಿತ್ತು. ಆತಂಕವು ಶಮನವಾದಾಗ, ಸುಸ್ತೋಸುಸ್ತು ಇಲ್ಲವಾಯಿತು. ಹೃದಯದ ಬಡಿತವು ಸರಾಗವಾಯಿತು. ಉಂಡುದೆಲ್ಲ ಜೀರ್ಣವೂ ಆಯಿತು.

೫. ಆತಂಕಕ್ಕೆ ಬಲಿಯಾದ ಅರ್ಜುನ ಜೇನುಗೂಡು ಕೆರಳಿದಾಗ, ಜೇನುಹುಳುಗಳು ಹುಚ್ಚಾಪಟ್ಟೆ ಹಾರಾಡುತ್ತ ಸಿಕ್ಕಿದ್ದನ್ನು ಕಟಕಾರಿಸಿ ಕಚ್ಚುತ್ತವೆ. ಏಕೆಂದರೆ ಅವುಗಳ ಸ್ವಾಭಾವಿಕ ಜೀವನಕ್ಕೆ ಅಡ್ಡಿ ಅಡಚಣೆಯುಂಟಾಗಿರುತ್ತದೆ. ಮುಂದೆ ಏನು ಮಾಡಬೇಕು ಎಂಬುದು ತಿಳಿಯದು. ಕಾರಣ ರೇಗಿ ಸಿಕ್ಕಿದ್ದನ್ನು ಕಚ್ಚಿ ಸಿಕ್ಕಾಪಟ್ಟೆ ಆಡುತ್ತವೆ. ಆತಂಕವು ಮನಸ್ಸನ್ನು ತುಂಬಿದಾಗ, ಮನಸೂ ಸಿಕ್ಕಾಪಟ್ಟೆ ಓಡುತ್ತದೆ. ಗೊತ್ತಿಲ್ಲದೆ, ಗುರಿಯಿಲ್ಲದೆ ಎತ್ತೆತ್ತಲೋ ಓಡುತ್ತದೆ. ಅಂತಹ ಸ್ಥಿತಿಯಲ್ಲಿ ಧೀರನಾಗಿದ್ದವನೂ ಕೂಡ, ಯಾವ ಸ್ಥಿರನಿರ್ಣಯವನ್ನೂ ಮಾಡಲಾಗುವುದಿಲ್ಲ. ಎಂತಹ ಧೈರ್ಯಶಾಲಿಯೂ ಷಂಡನಂತಾಗುತ್ತಾನೆ. ಹೆಸರಾಂತ ಗಾಂಡೀವಿಯಾದರೂ, ಕಾತರದಿಂದ ಮುತ್ತಲ್ಪಟ್ಟಾಗ ಹೃದಯದೌರ್ಬಲ್ಯದಿಂದ ನರಳಿ ಬಳಲುತ್ತಾನೆ. ಇವೆಲ್ಲವನ್ನೂ ಸ್ಪಷ್ಟವಾಗಿ ತೋರಿಸುವ ವ್ಯಕ್ತಿ, ಅರ್ಜುನ. ವಿಶಾಲಬುದ್ಧಿಯವರು ಎಂದು ಅನ್ವರ್ಥ