ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೮

ಮನಮಂಥನ

ನಾಮಧೇಯರಾದ ವ್ಯಾಸ ಮಹರ್ಷಿಗಳು, ಆತಂಕದಿಂದ ತೀವ್ರವಾಗಿ ನರಳುತ್ತಿರುವ ಅರ್ಜುನನ ಸ್ಥಿತಿಯನ್ನು ಸಲ್ಲಕ್ಷಣವಾಗಿ ವಿವರಿಸಿದ್ದಾರೆ. Anxiety Neuroses ಅನ್ನು ಯಾವ ಮನೋವಿಜ್ಞಾನದ ಹೆಸರಾಂತ ಪುಸ್ತಕಗಳೂ ಅಷ್ಟು ವಿವರವಾಗಿ ಮತ್ತು ಸ್ಪುಟವಾಗಿ ವಿವರಿಸಿಲ್ಲ.

ಹೆಣ್ಣುತನದ, ಹೆಣ್ಣಿನ ಸ್ವಾಭಾವಿಕ ಭೀರುತನದ, ಯಾವ ಲಕ್ಷಣಗಳೂ ಅರ್ಜುನನಲ್ಲಿ ಇರಲಿಲ್ಲ ಎಂದು ವಿವರಿಸಿದ್ದಾರೆ. ಹೆಣ್ಣುತನದ ಹಿರಿಮೆಯಾದ ಸ್ತನಗಳ ರುದ್ರಾಕ್ಷಿಗಳು ಅಲ್ಪಸ್ವಲ್ಪವಾಗಿಯಾದರೂ ಪ್ರತಿಯೊಬ್ಬ ಗಂಡಸಿನಲ್ಲಿಯೂ ಕಂಡೇ ಕಾಣುತ್ತವೆ. ಶತಾಂಶನೂರರಷ್ಟು ಗಂಡು ಎಂಬುವ ಇಲ್ಲವೇ ಇಲ್ಲ. ಎಲ್ಲರೂ ಇಷ್ಟೋ ಅಷ್ಟೋ ಅರ್ಧನಾರೀಶ್ವರರೇ ! ಇದು ದೇಹವಿಜ್ಞಾನದ ಪ್ರಕಾರದಿಂದಲೂ ಖಚಿತವಾಗಿದೆ. ಆದರೆ ಅರ್ಜುನನ ಎದೆಯ ಮೇಲೆ ಮೊಲೆಯ ತೊಟ್ಟುಗಳ ಅವಶೇಷವೂ ಇರಲಿಲ್ಲವಂತೆ. ಅಂತಹ ಬಡಾ ಗಂಡಸು, ಅವ. ಭೀರುತನವು ಇರಲೇ ಕೂಡದು, ಅವನಿಗೆ.

ಸಾಮಾನ್ಯ ಗಂಡುಗಳ ಮಿಂಡನಾದ, ಇಂತಹ ಪ್ರಚಂಡ ಗಾಂಡೀವಿ. ಕುರುಕ್ಷೇತ್ರದ ಯುದ್ಧದ ಆರಂಭದಲ್ಲಿ, ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನ ಸಾರಥ್ಯದಲ್ಲಿ, ಏಳು ಆರೋಹಿಣಿ ಸೈನ್ಯದ ಬೆಂಬಲ ಪಡೆದು, ನಾಲ್ಕು ಜನ ವೀರ ಸಹೋದರರ ಜತೆ ನಿಂತು, ಯುದ್ಧಕ್ಕೆ ಸಿದ್ಧನಾಗಿದ್ದಾನೆ.

ಬಾಲ್ಯದಿಂದಲೂ ಶಿಕ್ಷಣವನ್ನು ಕೊಟ್ಟ ಗುರುಗಳು, ತನ್ನ ಹಿರಿಯರು, ರಕ್ತ ಸಂಬಂಧಿಗಳು, ಹನ್ನೊಂದು ಅಶೋಹಿಣಿ ಸೈನ್ಯದ ಬೆಂಬಲದೊಂದಿಗೆ ಎದಿರು ನಿಂತಿರುವುದನ್ನು ಕಾಣುತ್ತಾನೆ. ಇವರನ್ನು ಈಗ ಅವ ಸದೆಬಡಿದು ಜಯಗಳಿಸಬೇಕು. ಅದಕ್ಕಾಗಿ ನಿಂತಿದ್ದಾನೆ. ಅವನ ಮನಸ್ಸಿನಲ್ಲಿ ಇದು ಸ್ಪಷ್ಟವಾಗಿ ತಿಳಿದಿದೆ. ಇಂತಹ ಅತಿರಥ ಮಹಾರಥರನ್ನು ನಿರ್ಮೂಲಮಾಡಲು ನನಗೆ ಸಾಧ್ಯವೇ ? ಎಂಬ ಭಯವು ಅಥವಾ ಸಂದೇಹವು ಉಂಟಾಗಿರಬೇಕು. ಸಂದೇಹವು ಉಂಟಾದಾಗ, ಭಯವು ಹಿಂದೆಯೇ ಕಾಡುತ್ತದೆ. ಹೀಗಾದರೆ ಹೇಗೆ ? ಹಾಗಾಗಿಬಿಟ್ಟರೆ ? ಎನ್ನುವ ಆಂದೋಲನವು ಶುರುವಾಗುತ್ತದೆ. ಜತೆಯಲ್ಲೇ ಭವಿಷ್ಯದ ಆತಂಕ ; ಕಾತರ.

ಕೌರವ ಸೇನಾಧಿಪತಿಗಳು ಆಗ ಶಂಖಗಳನ್ನು ಊದುತ್ತಾರೆ. ಅದರೊಂದಿಗೆ ಧೈರ್ಯಗಳೂ, ತಮಟೆಗಳೂ ಬಾರಿಸಲ್ಪಡುತ್ತವೆ. ಕಹಳೆಗಳೂ ಮೊಳಗುತ್ತವೆ. ಭಯಂಕರವಾದ ಈ ಶಬ್ದವು ಅತ್ಯುಗವಾಯಿತು. 'ತುಮುಲೋಭವತ್' ಪಾಂಡವ ಸೈನ್ಯವೂ ಸಮಸಮ ಮಾರ್ದನಿ ಕೊಟ್ಟಿತು. ಭೀಕರವಾದ ಈ ರಣಕಹಳೆಯು,