೬೧
ನಮ್ಮ ಭಾರತದಲ್ಲಿ, ಪುರಾತನ ಕಾಲದಿಂದಲೂ ಬೆಳೆದು ಬಂದಿರುವ ಸಂಸ್ಕೃತಿಯ ಪರಿಣಾಮವಾಗಿ, ಆತಂಕಕ್ಕೆ ತುತ್ತಾದವರು, ರಾಮಾಯಣ ಪಾರಾಯಣ, ಗೀತಾ ಪ್ರವಚನ, ಭಾರತ ಶ್ರವಣ, ಹರಿಕಥೆ, ಶಿವಕಥೆಗಳನ್ನು ಕೇಳುವುದು; ಇತ್ಯಾದಿಗಳಲ್ಲಿ ಮಗ್ನರಾಗುತ್ತಿದ್ದರು. ಪೂಜೆ ಪುನಸ್ಕಾರ, ವ್ರತ ನಿಯಮ ಇವುಗಳನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದರು. ಈ ಚಟುವಟಿಕೆಗಳೆಲ್ಲವೂ ಆಧ್ಯಾತ್ಮಿಕ ಸ್ವರೂಪದ್ದೇ! ಶ್ರವಣ ಅಥವಾ ಪಠಣ ಮಾಡಿದಾಗ, ರಾಮಾಯಣದ ಆಧ್ಯಾತ್ಮಿಕ ಅರಿವಾಗಲೀ, ಗೀತೆಯ ನಿಯಮಗಳಾಗಲೀ, ಅರ್ಥವಾಗದೆ ಇರಬಹುದು. ಆದರೂ ಅನಂತರ ಮನಸ್ಸಿಗೆ ಒಂದು ತೆರನ ನೆಮ್ಮದಿಯು ದೊರಕಿ ಆತಂಕದ ಕಾಟವು ಕಡಮೆಯಾಗುತ್ತಿತ್ತು, ಕಡಿಮೆಯಾಗುತ್ತಲೂ ಇದೆ. ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ, ಒಂದಲ್ಲ ಒಂದು ಹಂತದಲ್ಲಿ, 'ಉಪದೇಶವೇ' ಹೌದು. ಕಾವ್ಯಮಯವಾದ ಉಪದೇಶ. ಅಂದರೆ, ಕಾವ್ಯಗಳಲ್ಲಿನ ವ್ಯಕ್ತಿಗಳೊಡನೆ ಓದುಗನು ತಾದಾತ್ಮವನ್ನು ಹೊಂದುತ್ತಾನೆ. ತನ್ನ ಮನದ ಆತಂಕದ ಕಲ್ಮಷವನ್ನು ಕಳೆದುಕೊಳ್ಳುತ್ತಾನೆ, ಆಗ ಮನಸ್ಸಿಗೆ ನೆಮ್ಮದಿಯು ದೊರಕುತ್ತದೆ. ಇದರ ಜತೆಗೆ ಆಧ್ಯಾತ್ಮಿಕ ಉಪದೇಶವೂ ಬೆಸೆದುಗೊಂಡಿರುವುದರಿಂದ, ಮನಸ್ಸಿನ ಗೊಂದಲವು, ಹರಿದು, ಸರಳವಾಗಲು ಸಾಧ್ಯವಾಗುತ್ತದೆ. ಸುಲಭಸಾಧ್ಯವಾಗುತ್ತದೆ ; ಏಕೆಂದರೆ ಶೈಶವದಿಂದಲೂ ಇವನ್ನೇ ಮನಸ್ಸಿನಲ್ಲಿ ರೂಢಿಸಿಕೊಂಡಿರುತ್ತಾರೆ, ನಮ್ಮ ದೇಶದಲ್ಲಿ,
ಬಾಳಿನ ಗುರಿಯನ್ನು ಕಾಣದೆ, ಬದುಕಿನ ಅರ್ಥವನ್ನು ಅರಿಯದೆ ಜೀವನವನ್ನು ನಡೆಸುತ್ತಿರುವವರು ಬಹಳ ಮಂದಿ. ಇಂತಹವರು ಸಂಪತ್‌ಸಮೃದ್ಧ ರಾಷ್ಟ್ರಗಳಲ್ಲಿದ್ದರೆ, ಬಾಳು ಸುಲಭವಾಗುತ್ತದೆ. ದೈಹಿಕ ಅಗತ್ಯಗಳು ನಿರಾಯಾಸದಿಂದ ದೊರಕುತ್ತವೆ. ಆಗ ಮನಸ್ಸಿಗೆ ಹೆಚ್ಚು ಕೆಲಸವಿರುವುದಿಲ್ಲ. ಅಂತಹ ಮನಸ್ಸು, ಇಂತಹ ಬಾಳಿನ ಸಾರ್ಥಕತೆ ಏನು ? ನಶ್ವರವಾದ, ಎರಡು ಮುಖಗಳನ್ನು ಹೊಂದಿರುವ ಈ ಸುಖದಿಂದ, ಗತಿ ಏನು ? ಎನ್ನುವ ಹಿರಿಯ ಆತಂಕಕ್ಕೆ ಗುರಿಯಾಗುತ್ತದೆ. 'ಹರೇ ಕೃಷ್ಣ ! ಹರೇ ರಾಮ !' ಎಂದು ಭಜಿಸಿದವರನ್ನು ಅವರು ಹಿಂಬಾಲಿಸುತ್ತಾರೆ. ಏಕೆ ? ಆಗ 'ತಮ್ಮ ಹೊಣೆ ತೀರಿತು ; ಕೃಷ್ಣ ರಾಮ ಭವಿಷ್ಯವನ್ನು ಕಾಪಾಡುತ್ತಾರೆ' ಎನ್ನುವ ಮನೋಭಾವವು ದೃಢವಾಗಿ ಆತಂಕವು ನಶಿಸುತ್ತದೆ. ತುಸು ನೆಮ್ಮದಿಯೂ ದೊರಕುತ್ತದೆ. ಕೃಷ್ಣ, ರಾಮರು, ಇಂತಹವರ ಮನಸ್ಸಿನಲ್ಲಿ ಶೈಶವದಿಂದಲೂ ಅಚ್ಚಾಗುವುದಿಲ್ಲ. ಆದರೂ, ಕಡೆ ಮುಳುಗು ಹಾಕುವವನು ಸಿಗುವ ಹುಲ್ಲುಕಡ್ಡಿಯನ್ನು ಭದ್ರವಾಗಿ ಹಿಡಿಯುವಂತೆ, ಇವರುಗಳೂ 'ಹರೇ ಕೃಷ್ಣ ಹರೇ ರಾಮ' ವನ್ನು ಬಿಗಿಹಿಡಿಯುತ್ತಾರೆ. ಇದರಿಂದಲೇ ನೆಮ್ಮದಿಯೂ