ಮನಮಂಥನ
ದೊರಕುತ್ತದೆ. 'ನಾಮದ ಬಲವೊಂದಿದ್ದರೆ ಸಾಕೋ, ನೀನ್ಯಾಕೋ, ರಂಗ, ನಿನ್ನ ಹಂಗ್ಯಾಕೋ,' ಎಂದು ದಾಸರು ದೂರದೃಷ್ಟಿಯಿಂದ, ವಿಶಾಲ ಅರಿವಿನಿಂದ ಹಾಡಿದುದು ಈ ನಿದರ್ಶನದಿಂದ, ಸಾರ್ವಕಾಲಿಕ ಸತ್ಯವನ್ನು ಪ್ರತ್ಯಕ್ಷಿಸುತ್ತದೆ.
ನಮ್ಮ ಸಂಸ್ಕೃತಿಗೆ ಸಹಜವಾದ 'ಉಪದೇಶದ' ಈ ಹಲವಾರು ಮಾರ್ಗಗಳನ್ನೂ ನಮ್ಮ ಮನೋವೈದ್ಯರುಗಳು ಅತ್ಯವಶ್ಯಕವಾಗಿ ಬಳಸಿಕೊಳ್ಳಬೇಕು. ಬಳಸಿಕೊಳ್ಳುತ್ತಲೂ ಇದ್ದಾರೆ. ಆತಂಕದಿಂದ ನರಳುತ್ತಿರುವವರ, ನೆಂಟರು, ಇಷ್ಟರೂ, ಆಪ್ತಮಿತ್ರರೂ, ಈ ವಿಷಯವನ್ನು ತಿಳಿದುಕೊಂಡರೆ, ಸಮಾಜದ ಕ್ಷೇಮವು ರಕ್ಷಿಸಲ್ಪಡುತ್ತದೆ.
೬. ಉತ್ಕಟ ಆತಂಕ
ಈತನಕ ಆತಂಕದಿಂದ ಉಸಿರಾಡುವುದರ ಅಥವಾ ಹೃದಯದ ಕಾರ್ಯಗಳಲ್ಲಿ ಯಾವ ರೀತಿಯ ಭ್ರಮಾಪೂರ್ಣ ಅವ್ಯವಸ್ಥೆಗಳು ಆಗುತ್ತವೆ ಎಂಬುದನ್ನು ತಿಳಿದೆವು. ಆದರೆ ಹೀಗೆ ನರಳುತ್ತಿರುವ ರೋಗಿಯು ತನ್ನ ದಿನದಿನದ ಕಾರ್ಯಗಳನ್ನು ಹೇಗೋ ಒಂದು ರೀತಿಯಲ್ಲಿ ಮಾಡಿಕೊಂಡು ಹೋಗಲು ಸಾಧ್ಯವಾಗಿತ್ತು. ಆದರೆ ಆತಂಕವು ಅತ್ಯುತ್ಕಟವಾದಾಗ ದೈನಂದಿನ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ನಲವತ್ತರ ಪ್ರಾಯ ಅವನಿಗೆ ಸಾಕಷ್ಟು ಪುಷ್ಟವಾಗಿ ಬೆಳೆದಿದ್ದಾನೆ. ಚಿಕಿತ್ಸೆಗಾಗಿ ಬಂದವ ಕುರ್ಚಿಯ ಮೇಲೆ ಸ್ವಸ್ಥವಾಗಿ ಕುಳಿತುಕೊಳ್ಳಲಿಲ್ಲ. ಕುರ್ಚಿಯ ಅಂಚಿನ ಮೇಲೆ ಅರೆಕ್ಷಣ ಸೆಟೆದು ಕೂರುತ್ತಾನೆ. ತಟ್ಟಂತ ಎದ್ದು ಅರೆಕ್ಷಣ ನಿಲ್ಲುತ್ತಾನೆ. ನಂತರ ತಿರುಗಿ ಕೂರುತ್ತಾನೆ. ಎರಡು ಮಾತುಗಳನ್ನು ಆಡುತ್ತಾನೆ. ಸುತ್ತಲೂ ಬಿರಿ ಬಿರಿ ನೋಡುತ್ತಾನೆ. ಇನ್ನು ಯಾವುದೋ ಮಾತು ಆಡಲು ಪ್ರಾರಂಭಿಸುತ್ತಾನೆ. ಅದನ್ನೂ ಅರ್ಧದಲ್ಲಿ ನಿಲ್ಲಿಸುತ್ತಾನೆ. ನಿಮಿಷಕ್ಕೆ ಎರಡು ಬಾರಿ ಬಾಯನ್ನು ಒರೆಸಿಕೊಳ್ಳುತ್ತಾನೆ. ಹಣೆಯನ್ನು ಆಗಿಂದಾಗ್ಗೆ ಒರೆಸಿಕೊಳ್ಳುತ್ತಾನೆ. ಮುಳ್ಳಿನ ಮೇಲೆ ಕೂತಹಾಗೆ ಕೂತಿದ್ದಾನೆ.
ನಯವಾಗಿ ಮಾತನಾಡಿ, ವಿನಯದಿಂದ ಆದರಿಸಿ, ಸಮಾಧಾನವನ್ನು ಮಾಡಿದ ಮೇಲೆ, ಅವನ ಗೋಳು ಏನು? ಅವನ ನರಳಾಟ ಎಂತದು ಎಂದು ತಿಳಿಯಲು ಪ್ರಯತ್ನಿಸಲಾಯಿತು. ಸ್ವಲ್ಪಕಾಲ ತಾಳ್ಮೆಯಿಂದ ನಡೆಸಲಾಯಿತು. ಆದರೆ ರೋಗಿಯು ಏನನ್ನೂ ನೆಟ್ಟಗೆ ಹೇಳಲೊಲ್ಲ. ಡಾಕ್ಟರ ತಾಳ್ಮೆ ತಪ್ಪಿತು. ಅವರೂ ಉಪ್ಪು ಹುಳಿ ತಿಂದ ಮನುಷ್ಯರು. 'ತೆಪ್ಪಗೆ ಎರಡು ನಿಮಿಷ ಕೂತುಕೊಂಡು