ಮನಮಂಥನ
ತೌರಿನ ಒಂದು ಕಾಲದ ವೈಭವವನ್ನೂ, ಸ್ವಚ್ಛಂದ ಮಜದ ಬಾಳನ್ನೂ ತಾಯಿಯು ಮರೆತಿರಲಿಲ್ಲ. ಹೆಣ್ಣುಮಕ್ಕಳೆದುರಿಗೆ ಗತವೈಭವವನ್ನು ಹೇಳಿಕೊಂಡು ಆಕೆ ಹಿಗ್ಗುತ್ತಿದ್ದಳು. ಆರುನೂರು ಸಂಪಾದಿಸುತ್ತಿದ್ದ ಗಂಡ ಆಕೆಯ ಪಾಲಿಗೆ ಕಡು ಬಡವ. ಪ್ರತ್ಯಕ್ಷ ನಡವಳಿಕೆಯಲ್ಲಿ ಸ್ಪಷ್ಟವಾಗಿ ತೋರಿಸದೆ ಇದ್ದರೂ, ಗಂಡನನ್ನು ಸ್ವಲ್ಪ ಹೀನವಾಗಿ ಕಾಣುತ್ತಾಳೆ ಎಂಬುದು ಎಲ್ಲರಿಗೂ ತಿಳಿದಿತ್ತು. ವೆಂಕಟಯ್ಯನಿಗೂ ಕೂಡ.
ವಿದೇಶಕ್ಕೆ ಹೇಗಾದರೂ ಹೋಗಿ, ಪ್ರೌಢ ಶಿಕ್ಷಣವನ್ನು ಪಡೆದು ಬಂದು, ಚಾಕರಿಯ ಅಂತಸ್ತನ್ನು ಎತ್ತರಿಸಿಕೊಳ್ಳಬೇಕು ಎಂದು ಕೆಲವು ವರ್ಷಗಳಾದ ಮೇಲೆ ವೆಂಕಟಯ್ಯ ನಿರ್ಧರಿಸಿದ. ಆದರೆ ಈ ಇಳಿವಯಸ್ಸಿನಲ್ಲಿ ಓದಹೋಗುವುದು, ಪ್ರೌಢ ವ್ಯಾಸಂಗದಲ್ಲಿ ಉತ್ತೀರ್ಣನಾಗುವುದು ನನ್ನಿಂದ ಸಾಧ್ಯವೇ ಎಂಬ ಶಂಕೆಯು ವೆಂಕಟಯ್ಯನನ್ನು ಕಾಡುತ್ತಲಿತ್ತು. ಆದರೆ ದೊಡ್ಡ ಅಧಿಕಾರಿ' ಎಂಬ ಪ್ರಶಸ್ತಿಯನ್ನು ಹೆಂಡತಿಯ ಮುಂದೆ ಹಿಡಿದರೆ, ಸಂಸಾರದಲ್ಲಿ ಹೆಚ್ಚು ಸುಖ ದೊರಕಬಹುದು ಎಂದವನ ಹಂಬಲ, ಕಡೆಗೂ ಸರ್ವ ಸಾಹಸಪಟ್ಟು, ತನ್ನ ಸ್ವಂತ ಖರ್ಚಿನಲ್ಲಿ ವಿದೇಶೀ ವ್ಯಾಸಂಗಕ್ಕೆ ತೆರಳಿದ.
ಇತ್ತ ಮೋಜು ಜೀವನವನ್ನು ಬಯಸಿದ್ದ ಹೆಂಡತಿ, ಮರೆ ಮರೆಯಲ್ಲಿಯೆ ಮಜ ಜೀವನವನ್ನು ನಡೆಸುತ್ತಿದ್ದಳು. ವಿದೇಶಕ್ಕೆ ಗಂಡ ಹೋದ ಮೇಲೆ, ಅಡ್ಡಿ ಆತಂಕಗಳು ದೂರವಾದುವು ; ಸ್ಟೇಚ್ಛಾಚಾರಿಯಾದಳು, ಕೇರಿಯಲ್ಲೆಲ್ಲ ಗುಲ್ಲು ಹರಡಿತು. 'ಮನೆಯಲ್ಲಿರುವವರೆಲ್ಲಾ ಸವತಿಯರೇ ಕಣೋ !' ಎಂದು ಪೋಲೀ ಹುಡುಗರು ಬಾಯಿಗೆ ಬಂದಂತೆ ಆಡತೊಡಗಿದರು. ಈ ಸುದ್ದಿಯನ್ನು ಹಿತೈಷಿಗಳೊಬ್ಬರು, ಕೇಬಲ್ ಮೂಲಕ ವೆಂಕಟಯ್ಯನಿಗೆ ತಿಳಿಸಿದರು. 'ಬೇಗ ಹಿಂತಿರುಗಿ ಬಾ, ಇಲ್ಲದಿದ್ದರೆ ಹೆಣ್ಣು ಮಕ್ಕಳ ಭವಿಷ್ಯ ಬರಡಾಗುತ್ತದೆ' ಎಂದು ಬುದ್ಧಿವಾದದ ಕಾಗದವನ್ನು ಬರೆದರು.
ವಿದೇಶೀ ಪ್ರೌಢ ವ್ಯಾಸಂಗವು ಆ ವಯಸ್ಸಿನಲ್ಲಿ ಕಠಿಣ ಎಂದು ಆ ವೇಳೆಗೆ ವೆಂಕಟಯ್ಯನಿಗೆ ಗೊತ್ತಾಗಿತ್ತು. ಹುಟ್ಟೂರಿನಿಂದ ಈ ಕೆಟ್ಟ ಸುದ್ದಿಯೂ ಬಂದಿತು. ಇದನ್ನೇ ನೆಪಮಾಡಿಕೊಂಡು ವೆಂಕಟಯ್ಯ ಓದಿಗೆ ತುಂಡುಹಾಕಿ, ಮನೆಗೆ ದುಡುಂ ಎಂದು ಹಿಂತಿರುಗಿದ.
ಇಷ್ಟೆಲ್ಲಾ ಕಷ್ಟ ಕಾರ್ಪಣ್ಯ ; ಅವಮಾನ ಬೇಸರ ; ಕೋಪ ತಾಪ ; ಎಲ್ಲವೂ ಒಟ್ಟಿಗೆ ಉಂಟಾದರೆ, ಅವುಗಳ ಪರಿಹಾರ ಮಾರ್ಗವು ಕಾಣದೆ ಇದ್ದರೆ, ಯಾವನ ಮನಸ್ಸು ತಾನೇ ನಿಶ್ಚಿಂತವಾಗಿರಲು ಸಾಧ್ಯ ? ಊರಿಗೆ ಹಿಂತಿರುಗಿದವನು