ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೬೫

ಚಾಕರಿಗೆ ಹಾಜರಾಗಲಿಲ್ಲ. ಹೇಗೂ ಇನ್ನೂ ಒಂದು ವರ್ಷ ರಜವಿತ್ತು. ನಿಂತಲ್ಲಿ ಕ್ಷಣಕೂಡ ನಿಲ್ಲಲಾರ. ಸರಿಯಾಗಿ ಕುಳಿತು ಎರಡು ತುತ್ತು ಉಣಲಾರ. ನಿದ್ರೆಯನಕ ಅವನ ಪಾಲಿಗೆ ಹಳೆಯ ಕನಸಾಗಿತ್ತು. ಆಶಾಗೋಪುರಗಳೆಲ್ಲವೂ ಕಳಚಿ ಬಿದ್ದಿದ್ದುವು. ಉಳಿದಿದ್ದುದು ಚಾಕರಿ, ಮತ್ತು ಸಂಸಾರ. ಕೆಟ್ಟದುದರಲ್ಲಿ ಮಧ್ಯಸ್ಥ ಎಂಬಂತೆ, ಉಳಿದುದನ್ನು ಉಳಿಸಿಕೊಂಡರೆ ಸಾಕು ಎಂದನಿಸಿತ್ತು.

ಅವನ ಹೇಳಿಕೆಯಿಂದ ಅರ್ಧ; ನೆಂಟರು ಸ್ನೇಹಿತರು ಹೇಳಿದುದರಿಂದ ಇನ್ನರ್ಧ; ಅವನ ಬೇನೆಯ ಕಾರಣಗಳನ್ನು ತಿಳಿಯಲಾಯಿತು. ಆತಂಕವು ಅತ್ಯುತ್ಕಟವಾಗಿದ್ದರೂ, ಮನಸ್ಸು ಇನ್ನೂ ಮುರಿದು ಹೋಗಿಲ್ಲ ಎನ್ನುವ ಭರವಸೆಯು ಇತ್ತು. ಅದುದರಿಂದ ಚಿಕಿತ್ಸೆಯು ಕೆಲವು ತಿಂಗಳು ಹಿಡಿದರೂ, ಅಂತಿಮವಾಗಿ ಗುಣಪಡಿಸುತ್ತದೆ ಎಂದು ಖಂಡಿತವಾಯಿತು.

ಡಾಕ್ಟರ್‌ ರೇಗಿ ಮಾತನಾಡಿದ Shockನಿಂದ ರೋಗಿಯು, ಹೇಳಿದ್ದನ್ನು ಕೇಳುವ ಸ್ಥಿತಿಗೆ ಬಂದಿದ್ದ. ಹೇಳಿದುದನ್ನು ಕೇಳಿಸಿಕೊಂಡರೂ ವಿಷಯವು ಮನದಟ್ಟಾಗುತ್ತದೆ ಎನ್ನುವ ಧೈರ್ಯವಿರಲಿಲ್ಲ. ಆದಕಾರಣ ಔಷಧಿಗಳೂ ಅಗತ್ಯವಾಗಿದ್ದವು. ಸಾಕಷ್ಟು ಧಾರಾಳವಾಗಿ ಶಾಂತಿಕಾರಕ ಔಷಧಿಗಳನ್ನು ಉಪಯೋಗಿಸಲಾಯಿತು. ಕೆಲವು ದಿನಗಳಲ್ಲಿ ನಿದ್ರೆಯನ್ನು ಮಾಡುವಂತಾದ. ಹಸಿವು ಉಂಟಾಗಿ ಉಣ್ಣಲೂ ಆರಂಭಿಸಿದ. ಅನಂತರ ಡಾಕ್ಟರು ಹೇಳಿದುದನ್ನು ಗ್ರಹಿಸುವ ಶಕ್ತಿಯನ್ನು ಪಡೆದುಕೊಂಡ. ವಿದ್ಯಾವಂತ ; ಸ್ವಾಭಾವಿಕವಾಗಿ ಜಾಣ; ಆಸೆಗೆ ಮಿತಿಯಿಲ್ಲ ಎಂಬುದನ್ನು ಅರಿತುಕೊಂಡ. ವಾಸ್ತವಿಕ ಬಾಳಿಗೂ, ಮನಸ್ಸಿನ ಆಶಾಬಾಳಿಗೂ ಅಜಗಜಾಂತರವಿದೆ ಎಂಬುದನ್ನು ಹಲವಾರು ಗೆಳೆಯರ ನಿದರ್ಶನದಿಂದ ವಿವರಿಸಿದಾಗ, “ಅಂದ ಮೇಲೆ ನನ್ನ ಬಾಳೇ ವಾಸಿಯಲ್ಲವೆ ? ಎಂದು ಹೇಳಿದ.

ಹೆಂಡತಿ ಮಕ್ಕಳಿಗೂ ಇವನ ಬೇನೆಯ ರೀತಿಯಿಂದ ಹೆದರಿಕೆಯುಂಟಾಗಿತ್ತು. ಇವನು ದುಡಿಯುವ ತನಕ ಅವರದೂ ಒಂದು ಬಾಳು, ಇವನೇನಾದರೂ ತಲೆಕೆಡಿಸಿಕೊಂಡು ಚಾಕರಿ ಕಳೆದುಕೊಂಡರೆ, ಅವರ ಪಾಡು ನಾಯಿಪಾಡು ಎಂಬ ಅರಿವು ಮೂಡಿತ್ತು. ಮೋಜು ಜೀವನದ ಮಾಯಾಜಾಲವು ಹರಿಯತೊಡಗಿತು. ಹಳೇ ಗಂಡನ ಪಾದವೇ ಗತಿ ಎಂದು ಅನಿಸಿತು. ಹಾಗಾಗಿ ಅನುಕಂಪದ ನಡವಳಿಕೆಯನ್ನು ಸಂಸಾರದಲ್ಲಿ ವೆಂಕಟಯ್ಯ ಕಾಣತೊಡಗಿದ, ಹಳೆಯದನ್ನೆಲ್ಲಾ ಮರೆತ.

ಕೇವಲ ಎರಡು ಮೂರು ತಿಂಗಳುಗಳಲ್ಲಿ 'ಇನ್ನು ಮುಂದೆ ಚಾಕರಿಗೆ