ಮನಮಂಥನ
ಹೋಗುತ್ತೇನೆ, ದಕ್ಷತೆಯಿಂದ ಕೆಲಸ ಮಾಡುವ ಭರವಸೆ ಹುಟ್ಟಿದೆ' ಎಂದ. ಡಾಕ್ಟರ ಒಪ್ಪಿಗೆಯನ್ನು ಪಡೆದು ಚಾಕರಿಯ ಮೇಲೆ ಹಾಜರಾದ. ಕೆಲವು ದಿನಗಳಲ್ಲಿ ದಕ್ಷತೆಯಿಂದ ಕೆಲಸವನ್ನೂ ಮಾಡುವಂತಾದ.
ಇಷ್ಟು ಬೇಗ ಗುಣವಾಗುತ್ತಾನೆ ಎಂದು ಡಾಕ್ಟರಿಗೂ ಅನಿಸಿರಲಿಲ್ಲ. ಆದರೂ ದೈವಕೃಪೆಯೊಂದಿದ್ದರೆ ಆತಂಕವು ಎಷ್ಟೇ ಉತ್ಕಟವಾಗಿದ್ದರೂ, ನಿರೀಕ್ಷಣೆಗಿಂತ ಶೀಘ್ರವಾಗಿ ಗುಣಹೊಂದುತ್ತದೆ.
೭. ಆತಂಕದ ಘೋರ ಪರಿಣಾಮ
ಆತಂಕವು ಅತ್ಯುತ್ಕಟವಾದಾಗ, ಮನಸ್ಸು ತೀವ್ರ ಭ್ರಮೆಯಿಂದ ತುಂಬಿಕೊಂಡು, ವಾಸ್ತವಿಕ ಪ್ರಪಂಚದ ಅರಿವೇ ಇಲ್ಲದಂತಾಗಬಹುದು.
ಒಂದು ಬೆಳಗಿನ ಝಾವ ಸಂಸ್ಕೃತದ ಹಳೆಯ ಮಾಸ್ತರು ಮನೆಗೆ ಬಂದರು. ತುಂಬಾ ಖಿನ್ನರಾಗಿದ್ದರು. 'ನಿನಗೆ ಪೊಲೀಸ್ ಕಮೀಷನರ ಪರಿಚಯವಿದೆಯಂತೆ, ಅವರಿಗೆ ಒಂದು ಮಾತು ಹೇಳಿ ನನಗೆ ಸಹಾಯ ಮಾಡಬೇಕು' ಎಂದು ಹೇಳುತ್ತಾ ಮಾತನ್ನಾರಂಭಿಸಿದುದು. ನನ್ನ ಕಿರಿಯ ಅಳಿಯ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾನೆ ; ಕಚೇರಿಗೂ ಹೋಗಿಲ್ಲ, ರಜಕ್ಕೂ ಬರೆದು ಹಾಕಿಲ್ಲ. ಅವನಿನ್ನೂ ಇದ್ದಾನೋ, ಆತ್ಮಹತ್ಯೆಯನ್ನೇ ಮಾಡಿಕೊಂಡಿದ್ದಾನೋ, ಯಾವುದೂ ತಿಳಿಯದು. ನಮಗೆ ತಿಳಿದ ಹಾಗೆ, ಅಂತಹ ಭೀಕರವಾದ ಕಷ್ಟವಾಗಲೀ ಕಾರ್ಪಣ್ಯವಾಗಲೀ ಅವನಿಗಿರಲಿಲ್ಲ. ಯಾಕೆ ಹೀಗಾಯಿತೋ ದೇವರೇ ಬಲ್ಲ. ಮಗಳನಕ ಆವತ್ತಿನಿಂದ ತೊಟ್ಟು ನೀರು ಕುಡಿದಿಲ್ಲ. ಗೊಳೋ ಎಂದು ಅಳುತ್ತಾ ಇದಾಳೆ. ಪೊಲೀಸ್ ಕಂಪ್ಲೆಂಟ್ ಕೊಟ್ಟರೆ ಊರಿಗೆಲ್ಲಾ ಸುದ್ದಿ ಹರಡುತ್ತೆ, ನಮ್ಮ ಮನೆತನದ ಮಾನ ಹೋಗಿಬಿಡಿತ್ತೆ. ಪೊಲೀಸ್ ಕಮೀಷನರಿಗೆ ಈ ವಿಷಯವನ್ನು ತಿಳಿಸಿ, ನನ್ನ ಅಳಿಯನನ್ನು ಗುಟ್ಟಾಗಿ ತಲಾಷ್ ಮಾಡುವಂತೆ, ಕೇಳಬೇಕಪ್ಪಾ, ಅಷ್ಟು ಮಾಡಿ ಕೊಡ್ತೀಯ?' ಎಂದು ಗೋಗರೆಯುತ್ತಾ ಕೇಳಿದರು. 'ಇದಕ್ಕೇನು ಮುಟ್ಟಿಸಬೇಕು? ನಿಮ್ಮ ಮಗಳು ಅಂದ ಮೇಲೆ ನನಗೂ ಕಿರಿಯ ತಂಗಿ ಇದ್ದ ಹಾಗೆ, ಖಂಡಿತವಾಗಿ ಕೇಳಿಕೋತೀನಿ' ಎಂದು ಹೇಳಿ, ಅಳಿಯನ ವಿವರಗಳನ್ನು ಮಾಸ್ತರಿಂದ ಪಡೆದು, ಕಮೀಷನ ಬಳಿಗೆ ಹೋದೆ. ಎಲ್ಲಾ ವಿಷಯವನ್ನೂ ಅವರಿಗೆ ತಿಳಿಸಿದೆ. ಪ್ರಚಾರವಾಗದ ಹಾಗೆ ತಲಾಷ್ ಮಾಡಿಸುತ್ತೀನಿ ಎಂದು ಅವರೂ ಒಪ್ಪಿಕೊಂಡರು.
ಮೂರನೆಯ ಸಂಜೆ ಸಂಸ್ಕೃತದ ಮಾಸ್ತರು ತಿರುಗಿ ಬಂದರು. 'ತಾನಾಗಿಯೇ