ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೬೭

ಕಿರಿಯ ಅಳಿಯ ಮನೆಗೆ ಬಂದಿದ್ದಾನೆ, ಯಾರೋ ಮಂಕು ಬೂದಿಯನ್ನು ಎರಚಿ ಕರೆದುಕೊಂಡು ಹೋಗಿದ್ದರು ಅಂತ ಕಾಣುತ್ತೆ, ಈಗಲೂ ಮಂಕು ಹಿಡಿದವನಂತೆಯೇ ಇದ್ದಾನೆ, ಒಂದು ಮಾತನ್ನೂ ಆಡುವುದಿಲ್ಲ, ಮುಖದಲ್ಲಿ ಕಳೆಯೇ ಇಲ್ಲ. ನನ್ನ ಜತೆ ಈಗಲೇ ಬಂದು ಪರೀಕ್ಷೆ ಮಾಡಪ್ಪ' ಎಂದು ಕೇಳಿಕೊಂಡರು. ಅವರೊಡನೆ ಹೋಗಿ ರೋಗಿಯನ್ನು ಪರೀಕ್ಷೆ ಮಾಡಿದೆ. 'ತೀವ್ರ ರೀತಿಯ ಭ್ರಮೆಯು ಅವನನ್ನು ಆವರಿಸಿದೆ. ತಾನು ಯಾರು, ಏನು, ಎಲ್ಲಿದ್ದೇನೆ, ಎನ್ನುವುದೂ ಮರೆತುಹೋಗಿದೆ. ಅಂದರೆ ಯಾವುದೋ ಆತಂಕವು ಅತ್ಯುಗ್ರವಾಗಿದೆ' ಎನ್ನುವುದು ಸ್ಪಷ್ಟವಾಯಿತು. ಗಾಢ ನಿದ್ರೆ ಬರುವಂತೆ ಚಿಕಿತ್ಸೆ ನಡೆಸಿ, 'ನಾಳೆ ಬಂದು ನೋಡುತ್ತೇನೆ' ಎಂದು ಹೇಳಿ ಹಿಂತಿರುಗಿದೆ. ಪೊಲೀಸ್ ಕಮೀಷನರಿಗೆ ಈ ಸುದ್ದಿಯನ್ನು ಫೋನ್ ಮೂಲಕ ತಿಳಿಸಿದೆ.

ಮಾರನೆಯ ಬೆಳಿಗ್ಗೆ ಅವನನ್ನು ನೋಡಹೋದೆ. ಹಿಂದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದನಾದರೂ ಮಧ್ಯೆಮಧ್ಯೆ ಕನವರಿಸಿ ಬೆಚ್ಚುತ್ತಿದ್ದನೆಂಬುದು ತಿಳಿಯಿತು. ನಾನು ಹೋಗುವ ವೇಳೆಗೆ ಅವ ಎಚ್ಚರಗೊಂಡಿದ್ದ. ಕೊಟ್ಟ ತಿಂಡಿ ಕಾಫಿಯನ್ನು ಯಾಂತ್ರಿಕವಾಗಿ ತಿಂದು ಮುಗಿಸಿದ್ದ. ಎರಡು ಮೂರು ದಿನಗಳು, ಚೆನ್ನಾಗಿ ನಿದ್ರೆ ಬರುವಂತೆ ಮಾಡಲಾಯಿತು. ಆನಂತರ ಅವನ ಮುಖದಲ್ಲಿ ಜೀವಕಳೆಯು ಬರಲಾರಂಭಿಸಿತು. ಆಗ ಅವನೊಡನೆ ಮಾತನಾಡಿ, ಅವನಿಂದ ಉತ್ತರವನ್ನು ಪಡೆಯಲು ಸಾಧ್ಯವಾಯಿತು.

ತಾಯ್ತಂದೆಯರನ್ನು ಚಿಕ್ಕಂದಿನಲ್ಲಿ ಕಳೆದುಕೊಂಡು, ದೊಡ್ಡ ಅಣ್ಣ, ಅತ್ತಿಗೆಯರ ಆಶ್ರಯದಲ್ಲಿ ಓದಿದ್ದ. ಕಾಲೇಜ್ ವ್ಯಾಸಂಗದ ಹಂತದಲ್ಲಿ ಎರಡು ಮೂರು ಬಾರಿ ಕುಂಟಿದಾಗ, ಇನ್ನು ಓದು ಸಾಕು, ಅಣ್ಣ ಅತ್ತಿಗೆಯರಿಗೆ ಹೊರೆಯಾಗುವುದು ಬೇಡ, ಎಂದಂದುಕೊಂಡ. ಸರ್ಕಾರಿ ಚಾಕರಿಯೊಂದನ್ನು ಹಿಡಿದ. ಅಣ್ಣ ಅತ್ತಿಗೆಯರು ತನ್ನ ಪಾಲಿಗೆ ಪ್ರತ್ಯಕ್ಷ ದೇವರು ಎಂದುಕೊಂಡಿದ್ದ. ಅಷ್ಟು ಆದರದಿಂದ ಅವರುಗಳು ಆರೈಕೆ ಮಾಡಿ ಬೆಳೆಸಿದ್ದರು. ಮದುವೆಯ ಪ್ರಸ್ತಾಪವು ಬಂದಾಗ 'ನಿನಗೆ ಸೂಕ್ತಕಂಡ ಹೆಣ್ಣನ್ನು ಮಾಡಿಕೋ' ಎಂದು ಸ್ವಾತಂತ್ರ್ಯವನ್ನೂ ಕೊಟ್ಟಿದ್ದರು. ಉದ್ಯೋಗಸ್ಥ ತರುಣಿಯೊಬ್ಬಳನ್ನು ಮದುವೆಯಾಗಲು ಒಪ್ಪಿಕೊಂಡ, ಅಣ್ಣ, ಅತ್ತಿಗೆಯರೂ ಸಂಭ್ರಮದಿಂದ ಮದುವೆ ಮಾಡಿದರು. ಅವಿಭಕ್ತ ಕುಟುಂಬ.ಹಂಚಿಕೊಳ್ಳುವುದಕ್ಕೆ ಯಾವ ಆಸ್ತಿಯು ಇರದಿದ್ದರೂ ಅವಿಭಕ್ತ ಕುಟುಂಬ, ಆದುದರಿಂದಲೇ ಅನ್ನೋನ್ಯವಾಗಿಯೂ ಇದ್ದರು. ಗಂಡ ಹೆಂಡತಿ ಇಬ್ಬರೂ ದುಡಿಯುವುದಕ್ಕೆ ಹೋಗುತ್ತಿದ್ದುದರಿಂದ, ಸಂಸಾರದ ನಿರ್ವಹಣೆಯ ಹೊಣೆಯು