ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೭೫

ನಿಜವಾಗಿ ಬ್ಲಡ್‌ ಪ್ರೆಷರ್ ಬೇನೆಯಿಂದ ನರಳುವವರು ಕೂಡ, ನರಸಪ್ಪನಷ್ಟು ಬೆದರುವುದಿಲ್ಲ. ಬೇನೆಗಿಂತಲೂ, ಬೇನೆಯು ಬಂದುಬಿಡ್ತಪ್ಪ ಎನ್ನುವ ಭಯವೇ, ಹೆಚ್ಚು ಕಾಟ ಕೊಡುತ್ತದೆ.

ವೈದ್ಯಜನಿಕ ಆತಂಕವಿದು. ಆದರೆ ಇದನ್ನು ತಪ್ಪಿಸುವ ಬಗೆ ಹೇಗೆ? ನರಸಪ್ಪನ ಮನೆ ವೈದ್ಯರು ದಿಟವನ್ನೇ ಹೇಳಿದ್ದರು. ಸಂಶಯಾತ್ಮಾ ನರಸಪ್ಪದಲ್ಲಿ ಈ ಪರಿಣಾಮವಾಯಿತು. ಪರಿಹಾರ ! ಸಂಶಯವು ನಿವಾರಣೆಯಾಗುವಂತೆ ಪೂರ್ಣ ಜ್ಞಾನಾರ್ಜನೆ. ಅರ್ಧಜ್ಞಾನವು ಎಂದೂ ಅಪಾಯಕಾರಿ,

ಕ್ಯಾನ್ಸರಿನ ಕಪಿನೀಪತಿ

ಕ್ಯಾನ್ಸರ್ ರೋಗದಂತಹ ದರಿದ್ರ ಬೇನೆ ಮತ್ತೆ ಯಾವುದೂ ಇರಲಾರದು. ಕ್ಯಾನ್ಸರ್ ಎನ್ನುವ ಹೆಸರು, ಕರ್ಕಾಟಕ ರಾಶಿಯನ್ನು ಸೂಚಿಸುವ ಕರ್ಕಾಟಕವೆಂಬ ಎಂಟು ಕೊಂಡಿಗಳುಳ್ಳ ಅವುಗಳಿಂದ ಬಲು ಭದ್ರವಾಗಿ ಕಚ್ಚಿ ಹಿಡಿಯುವ ಪ್ರಾಣಿಯನ್ನು ಈ ಬೇನೆಗೆ ಹೋಲಿಸಿದ್ದುದರಿಂದಲೇ, ದೇಹದ ಯಾವುದಾದರೂ ಒಂದು ಅಂಗದಲ್ಲಿ ಇದು ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗುತ್ತದೆ. ಅನಂತರ ಎಡೆತಡೆಯಿಲ್ಲದೆ ಬೆಳೆಯುತ್ತಾ ಹೋಗುತ್ತದೆ. ಸುತ್ತುಮುತ್ತಲಿನ ಸರ್ವ ಟಿಷ್ಯಗಳಲ್ಲಿಯೂ ಬೇರೂರುತ್ತದೆ. ತನ್ನ ಬೆಳವಣಿಗೆಗೆ ಅಗತ್ಯವಾದ ಆಹಾರಪದಾರ್ಥಗಳನ್ನು ತಾನು ನೆಲೆಸಿದ ದೇಹದಿಂದ ಕ್ಯಾನ್ಸರ್ ಹೀರಲಾರಂಭಿಸುತ್ತದೆ. ಕಡೆಗೆ ದೇಹವೇ ಹಿಪ್ಪೆ ಹೀರೇಕಾಯಾಗಿಬಿಡುತ್ತದೆ. ಸಾವು ಬಂದಾಗಲೇ ಬೇನೆಯಿಂದ ಮುಕ್ತಿ, ಈ ಅಂತರದಲ್ಲಿ ರೋಗಿಯನ್ನು ನರಕಯಾತನೆಗೆ ಗುರಿಪಡಿಸುತ್ತದೆ. ಈ ಬೇನೆಯಿಂದ ತೀವ್ರವಾಗಿ ನರಳುತ್ತಿರುವವರನ್ನು ಕಂಡರೆ, ಯಾವ ಕಷ್ಟವನ್ನಾದರೂ ದೇವರು ಕೊಡಲಿ, ಆದರೆ ಇದೊಂದು ಬೇನೆಯು ಬೇಡ ಎನ್ನುವಂತಾಗುತ್ತದೆ.

ಆದರೆ ಈ ಬೇನೆಯ ಮೊದಮೊದಲ ಹಂತದಲ್ಲಿ, ಸೂಕ್ತ ಶಸ್ತ್ರಚಿಕಿತ್ಸೆಯಿಂದ ಎಕ್ಸ್‌ರೇ ಮತ್ತು ರೇಡಿಯಂಗಳಿಂದ, ಮತ್ತು ಹಲವು ಔಷಧಿಗಳಿಂದ, ಸಂಪೂರ್ಣವಾಗಿ ಗುಣಪಡಿಸಬಹುದು. ಹಾಗೆ ಯಾಕೆ ಚಿಕಿತ್ಸೆಯನ್ನು ಮೊದಮೊದಲ ಹಂತದಲ್ಲಿ ಮಾಡುವುದಿಲ್ಲ ? ಬೇನೆಯ ಮೊದಲ ಹಂತದಲ್ಲಿ ರೋಗಿಗೆ ಯಾವ ವಿಶೇಷ ತೊಂದರೆಯೂ ಆಗುವುದಿಲ್ಲ. ಆದುದರಿಂದ ಅವ ಡಾಕ್ಟರ ಬಳಿಗೆ ಏಕೆ ಹೋಗುತ್ತಾನೆ? ಹೋಗುವುದಿಲ್ಲ. ರೋಗವು ಬಲಿತ ಮೇಲೆ ಡಾಕ್ಟರನ್ನು ಕಾಣುತ್ತಾನೆ. ಬಲಿತ ಆ ಹಂತದಲ್ಲಿ ಚಿಕಿತ್ಸೆಯು ಶಮನ ಮಾಡಬಹುದೇ ವಿನಹಾ ಗುಣ ಪಡಿಸುವುದಿಲ್ಲ.