೭೯
'ನಿಮ್ಮ ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡು ಕಾಟ ಕೊಡುವುದು ಏನಾಯಿತು ? ಎಂದು ಮನೆಯ ಡಾಕ್ಟರು ವಿಚಾರಿಸಲಿಲ್ಲ. ಕಪಿನೀಪತಿರಾಯನಿಗೆ ಅದರ ನೆನಪೇ ಇರಲಿಲ್ಲ.
ಅಂದರೆ ಆತಂಕದಿಂದಲೇ ಕ್ಯಾನ್ಸರಿನ ಮೊದಲ ಹಂತದ ಚಿಹ್ನೆಗಳು ತೋರಿ ಬರಬಹುದು. ಕ್ಯಾನ್ಸರಿನ ಬಗೆಯ ವಿಪುಲ ಪ್ರಚಾರದಿಂದ, ಆತಂಕವು ಈ ರೂಪನ್ನು ಧರಿಸಬಹುದು-ಕ್ಯಾನ್ಸರ್ ಬಗೆಯ ಪ್ರಬಲ ಪ್ರಚಾರದಿಂದ, ಹಲವಾರು ಮಂದಿಯ ಆತಂಕವು ಕ್ಯಾನ್ಸರಿನ ಭಯವಾಗಿ ಪರಿಣಮಿಸಬಹುದು. ಆದರೂ ಪ್ರಚಾರವನ್ನು ಮಾಡಲೇಬೇಕು. ಏಕೆಂದರೆ ಕ್ಯಾನ್ಸರ್ ಬೇನೆಯಿಂದ ಒಬ್ಬರನ್ನು ಉಳಿಸಿದರೂ ಸಾರ್ಥಕ. ಹತ್ತೂ ಜನರು ಭಯಪಟ್ಟರೂ ಪರವಾಗಿಲ್ಲ. ಅದರಿಂದ ಅತಿಯಾದ ದುರಂತವಾವುದೂ ಅರಿವಾಗುವುದಿಲ್ಲ.
ಜಾಹೀರಾತುಗಳ ಅತಂಕ
'ಗುಪ್ತವ್ಯಾಧಿಗಳಿಂದ ಏಕೆ ನರಳುವಿರಿ ? ನಮ್ಮ......ನ್ನೇ ಸೇವಿಸಿರಿ' ಎಂದು ಗೋಡೆಗೋಡೆಗಳ ಮೇಲೂ ಭಿತ್ತಿಪತ್ರಗಳನ್ನು ಕಣ್ಣಿಗೆ ಬಡಿಯುವಂತೆ ಜಾಹೀರಾತು ಮಾಡುತ್ತಾರೆ. 'ನಮ್ಮ.....ನ್ನು' ಮಾರುವಾಗ ಪುಟ್ಟ ಹೊತ್ತಗೆಗಳನ್ನೂ ಪುಕಟ್ಟು ಕೊಡುತ್ತಾರೆ. ಆ ಹೊತ್ತಗೆಗಳಲ್ಲಿ ಏನೇನೆಲ್ಲಾ ಭಯ ಮೂಡಿಸುವ ವಿಷಯಗಳಿರುತ್ತವೆ ಅಂತ. 'ದುರಭ್ಯಾಸಗಳಲ್ಲಿ ತೊಡಗಿದ್ದರೆ, ನಿಮ್ಮ ಕಣ್ಣು ಕಾಲಕ್ರಮೇಣ ಇಂಗಿ ಹೋಗುತ್ತದೆ, ಕೂದಲು ನರೆತು ಬಿದ್ದೇ ಹೋಗುತ್ತದೆ, ಮೂಗು ಚಪ್ಪಟೆಯಾಗುತ್ತದೆ, ಬಾಯಿ ಬೊಚ್ಚಾಗುತ್ತದೆ, ಮನಸ್ಸು ಸಡಿಲಗೊಂಡು ಯಾವ ನಿರ್ಧಾರವನ್ನೂ ಮಾಡಲು ಆಗುವುದಿಲ್ಲ. ವಂಶಾಭಿವೃದ್ಧಿಯೂ ಆಗಲಾರದು, ಅಪ್ಪಿ ತಪ್ಪಿ ಆದರೂ ಅವಲಕ್ಷಣ ಕುಬ್ಬಗಳು ! ಸೊಂಟವು ಬಗ್ಗೆ ಹೋಗುತ್ತದೆ.'
ಇಂತಹ ಘೋರ ದುಷ್ಪರಿಣಾಮಗಳನ್ನು ತಪ್ಪಿಸಬೇಕಾದರೆ, ಪೂರ್ಣ ಯೌವನವನ್ನು ಯಯಾತಿಯಂತೆ ಬಲು ಕಾಲ ಪಡೆಯಬೇಕಾದರೆ, 'ನಮ್ಮ....ನ್ನು' ಸೇವಿಸಿರಿ.
ತಲೆಯಲ್ಲಿ ತುಣುಕು ಬುದ್ಧಿಯಿದ್ದರೂ, ಇಂತಹ ಜಾಹೀರಾತುಗಳನ್ನು ನೋಡಿ ಮಂದಿ ನಗಬೇಕು. ಧನ್ವಂತರಿಯೂ ಸಮುದ್ರಮಥನದಲ್ಲಿ ಎತ್ತಿಕೊಂಡು ತಂದ ಅಮೃತವು, ಈ ಫಲಿತಾಂಶವನ್ನಾಗಲೀ, ಸೌಭಾಗ್ಯವನ್ನಾಗಲೀ ಕೊಡುತ್ತದೆ ಎಂದು ಜಾಹೀರಾತು ಮಾಡಿಲ್ಲ. ನಮ್ಮ...........ನ್ನು ಹಾಗೇ ಜಾಹೀರಾತನ್ನು