ಮನಮಂಥನ
ನಾಚಿಕೆ ಇರದೆ, ಸಂಕೋಚವಿರದೆ, ನಗುತ್ತಾರೆ ಎನ್ನುವ ಭಯವೂ ಇರದೆ, ಪ್ರಚಾರ ಮಾಡುತ್ತಾರೆ, ಸಂದಿಗೊಂದಿಗಳ ಗೋಡೆಗಳ ಮೇಲೆಲ್ಲಾ.
ಆದರೆ ಜನತೆಯ ವಿಪರೀತ ವರ್ತನೆ ಎಂತಹುದು ಅನ್ನುತ್ತೀರಿ? ಯುವಕ ಮಂದಿ ಇದನ್ನು ನಂಬುತ್ತಾರೆ. ಕಾಲೇಜುಗಳಲ್ಲಿ ಓದುವ ವಿದ್ಯಾವಂತ ಯುವಕರು, ಅಚ್ಚಾಗಿ ಬಂದಿದೆಯಲ್ಲ ಎಂದು ನಂಬುತ್ತಾರೆ ! ಅಚ್ಚಾಗಿ ಬಂದುದೆಲ್ಲ ಸತ್ಯ ಎಂದು ನಂಬಬೇಕಾದರೆ ಮನಸ್ಸನ್ನು ಯಾವ ರೀತಿಯ ಮೌಢ ಅವರಿಸಿಕೊಂಡಿರಬೇಕು. !
ಯಾಕೆ ಹೀಗಾಗುತ್ತೆ?
ಯುವಕರಲ್ಲಿ, ಪೌಗಂಡ ವಯಸ್ಸಿನವರಲ್ಲಿ, ದುರಭ್ಯಾಸವು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಒಂದಲ್ಲ ಒಂದು ಕಾರಣದಿಂದ ; ಒಂದಲ್ಲ ಒಂದು ರೀತಿಯಲ್ಲಿ ದುರಭ್ಯಾಸಕ್ಕೆ ನಾನು ಒಳಗಾಗಿದ್ದೇನೆ. ಇದನ್ನು ತಪ್ಪಿಸಿಕೊಳ್ಳುವ ಬಗೆ ಹೇಗೆ? ಎಂದವರು ವೈದ್ಯರಲ್ಲಿಗೆ ಹೋಗಿ ಸಲಹೆಯನ್ನು ಪಡೆಯುವುದಿಲ್ಲ. ಏಕೆ ? ಈ ಅಭ್ಯಾಸವು, ದುರಭ್ಯಾಸ, ಕೆಟ್ಟುದು ಎಂದವರು ನಂಬಿರುತ್ತಾರೆ. ಆದುದರಿಂದಲೇ ಗುಟ್ಟಾಗಿ ಆಚರಿಸುವ ಅಭ್ಯಾಸ ಮಾಡಬಾರದುದನ್ನು ಮಾಡಿದೆ ಎನ್ನುವ ಅಪರಾಧ ಮನೋಭಾವವು ಅವರನ್ನು ಕುಕ್ಕಲಾರಂಭಿಸುತ್ತದೆ. ದುರಭ್ಯಾಸ ಎಂದ ಮೇಲೆ ದುಷ್ಪರಿಣಾಮಗಳು ಹಿಂದೆಯೇ ಆಗಬೇಕು, ಅದನ್ನೂ ಒಪ್ಪಿಕೊಂಡಿರುತ್ತಾರೆ. ಇನ್ನೊಬ್ಬರೆದುರಿಗೆ, ಅದೂ ವಯಸ್ಸಿನಲ್ಲಿ ಹಿರಿಯರಾದವರೆದುರಿಗೆ, ಇದನ್ನೆಲ್ಲಾ ಹೇಳಿಕೊಂಡರೆ ಆತ್ಮಾಭಿಮಾನಕ್ಕೆ ಪೆಟ್ಟಾಗುತ್ತದೆ. ಆದಕಾರಣ ಹೇಳಿಕೊಳ್ಳುವುದೇ ಇಲ್ಲ. ಆದರೆ ದುರಭ್ಯಾಸವನ್ನು ಬಿಡಲು ಸಾಧ್ಯವೂ ಆಗುವುದಿಲ್ಲ. ಒಂದೆರಡು ವಾರ, ಒಂದೆರಡು ತಿಂಗಳು ತಪ್ಪಿಸಿದರೂ, ಅದರಿಂದಾಗುವ ಸುಖದ ನೆನವು ಮರಳಿ ಮರಳಿ ಸೆಳೆಯುತ್ತದೆ. ಇದೊಂದು ಹಿರಿಯ ಆತಂಕವಾಗಿಬಿಡುತ್ತದೆ. ಆತಂಕದಿಂದ ಮುತ್ತಲ್ಪಟ್ಟವನ ಮನಸ್ಸು ನೀರಿನಲ್ಲಿ ಮುಳುಗಿ ಹೋಗುತ್ತಿರುವವನಂತೆ. ಕೈಗೆ ಸಿಕ್ಕ ಕಡ್ಡಿಯನ್ನು ಹಿಡಿದುಕೊಂಡು, ಇದರಿಂದ ಬಚಾವ್' ಆಗುತ್ತೇನೆ' ಎಂಬ ಆಸೆಯು ಮೂಡುತ್ತದೆ.
ಈ ಕಾರಣದಿಂದಾಗಿ, ಯುವಕರಲ್ಲನೇಕರು, ವಿದ್ಯಾವಂತರಾಗಿರಲಿ ಇಲ್ಲದಿರಲಿ, ಇಂತಹ ಜಗಜ್ಜಾಹೀರಾತುಗಳನ್ನು ನಂಬುತ್ತಾರೆ. ಅದರಲ್ಲಿ ವರ್ಣಿಸಿದ ಕೆಲವು ಚಿಹ್ನೆಗಳು ಈಗಾಗಲೇ ನಮ್ಮಲ್ಲಿವೆ, ಎಂದು ತಾವೇ ತಾಳೆ ಹಾಕುತ್ತಾರೆ. ಜಾಹೀರಾತಿನ ಮದ್ದೇ ನಮ್ಮನ್ನು ಕಾಪಾಡುತ್ತದೆ ಎಂದಂದುಕೊಳ್ಳುತ್ತಾರೆ.
ಸಮಾಜದಲ್ಲಿ ಇಂತಹವರ ಸಂಖ್ಯೆ ಎಷ್ಟು ಅಂತೀರಿ? ಶತಾಂಶ