ಮು೦ಟರ ಅವನತಿ, ೫೫ ಶರಣುಹೋಗಿರಿ; ಆತನು ನಿಮ್ಮ ಕೂದಲು ಕೂಡ ಕೊ೦ಕಗೊಡಲಿಕ್ಕಿಲ್ಲ; ಇರಲಿ, ಅವ್ವನವರೇ, ನಿಮಗೆ ಹಸಿವೆಯಾಗಿರುವದಷ್ಟೆ? ನೀರು..ಬೀರು ತರಿಸಿ ಕೊಡಲಾ? ಬಹಳಹೊತ)ಗಿರುವದು” ಎಂದು ನುಡಿಯಲು, ಆಕೆಯು-ನನಸ್ ಹಸಿವೆಯಾಗಿಲ್ಲ; ಸ್ವಲ್ಪ ನೀರು ಮಾತ್ರ ತರಿಸಿಕೊಡು; ನನ್ನ ಗಂಟಲು ಒಣಗಿರು ವದು ; ಸ್ವಲ್ಪ, ಬಾಯಿ ಮುಕ್ಕಳಿಸಿ ಕೊಳ್ಳುತ್ತೇನೆ;” ಎಂದಳು. ಕೂಡಲೆ ಗಣೆ ಬನು ಅಡಿಗೆಯವನಿಗೆ ಕೆರೆಯೊಳಗಿಂದ ನೀರು ತರ ಹೇಳಿದನು. ಆತನು ಒಬ್ಬ ಮುಸ ೨ಾನ ಸಿಪಾಯಿಯ ಪಹರೆಯಲ್ಲಿ ಕರಗಿಹೋಗಿ ನೀರು ತಂದನು; ಬಳಿಕ ಗಣೇ ಬನು ರಂಗೂಬಾಯಿಯ ಕಡೆಗೆ ಹೋಗಿ-ಬಾಯಿ, ನಿಮ್ಮ ನ್ನು ದೇವರು ಈ ಸಂಕಟದೊಳಗಿಂದ ನಿಶ್ಚಯವಾಗಿ ಪಾರುಮಾಡುವನು, ಇದು ಸತ್ಯವು; ಆದರೆ ಮಾನಹಾನಿಯ ಪ್ರಸಂಗವಿರುವದರಿಂದ ಕಡೆಯ ಉಪಾಯವೆಂದು ಇದೊಂದು ಗುಪ್ತಿಯು (ಕೋಲಿನೊಳಗಿರುವ ಕಠಾರಿ) ನಿಮ್ಮ ಬಳಿಯಲ್ಲಿರಲಿ; ನಿಮ್ಮ ಮುಂದೆ ರಾವಣನಂತೆ ನಿಲ್ಲುವ ಆ ಚಾಂಡಾಲನಿಗೆ ನಿಮ್ಮ ಶವದ ಹೊರತು ಬೇರೆ ಏನೂ ಸಿಕ್ಕಿರಬಾರದು; ಎಂದು ನುಡಿದು ಆತನು ಆ ಗುಪ್ತಿಯನ್ನು ರ೦ಗೂ ಬಾಯಿಯ ಕೈಯಲ್ಲಿ ಕೊಟ್ಟನು. ಒಂದು ಮೊಳೆಯನ್ನು ಹತ್ತಿಕ್ಕುವದರಿಂದ ಆ ಕೋರಿ ನೊಳಗಿಂದ ಸುಮಾರು ಒಂದು ಗುಡ್ಡ ಮೊಳದಷ್ಟು ಕಠಾರಿಯು ಹೊರಗೆ ಬರು ತ್ತು. ಅದನ್ನು ನೋಡಿ ರಂಗ ಬಾಯಿಯು ಸ್ಪಲ್ಪ ಸಮಾಧಾನ ತಾಳಿ, ಒಂದೆ ರಡು ಸಾರೆ ಆ ಮೊಳೆಯನ್ನು ಹತ್ತಿಕ್ಕಿ ಆ ಕಠಾರಿಯನ್ನು ಹಿಡಿಯುವ ಬಗೆಯನ್ನು ತಿಳಕೊಂಡಳು; ಹಾಗು ಅದನ್ನು ಅತ್ಯಂತ ಜತನದಿಂದ ತನ್ನ ಹತ್ತಿರ ಇಟ್ಟ ಕೊಂಡಳು; ಆಗ ಆಕೆಗೆ ತಲೆಯ ಮೇಲಿನ ಒಂದು ಭಾರವ ಇಳಿದಂತಾಯಿತು. ಅವಳು ಒಂದು ನಿಟ್ಟುಸುರು ಬಿಟ್ಟು-ಗಣೇಬಾ, ದಾದಾ ಸಾಹೇಬರು ಬಹು ದೂರದೃಷ್ಟಿಯಿಂದ ನನ್ನನ್ನು ನಿನ್ನ ವಶಕ್ಕೆ ಒಪ್ಪಿಸಿದಂತೆ ಕಾಣುತ್ತದೆ; ನಿನ್ನ ಉಪಕಾರವನ್ನು ನಾನು ಜನ್ಮ ಜನ್ಮಾಂತರದಲ್ಲಿಯೂ ಮರೆಯಲಿಕ್ಕಿಲ್ಲ ಕಂಡೆಯಾ? ನಾನು ಮೊದಲಿನಿಂದ ನಿನ್ನ ಮಾತು ಕೇಳಿದ್ದರೆ ನನ್ನ ಹಾಡು ಹೀಗೆ ಆಗುತ್ತಿದ್ದಿಲ್ಲ: ಇರಲಿ, ಇನ್ನು ಮೇಲೆ ನಿನ್ನ ಮಾತನ್ನು ಅಕ್ಷರಶಃ ಪಾಲಿಸುವೆನು. ಇನ್ನೂ ನನ್ನ ಮೇಲೆ ದೇವರು ಇರುವನು; ಅ೦ತೇ ನನ್ನ-ನಿನ್ನ ವಿಯೋಗವಾಗಿಲ್ಲ ; ಗಣೇಬಾ, ಇನ್ನು ನೀನು ಹೋಗಪ್ಪಾ, ಏನಾದರೂ ತಿಂದು ಬಾ, ನನ್ನ ಕಾಲೊಳಗೆ ನಿನ್ನ ಜೀ ತಕ್ಕೇನೂ ಸುಖವಿಲ್ಲ” ಎಂದು ನುಡಿಯುತ್ತಿರಲು, ಒಳಗೆ ಮಸೀದೆಯಲ್ಲಿ ಏನೋ ಗದ್ದಲವಾದಂತೆ ಕೇಳಿಸಿತು. ಆಗ ಗಣೇಬನೂ ರಂಗೂಬಾಯಿಯ ಲಕ್ಷ Jಟ್ಟು ಕೇಳಲು ಹೆಂಗಸರು ಅಳುವ ದನಿಯ ಕೇಳಬರಹತ್ತಿತು, ಗಣ
ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೬೧
ಗೋಚರ