ಇನ್ನು ಮುಂದೆ ದಿವಾಣರಾಗತಕ್ಕವರಿದ್ದರು. ಆದರೆ ಇಷ್ಟರಲ್ಲಿ ನಮ್ಮ ದೇಶದಲ್ಲಿ ಸ್ವದೇಶಿ ಚಳವಳಿಯು ಪ್ರಾರಂಭವಾಯಿತು. ಕೂಡಲೆ, ಇವರಿಗೆ ದೈವಿಕ ಪ್ರೇರಣೆಯು೦ಟಾಯಿತು ಇವರು ಆ ಬಡೋದಯ ನವಕರಿಯಮೇಲೆ ತಿಲಾಂಜಲಿಯನ್ನಿಟ್ಟ, ದಾರಿದ್ರ ವ್ರತವನ್ನು ಸ್ವೀಕರಿಸಿ ರಾಜಕೀಯ ರಣಾಂಗಣದಲ್ಲಿ ಒಮ್ಮೆಲೆ ಧುಮುಕಿದರು. ಆಗ ಇವರ ವಯಸ್ಯ ತೀರ ಚಿಕ್ಕದು, ಅಂದರೆ ೩೨ ಆದರೆ ಧುಮು ಕುವದೊಂದೇ ತಡ, ಒಂದೆರಡೇ ವರ್ಷಗಳಲ್ಲಿ, ಇವರು ತಮ್ಮ ಬುದ್ದಿ ಬಲದಿ೦ದ, ಮೇಧಾ, ಸಾಮರ್ಥ್ಯ ದಿ೦ದ ಎಲ್ಲ ದೇಶಭಕ್ತರಿಗಿಂತ ಮುಂದೆ ಈಸಿ ಹೋಗಿ ಲೋಕಮಾನ್ಯರ ಸರಿಸಮಾನಸ್ಕಂದರಾದರು. ದೇಶಾ ಭಿಮಾನಕ್ಕೆ ದಿವ್ಯವಾದ ತೇಜಸ್ಸನ್ನು ಕೊಟ್ಟರು. ತರುಣರಲ್ಲಿ ರಾಷ್ಟ್ರೀಯತ್ವದ ಜ್ಯೋತಿಯನ್ನು ಹೊತ್ತಿಸಿದರು ಆದರೆ ರಾಷ್ಟ್ರೀಯತ್ವದ ಜ್ಯೋತಿಯೊಂದೇ ಸಾಲದು ದೇಶಾಭಿಮಾನವೆ೦ಬ ದೀಪದ ಮಿಣಿಮಿಣಿ ಬೆಳಕಿನಿಂದ ನಮ್ಮ ದೇಶದ ಉದ್ದಾರವು ಪೂರ್ಣವಾಗಿ ಆಗದೆಂದೂ ಹಿಂದುಸ್ಥಾನದ ಮುವತ್ತಮೂರು ಕೋಟಿ ಜನರಲ್ಲಿ ಆಧ್ಯಾತ್ಮಿಕ ವ ದಿವ್ಯವಾದ ಜ್ಯೋತಿಯನ್ನು ಹೊತ್ತಿಸುವದೇ ಮುಖ್ಯವಾದ ಕಾರ್ಯವೆಂದೂ ಬಗೆದು ತಮ್ಮಲ್ಲಿ ಅ೦ಥ ಲೋಕೋತ್ತರವಾದ ಸಾಮರ್ಥ್ಯವನ್ನು ತಂದುಕೊಳ್ಳುವದಕ್ಕಾಗಿ ಅವರು ಇಷ್ಟು ತಪಶ್ಚರ್ಯವನ್ನು ನಡಿಸಿರುವರು. ಹೀಗೆ ಅವರ ಆಯುಷ್ಯ ಮಣದಲ್ಲಿ ಎರಡು ಮೂರಾವರ್ತಿ ಬದಲಾವಣೆಗಳಾಗಿವೆ ಅವರ ಆತ್ಮವು ಏರುತ್ತ ಈಗ ಅಂತ್ಯ೦ತ ಉಚ್ಚವಾದ ಶಿಖ ರದ ಮೇಲೆ ಕುಳಿತಿದೆ ಇ೦ಥ ತಪೋಬಲರು ನಮ್ಮ ದೇಶದಲ್ಲಿ ಕಾರ್ಯ ಮಾಡುವದಕ್ಕೆ ಪ್ರವೃತ್ತರಾದರೆ, ಮಿಕ್ಕವರು ಮೂರು ವರ್ಷಗಳಲ್ಲಿ ಮಾಡುವ ಪರಿಣಾಮವನ್ನು ಇವರು ಮರುಗಳಿಗೆಯಲ್ಲಿ ಮಾಡಲಾದ ರೆಂಬದು ನಿರ್ವಿವಾದವಾಗಿದೆ. ಆದರೆ ಅವರು ಹಾಗೆ ಯಾವ ರೀತಿಯಿಂದ ಮಾಡುವರು, ಯಾವ ಮಾರ್ಗ ವನ್ನು ಸ್ವೀಕರಿಸುವರು ಎಂಬಿವೇ ಮೊದಲಾದ ಸಂಗತಿಗಳು ನಮ್ಮ ಮಾನವ ದೃಷ್ಟಿಗೆ ಅಗೋಚರವಾದ ಸಂಗತಿಗಳು, ಅದಕ್ಕಾಗಿ ಅವರು ಈಗಿನ ಸಮಾಜ ವದ್ಧತಿಯನ್ನು ಬುಡಮೇಲು ಮಾಡಬಹುದು, ರಾಜ ಕೀಯ ಪ್ರವಾಹವನ್ನು ಹೊರಳಿಸಬಹುದು, ಅಥವಾ ಮತ್ತಾವದೊಂದು ಮಾರ್ಗವನ್ನು ಸ್ವೀಕರಿಸಬಹುದು ಅದು ಏನೇ ಇರಲಿ ಅವರು ಬುದ್ದ, ಕಾಯಿಶ್ಚ ಶಂಕರ, ರಾಮಾನುಜ, ಮಧ್ಯ ಮುಂತಾದ ಜಗತ್ತಿನ ದಿವ್ಯ ವಿಭೂತಿಗಳಲ್ಲಿ ಗಣಿ ಸಿಗಬೇಕಾದ ಯೋಗ್ಯತೆಯುಳ್ಳವರೆಂದು ಮಾತ್ರ ನಿಃ ಸ೦ದೇಹವಾಗಿ ಹೇಳಬ ಹದು. ಅವರ ಜೀವನವು ಎಂಥ ವಿಲಕ್ಷಣವಾದುದು ನೋಡಿರಿ ! ಅವರು ಬಾಲ್ಯವನ್ನು ಕಳೆದದು ಇಂಗ್ಲ~ಡಿನಲ್ಲಿ; ವಿದ್ಯಾಭ್ಯಾಸವನ್ನು ಮಾಡಿದ್ದು ಇಂಗ್ಲಿಷಿನಲ್ಲಿ, ಅವರು ಮೊದಲಿನಿಂದ ಪಾಶ್ಚಿಮಾತ್ಯ ಸಂಸ್ಕಾರಗಳಲ್ಲಿ, ನಡೆನುಡಿಗಳಲ್ಲಿ, ವಿಚಾರಗಳಲ್ಲಿ ಮುಳುಗಿದವರು. ದೊಡ್ಡವರಾಗುವ ವರೆಗೆ ಮಾತೃ ದೇಶದ ನೆನಪಿಲ್ಲ, ಮಾತೃಭಾಷೆಯ ಗಂಧವಿಲ್ಲ, ದೇವ ಭಾಷೆಯ ಜ್ಞಾನವಿಲ್ಲ, ಆರ್ಯ ಸಂಸ್ಕೃತಿಯ ಸಂಸ್ಕಾರವಿಲ್ಲ. ಹೀಗೆ ಎಲ್ಲ ಬಗೆಯಿಂದಲೂ ಪಾಶ್ಚಿಮಾತ್ಯರಾದವರು ಇ೦ದಿಗೆ ಆಚಾರದಲ್ಲಿ ವಿಚಾರದಲ್ಲಿ ಸಂಸ್ಕೃತಿಯಲ್ಲಿ ಎಲ್ಲರಿಗಿಂತ ಹೆಚ್ಚು ಪೌರ್ವಾತ್ಯ ರಾಗಿ, ಹಿಂದಿನ ಮಹಾಋಷಿಗಳ ಕೋ೬.ಯಲ್ಲಿ ಸೇರಿರು ತ್ತಾರೆಂಬದು ಎ೦ಥ ಆಶ್ಚರ್ಯಜನಕವಾದ ಸಂಗತಿಯು, ಅಥವಾ ಹಾಗೆ ಆಶ್ಚರ್ಯಪಡುವದಾದರೂ ಏಕೆ ? ನಮ್ಮ ಪೂರ್ವಜರ ಪುಣ್ಯ ಪ್ರಭಾವವೇ ಅಂಥದು, ನಮ್ಮ ಆರ್ಯ ಸಂಸ್ಕೃತಿಯ ದಿವ್ಯ ಜ್ಞಾನದ ಪರಿಣಾಮವೇ ಅಂಥದು, ನಮ್ಮ ಭರತಭೂಮಿಯ ಭಾಗ್ಯವೇ ಅಂಥದು. ಅಂತಲೇ, ಲೋಕಮಾನ್ಯ ಟಿಳಕ, ಮಹಾತ್ಮಾ ಗಾಂಧಿ, ಮಹರ್ಷಿ ಅರವಿ೦ದರ೦ಥವರು ನಮ್ಮಲ್ಲಿ ಹುಟ್ಟುತ್ತಾರೆ ! ಧಾರವಾಡ. ೫-೭-೧೯೨೧ ವೆಂಕಟೇಶ ಭೀಮರಾವ ಆಲೂರ, B, A., IL, B.
ಪುಟ:ಮಹರ್ಷಿ ಅರವಿಂದ ಘೋಷ್.djvu/೧೧
ಗೋಚರ