ವಿಷಯಕ್ಕೆ ಹೋಗು

ಪುಟ:ಮಹರ್ಷಿ ಅರವಿಂದ ಘೋಷ್.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯ ಭುವನೇಶ್ವರೀ ! ಕರ್ನಾಟಕ ಮಾತೆ !! ಪರಿಚಯ, ಓಟ ೧ ಭವಿಷ್ಯ ತಾಲದ ಗಾಢಾಂಧಃಕಾರದೊಳಗಿ೦ದ ಸಾಮಾನ್ಯ ಜನರಿಗೆ ಪ್ರವಾಸ ಮಾಡಲಿಕ್ಕೆ ಇತಿ ಹಾಸದ ವಿದ್ಯುತ್ ಪ್ರಕಾಶವು ಬಹಳ ಸಹಾಯ ಮಾಡುತ್ತದೆ. ಈ ದೃಷ್ಟಿಯಿಂದ ಪ್ರಸ್ತುತ ಅಲ್ಪ ಪ್ರಯ ತ್ನವು ಮಾಡಲ್ಪಟ್ಟಿದೆಇದು ಯಾವದೊಂದರ ಭಾಷಾಂತರವಾಗಿರದೆ ಬೇರೆ ಬೇರೆ ಆಧಾರಗಳಿಂದ ಬರೆದ ಸ್ವತಂತ್ರವಾದ ಪುಸ್ತಕವಾಗಿದೆ • ೨ ಮಹರ್ಷಿಗಳ ವಿಸ್ತ್ರತ ವೃತ್ತಾಂತವನ್ನೊಳಗೊಂಡ ಚರಿತ್ರವು ಈ ವರೆಗೆ ಯಾವ ಭಾಷೆಯ ಲ್ಲಿಯ ಆಗಿಲ್ಲ ಮಾಹಿತಿಯನ್ನು ದೊರಕಿಸಲಿಕ್ಕೆ ಶಕ್ಯವಿದ್ದಷ್ಟು ಪ್ರಯತ್ನಗಳನ್ನು ಮಾಡಿದೆ. ಇದನ್ನು ಬರೆಯುವಾಗ ಈ ಲೇಖಕನು ಸಹಾಯವಾದ ಗ್ರಂಥಕಾರರಿಗೆ ತುಂಬಾ ಕೃತಜ್ಞನಾಗಿದ್ದಾನೆ. ಇದರ ಮೊದಲನೆಯ ಪ್ರತಿಯನ್ನು ಸ್ವಲ್ಪ ಅವಸರದಿಂದ ಬರೆಯಬೇಕಾಯಿತು ಆಗ ದೊರೆತ ಆಧಾರ ಪುಸ್ತಕ ಗಳೊಳಗಿನ ಅವತರಣಗಳನ್ನು ತಕ್ಕೊಳ್ಳುವಾಗ ಅದರ ಪುಟ ಮುಂತಾದವುಗಳನ್ನು ಕಾಣಿಸುವದು ಹಾಗೇ ಉಳಿದು ಬಿಟ್ಟಿತು. ಮು೦ದ ಹೊತ್ತಿಗೆ ಆ ವುಸ್ತಕಗಳು ಸಿಗಲಿಲ್ಲವಾದುದರಿಂದ ಕೆಲವೆಡೆಗಳಲ್ಲಿ ಈ ದೋ ನವು ಉಳಿದುದಕ್ಕೆ ಉಪಾಯವಿಲ್ಲ 4. ಸಜ್ಜನರ ಸಹವಾಸವು ಹೆಚ್ಚೇನು ಸವಿದಂತೆಯಿರುತ್ತದೆ. ಮಹರ್ಷಿಗಳ ಪ್ರತ್ಯಕ್ಷ ಸಹವಾ ಸದ ಯೋಗವು ಇನ್ನೂ ಈ ಬಡಲೇಖಕನಿಗೆ ಸಿಕ್ಕಿಲ್ಲವಾದರೂ ವಾಲ್ಮೀಯಾತ್ಮಕ ಸಹವಾಸದಲ್ಲಿ ಕೂಡ ಅವರ ವಿಚಾರಗಳನ್ನು ನೆನೆ-ನೆನೆದು ಸ್ವರ್ಗಿಯ ಆನಂದವನ್ನು ಪಡೆಯಲಿಕ್ಕೆ ಸಿಕ್ಕಿತು, ಮಗುವು ಸೃಷ್ಟಿ ಯ ಶೋಭೆಯನ್ನು ನೋಡಿ ಆನಂದಬಟ್ಟು ಥೈ ಥೈ ಎಂದು ಕುಣಿದಾಡುತ್ತದೆಅದು ತನಗಾದ ಅನಂ ದವನ್ನು ಶಬ್ದಗಳಿಂದ ವ್ಯಕ್ತಪಡಿಸುವದರಲ್ಲಿ ಅಸಮರ್ಧ್ಯವಿರುತ್ತದೆ. ಆದರೂ ಹಿರಿಯರೆದುರಿಗೆ ತನ್ನ ಮನೋಗತವನ್ನು ಅಪ್ಪಟ ಶಬ್ದಗಳಿ೦ದ ಹೇಗೋ ವ್ಯಕ ಬಡಿಸಿ ಮನಸ್ಸಿನ ಸಮಾಧಾನವನ್ನು ಮಾಡಿಕೊ ಇದೆ ಬಿಡುವದಿಲ್ಲ. ಹಿರಿಯರು ಕಕ್ಕುಲತೆಯಿಂದ ಅದರ ಆ ತೊದಲ್ನುಡಿಗಳನ್ನು ಮನ್ನಿಸಿ, ಮಗುವಿಗೆ ಉತ್ತೇಜನವನ್ನೀಯುತ್ತಿರುವದುಂಟು. ೪ ಪ್ರಕೃತ ಲೇಖಕನ ಸ್ಥಿತಿಯೂ ಹೀಗೆಯೇ ಇದೆ. ವಿದ್ವಜ್ಜನರೆದುರಿಗೆ ಬರುವ ಪ್ರಥಮ ಪ್ರಯತ್ನವಿದು. ಇದನ್ನು ಬರೆದಿಟ್ಟ ಬಳಿಕ ಮುದ್ರಿಸುವ ಸಾಹಸವನ್ನು ಮಾಡಬೇಕೇ ಬಿಡಬೇಕೇ ಎಂಬ ವಿಚಾರದಲ್ಲಿ ಕೆಲದಿನಗಳು ಹೋದವು. ಹಂಸದಂತೆ ಗಮನಮಾಡಲಿಕ್ಕೆ ಬರುವದಿಲ್ಲೆಂದು ನಡೆಯುವ ದನ್ನು ಯಾರೂ ಕಟ್ಟು ಮಾಡಿಲ್ಲ, ಅಥವಾ ಕೋಗಿಲೆಯಂತೆ ಕ೦ರವಿಲ್ಲೆಂದು ಹಾಡುವದನ್ನು ಯಾರೂ ನಿಲ್ಲಿಸಿಲ್ಲವೆ೦ಬ ವಿಚಾರಗಳು ಪುಕ್ಕ ಮನಸ್ಸಿಗೆ ಧೈರ್ಯವನ್ನು ಕೊಟ್ಟು ಈ ಸಾಹಸವನ್ನು ಮಾಡಿಸಿವೆ ೫, ಲೇಖಕನು ಹೊಸಬನಾದುದರಿ೦ದಲೂ, ಯಾವದೊಂದು ಭಾಷೆಯಲ್ಲಿ ಪಾಂಡಿತ್ಯವನ್ನು ಪಡ ಯದುದರಿಂದಲೂ ಇದರಲ್ಲಿ ಕುಂದು ಕೊರತೆಗಳುಳಿದಿರುವವು, ಮುದ್ರಣ ದೋಷಗಳಿಗೂ ಕಡಿಮೆಯಿಲ್ಲ ಆದರೆ ಅವುಗಳನ್ನು ಉದಾರ ದೃಷ್ಟಿಯಿಂದ ನೋಡಬೇಕೆ೦ಡು ಕೃಪಾಳುವಾದ ಸಮಾಜಪುರುಷನಿಗೆ