ವಿಷಯಕ್ಕೆ ಹೋಗು

ಪುಟ:ಮಹರ್ಷಿ ಅರವಿಂದ ಘೋಷ್.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ವಂಶವೃತ್ತ. ಈ ಕಾಲಕ್ಕೆ ಧಾರ್ಮಿಕ ಆಚಾರ ವಿಚಾರಗಳಿಗೆ ನೂತನ ಸ್ವರೂವಕೊಡುವದಕ್ಕೆ ಕೆಲವರು ಪ್ರಯತ್ನಿಸಿದರು. ಆರ್ಯ ಸಮಾಜ, ಬ್ರಹ್ಮಸಮಾಜ ಮತ್ತು ಪ್ರಾರ್ಥನಾ ಸಮಾಜಗಳು ಈ ಮಾತಿಗೆ ಸಾಕ್ಷಿಯಾಗಿವೆ. ಬಂಗಾಲದಲ್ಲಿ ರಾಜಾರಾಮ ಮೋಹನರಾಯ ಎಂಬವರು ಬ್ರಹ್ಮಸಮಾಜವನ್ನು ಸ್ಥಾಪಿಸಿ, ತಮ್ಮ ಪಂಥದ ಪ್ರಚಾರಮಾಡಿದರು. ಪಾತಿ, ಮಾತ್ಯ ಶಿಕ್ಷಣ ಹೊಂದಿದ ಸುಶಿಕ್ಷಿತರು ಈ ವಂಧದಲ್ಲಿ ಬಹಳವಾಗಿ ಸೇರಿದರು. ಮತಾಂ ತರನಾಡಿ ಕ್ರಿಸ್ತಿಯನರಾಗುವದಕ್ಕಿಂತ ಬ್ರಹ್ಮರಂಧವನ್ನು ಸ್ವೀಕರಿಸುವದು ಲೇಸೆಂದು ಬಗೆದು ಕೆಲವರು ಇದರಲ್ಲಿ ಸೇರಿದರು. ರಾಜಾನಾರಾಯಣ ಬಾಬುಗಳ ತಂದೆಯು ಮೊದಲು ಈ ಪಂಥಕ್ಕೆ ಸೇರಿದ್ದನು. ಆದರೆ ಇಲ್ಲಿ ಆತನಿಗೆ ಸಮಾಧಾನವಾಗಲಿಲ್ಲ. ಅಂತ ಕಾಲಕ್ಕೆ ಗಂಗಾತಟಾಕಕ್ಕೆ ಹೋಗಿ ಅಲ್ಲಿ ಸನ್ಯಾಸದೀಕ್ಷೆಯನ್ನು ತಕ್ಕೊಂಡು ಮೃತ್ಯು ನನ್ನು ಆದರಿಸಿದನು'

  • ರಾಜನಾರಾಯಣ ಬಾಬುಗಳಿಗೆ ಮಾತ್ಯ ಆಚಾರ ವಿಚಾರಗಳನ್ನು ಅನುಕರಿಸಿ ಸುಖವೆನಿಸಲಿಲ್ಲ. ಮದ್ಯಪಾನಾದಿ ವ್ಯಸನಗಳಿಂದ ಶರೀರದ ಮೇಲೆ ಅನಿಷ್ಟ ಪರಿಣಾಮ ವಾಯಿತು. ಕರ್ಮಧರ್ಮ ಸಂಯೋಗದಿಂದ ಇದೇ ಸುಮಾರಿಗೆ ಅಂದರೆ ೧೮೫-೮೬ರಲ್ಲಿ ಅವರ ಪ್ರೇಮದ ತಂದೆಯು ತೀರಿದನು ಪ್ರೀತಿಯ ಸಹಕಾರಣಿಯ ವಿಯೋಗವಾ ಯಿತು. ಇದರಿಂದ ಮನಸ್ಸಿನ ಮೇಲೆ ಬಹು ದೊಡ್ಡ ಆಘಾತವಾಯಿತು.

ಬಾಹ್ಯ ಸುಖೋಪಭೋಗಗಳಿಂದ ತೃಪ್ತಿ ಹೊಂದಿ, ಶಾಂತಿಪಡೆಯಬೇಕೆಂದು ಮಾಡಿದ ಶ್ರೀ ಗಜನಾರಾಯಣ ಬಾಬುಗಳ ಮನಸ್ಸು ಚಂಚಲವಾಯಿತು ಆಗ ಅವರು ಆತ್ಮಿಕ ಶಾಂತಿಯು ಹೇಗೆ ದೊರೆದೀತೆಂಬ ವಿಚಾರಕ್ಕೆ ಬಿದ್ದರು. ಬ್ರಹ್ಮ ಸಮಾಜದ ಪೂಜ್ಯ ದೇವೇಂದ್ರನಾಥ ಟಾಗೋರರ ಪರಿಚಯವಾಗಿ ರಾಜ ನಾರಾಯಣಗು ಅವರ ಪಂಥದಲ್ಲಿ ಸೇರಿದರು. ಈ ಸಮಯಕ್ಕೆ ಕಾಕತಾಲ ನ್ಯಾಯದಿಂದ ರಾಜನಾರಾಯಣ ರಿಗೆ ಉಪನಿಷತ್ತುಗಳ ವರಶಿಲನ ಮಾಡುವ ಸುಯೋಗವು ಬಂತು. ಬಂಗಾಲದ ತತ್ವ ಬೋಧಿನಿ ಸಭೆಯವರು ಶ್ರೀ ರಾಜನಾರಾಯಣ ಬಾಬುಗಳ ಸಂಸ್ಕೃತ ಹಾಗೂ ಇಂಗ್ಲಿ ಷ ಭಾವಾಪ್ರಭುತ್ವವನ್ನು ಕಂಡು, ತಿಂಗಳೊಂದಕ್ಕೆ ೬೦ ರೂ ಗಳ ಮೇಲೆ ಉಪನಿಷ ಗೃಂಥಗಳ ಭಾವಾಂತರ ಮಾಡಲಿಕ್ಕೆ ನಿಯಮಿಸಿದರು. ಸಹಜವಾಗಿಯೇ ವೇದಾಂತ ಗ್ರಂಧಗಳವಾಚನ ಮನನವಾಗಹತ್ತಿತು. ಇತ್ತ ಬ್ರಹೋಪಂಥದ ಸಂಘಟ್ಟನೆಯಿಂದ ಅದರ ಸ್ವರೂಪಜ್ಞಾನವೂ ಅವರಿಗೆ ಆಯಿತು. ಬ್ರಹ್ಮಸಂಧಿಗಳು ಧಡ ಕ್ರಿಸ್ತಿಯನರಲ್ಲ; ಧಡ ವೈದಿಕ ಧರ್ಮಗಳಲ್ಲ. ಅವರ ಅನುಯಾಯಿಗಳ ಆಚಾರ ವಿಚಾರಗಳಲ್ಲಿ ತಾಳಮೇಳವಿಲ್ಲ. ಬ್ರಹ್ಮಪಂಥದ ಅನುಯಾಯಿಗಳು ಹೀಗಿದ್ದರೆಂದಮಾತ್ರಕ್ಕೆ ಆ ವಂಧದ ಸಂಪಕರೂ ಹಾಗೇ ಶೀಲಭ್ರಷ್ಟಗಿದ್ದರೆಂದು ಯಾರಾದರೂ ಕಲ್ಪಿಸಿದರೆ ಅದು ತಪ್ಪು. ರಾಜಾರಾಮ ಮೋಹ ನಯ, ದೇವೇಂದ್ರನಾಥ ಠಾಕೂರರಂಥವರಿಗೆ ಕಲಂಕ ಹಚ್ಚುವದೆಂದರೆ ಅದು ನಾಪವಾ ದೀತು. ಯಾಕಂದರೆ ಯಾವದೇ ಧರ್ಮದ ಅಧವಾ ಮತದ ಇಲ್ಲವೇ ಪಂದ್ಯದ ಸಂಸ್ಥಾ