೧೦ ಜ ಮಹರ್ಷಿ ಅರವಿಂದ ಘೋಷ ಇವರ ಸಂಕ್ಷಿಪ್ತ ಚರಿತ್ರವು, ಪಕರು ಶೀಲವಂತರೇ ಇರುತ್ತಾರೆ. ಇರಲಿ. ರಾಜ ನಾರಾಯಣ ಬಾಬುಗಳಿಗೆ ಬ್ರಹ್ಮ ಪಂಧದವರ ನಡವಳಿಕೆಗಳು ಸೇರದಕಾರಣ ಸ್ವಲ್ಪ ಕಾಲದಲ್ಲಿಯೇ ಅವರು ಆ ಸಂಧವನ್ನು ಬಿಟ್ಟು, ವೈದಿಕ ಧರ್ಮಾನುಯಾಯಿಗಳಾದರು' ಶಾಂತಿಯನ್ನು ದೊರಕಿಸಲಿಕ್ಕೆ ಹಲುಬುವ ರಾಜ ನಾರಾಯಣರಿಗೆ ಧರ್ಮಾಂತರ, ಮತಾಂತರಗಳನ್ನು ಮಾಡಿ ಕಡೆಗೆ ವೇದಾಂತಧರ್ಮ ದಲ್ಲಿ ಅದು ಸಿಕ್ಕಿತು. ಬಳಿಕ ಉವನಿಷತ್ತುಗಳ ನಿಧಿಧ್ಯಾಸ ಮಾಡಹತ್ತಿದರು ಇಂಗ್ಲಿಶರ ಸಂಸರ್ಗದಿಂದ ದೇಶದಲ್ಲಿ ಪರಸ್ಪರ ವಿರೋಧಿಗಳಾದ ಎರಡು ವಿಚಾರ ಪ್ರವಾಹಗಳು ಹುಟ್ಟಿದವು. “ ಹಳೇದೆಲ್ಲ ಹೊಲಸು ” ಎಂಬ ಮತದ ಜೋರು ವಿಶೇಷ ವಿತ್ತು. ಅದರ ಸೆಳವಿಗೆ ಅನೇಕ ತರುಣರು ಸಿಕ್ಕು, ಗಾಸಿವೀಸಿಯಾದರೂ ಶ್ರೀ ರಾಜನಾರಾ ಯಣ ಬಾಬುಗಳು ಈ ಪ್ರವಾಹದಲ್ಲಿ ಸಿಕ್ಕು, ಒದ್ದಾಡಿ, ಗುಟಕರಿಸಿ, ಬಾಯ್ಲಿಟ್ಟು ಕಡೆಗೆ ದಂಡೆಗೆ ಹತ್ತಿದರು. ದಂಡೆಗೆ ಬರುವ ಭಾಗ್ಯವು ಬಹು ಸ್ವಲ್ಪ ಜನರಿಗಿರುತ್ತದೆ. ಒಮ್ಮೆ ವಾಶ್ಚಿಮಾತ್ಯರ ಸೆಳವಿಗೆ ಸಿಕ್ಕನಂತರ ಸ್ಮತಿಯ ಮೇಲೆ ಬರುವದು ಬಲು ದುಸ್ತ ರವು. ರಾಜ ನಾರಾಯಣ ಬಾಬಗಳು ವೇದಾಂತಜ್ಞಾನದಿಂದ ತೃಪ್ತಿಹೊಂದಿದ ಬಳಿಕ ಅದರ ಪ್ರಸಾರಕ್ಕಾಗಿ ಟೊಂಕ ಕಟ್ಟಿದರು. ಇವರಿಗೆ ಇಂಗ್ಲಿಶ, ಸಂಸ್ಕೃತ, ಹಾಗೂ ವರ್ಶಿಯನ್ ಭಾಷೆಗಳು ಚನ್ನಾಗಿ ಬರುತ್ತಿದ್ದುದರಿಂದ ಹಿಂದಕ್ಕೆ ವೈದಿಕ ಧರ್ಮದ ನಿಂದೆಗೆ ಒಳ್ಳೆ ಅನುಕೂಲವಾಗಿತ್ತು. ವಾಸ, ಬುದ್ಧಿಯನು ಮಾಡೀತು! ಅದೊಂದು ಶಸ್ತ್ರದಂತಿದೆ. ಕಳ್ಳನ ಮೇಲೆ ಹಾಕಿದರೆ ಅವನನ್ನು ತುಂಡರಿಸುತ್ತದೆ ; ಸಜ್ರನನ ಮೇಲೆ ಹಾಕಿದರೆ ಆತ ನನ್ನೂ ಭೇದಿಸುತ್ತದೆ. ರಾಜ ನಾರಾಯಣರ ಯಾವ ಬುದ್ಧಿಯು ಮುಂಚೆ ವೈದಿಕಧರ್ಮದ ನಗೆಗೇಡು ಮಾಡುವದರಲ್ಲಿ ವ್ಯರ್ಥವಾಗಿ ವ್ಯಯವಾಗುತ್ತಿತ್ತೋ, ಅದು ಈಗ ಅದರ ಮಂಡನೆ ಮಾಡುವದರಲ್ಲಿ ಸಾರ್ಥಕವಾಗಹತ್ತಿತು. ರಾಜ ನಾರಾಯಣರು ತಮ್ಮ ಸ್ವಾನುಭವ ಪೂರ್ಣ ಹಾಗೂ ವಿದ್ವತೆಯಿಂದ ತುಂಬಿತುಳುಕುವ ಅಧಿಕಾರಯುಕ್ತ ನಾಲವಾಣಿಯಿಂದ ಜನಗಳಿಗೆ ವೇದಾಂತ ಧರ್ಮದ ಉಪದೇಶ ಮಾಡಹತ್ತಿದರು. ಮತಮತಾಂತರಗಳ ಗೊಂದ ಲದಲ್ಲಿ ಸಿಕ್ಕು ತೊಳಲಾಡುವವರಿಗೆ, ಧರ್ಮಾಂತರ ಮಾಡಿ ಆತ್ಮನಾಶ ಮಾಡಿಕೊಳ್ಳುವವರಿಗೆ ಸತ್ರಜ್ಞಾನವನು, ಉವದೇಶಿಸಿ ಅವರ ಆತ್ಯಂತಿಕ ಕಲಾಣ ಮಾಡಹತಿ ದರು ಅವರು ಬಂಗಾ ಲಿಯಲ್ಲಿ ಬರೆದ ಗ್ರಂಧಗಳನ್ನು ಜನರು ಈಗಲೂ ಭಕ್ತಿಯಿಂದ ರ್ಪಸುತ್ತಾರೆ. ಜನರಲ್ಲಿ ಸ್ವದೇ ಶಾಭಿಮಾನವುಂಟಾಗಬೇಕು, ಮದ್ಯಪಾನಾದಿ ವ್ಯಸನಗಳು ಅವರಲ್ಲಿ ಸೇರಬಾರದು, ಶಾರೀರಿಕ ಅವನತಿಯು ಅವರಲ್ಲಿ ಮನೆಮಾಡಬಾರದೆಂಬದಾಗಿ ಹಲವು ವಿಧದಿಂದ ಪ್ರಯತ್ನ ಮಾಡಿ ದರು. ಇವರಿಗೆ ಬಂಗಾಲಿ ರಾಷ್ಟಧರ್ಮದ ಆದಿವುರುಷರೆಂದು ಅನ್ನುತ್ತಾರೆ. ಇಂಥ ವಿಲಕ್ಷಣ ಚಾರಿತ್ರದ ಪುರುಷನ ಮಗಳು ಶ್ರೀ ಅರವಿಂದ ಘೋಸರ ತಾಯಿಯು, ಇವಳು ತನ್ನ ತಂದೆಯಿಂದ ದೊರಕಿಸಿದ ರೇವನ್ನು ಮಗನಿಗೆ ಒಪ್ಪಿ ಸಿ ಬಿಟ್ಟಳು. ಇದು ತಾಯಿಯ ಕಡೆಯ ಐತಿಹ್ಯವಾಯಿತು ಇನ್ನು ತಂದೆಯಾದ ಕೃಷ ಧನ ಬಾಬುಗಳ ವಿಷಯಕ ಸ್ವಲ್ಪ ಮಾಹಿತಿಯನ್ನು ಹೇಳುವದು ಯುಕ್ತವಾಗಿದೆ. ಇವರ
ಪುಟ:ಮಹರ್ಷಿ ಅರವಿಂದ ಘೋಷ್.djvu/೨೭
ಗೋಚರ