ವಿಷಯಕ್ಕೆ ಹೋಗು

ಪುಟ:ಮಹರ್ಷಿ ಅರವಿಂದ ಘೋಷ್.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಮಹರ್ಷಿ ಅರವಿಂದ ಘೋಷ ಇವರ ಸಂಕ್ಷಿಪ್ತ ಚರಿತ್ರನ ವೇಕೆ ಅವುಗಳ ಗೊಡವೆ ತಮಗೇನು? ಎಂದು ಅವುಗಳನ್ನು ದುರ್ಲಕ್ಷಿಸಿ ತಮ್ಮ ಇಚ್ಛೆ ಯಂತೆ ಮಗನ ಶಿಕ್ಷಣಕ್ಕೆ ಆರಂಭಿಸಿದರು. ಮಾತೃಭಾಷೆಯ ಅಭ್ಯಾಸವನ್ನು ಮುಂದೆ ಮಾಡಿ ಬಳಿಕ ತದ್ವಾರವಾಗಿ ಇಂಗ್ಲಿಶ ಕಲಿಸುವ ದ್ರಾವಿಡೀ ಪ್ರಾಣಾಯಾಮವೇತಕ್ಕೆ ಎಂದು ಮೊದಲಿಗೆ ಇಂಗ್ಲಿಶವನ್ನೇ ಕಲಿಸಹತ್ತಿದರು ೫ನೆಯ ವರುಷ ಅಭ್ಯಾಸಕ್ಕೆ ಆರಂಭವಾ ಯಿತು. ದಾರ್ಜಲಿಂಗದ ಸೆಂಟಾಲ ಸ್ಕೂಲಿನಲ್ಲಿ ಹೆಸರು ಹಚ್ಚಿತು. ಅಲ್ಲಿ ಅರವಿಂದನು ತನ್ನ ವಿಲಕ್ಷಣವಾದ ಸ್ಮರಣ ಶಕ್ತಿಯಿಂದ ಎಲ್ಲರನ್ನು ದಂಗುಬಡಿಸಿದನು ಉವಾಧ್ಯಾಯರು ಇವನ ಮೇಲೆ ಬಲು ಪ್ರೇನು ಮಾಡುತ್ತಿದ್ದರು, ಮುದ್ದು ಅರಪಿಂದನ ಮುಖಾರವಿಂದವು ಸಂಗಡಿಗರಿಗೆಲ್ಲ ಬಲು ಪ್ರಿಯಕರವಾಗಿತ್ತು. ಹಿಂದುಸ್ತಾನದಲ್ಲಿಯೇ ಹೆಚ್ಚು ದಿನ ಶಿಕ್ಷಣದ ಸಲುವಾಗಿ ಇಟ್ಟರೆ ಮಗನು ಪೂರ್ಣ ಇಂಗ್ಲರ ಮನುಷ್ಯನಾಗಲಿಕ್ಕಿಲ್ಲವೆಂಬ ಸಂಶಯದಿಂ ದಲೋ ಏನೋ ಎಂಬುವಂತೆ ಏಳು ವರುಷದ ಕಂದಮ್ಮನನ್ನು ಕೃಷ್ಣಧನರು ಇಂಗ್ಲಂಡಕ್ಕೆ ಒಬ್ಬ ಮಿತ್ರನೆಡೆಗೆ ಕಳಿಸಿದರು.

  • ಇಂಗ್ಲಂಡದಲ್ಲಿ ಒಬ್ಬ ಮಿಶನರಿ (

ಕ್ರಿಭಟ್ಟನ) ಬಳಿಯಲ್ಲಿ ಅರವಿಂದನೂ ಆತನ ತಮ್ಮನೂ ಕೂಡಿ ಇರಹತ್ತಿದರು, ಮಿಶನರಿಯು ಈ ಕೋಮಲ ಮನಸ್ಸಿನ ಮುದ್ದು ಮಕ್ಕಳ ಅಂತಃಕರಣದಲ್ಲಿ ಕ್ರಿ ಶ್ರೀ ಧರ್ಮದ ವಿರಕ್ಕೆ ಪ್ರವೃತ್ತಿಯನ್ನುಂಟು ಮಾಡ ಬೇಕೆಂದು ಅವರಿಗೆ ನಾನಾವಿಧದಿಂದ ಉವದೇಶಿಸಿದನು. ಈ ಉದ್ದೇಶದಿಂದ ಅರವಿಂದ ರಲ್ಲಿ ಕ್ರಿಸ್ತೀ ಧರ್ಮಕ್ಕೆ ಸೇರಬೇಕೆಂಬ ಆಕಾಂಕ್ಷೆಯು ಉತ್ಪನ್ನವಾಗದಿದ್ದರೂ, ಬಾಹ್ಯ ಆಡಂಬರದ ವಿಷಯಕ್ಕೆ ಅವರ ಮನಸ್ಸು ಹೇಸಿತು. ಭೂಗತಿಯ ಕಡೆಗೆ ತಾತ್ಕಾರ ಮಾಡಲಿಕ್ಕೆ ಈ ಉವದೇಶವು ಸಹಾಯ ಮಾಡಿತು ಇಂಗ್ಲೆಂಡದಂಧ ವಿಲಾಸೀ ದೇಶದ ಲ್ಲಿದ್ದು ಅರವಿಂದರ ಒಲವು ತ್ಯಾಗದ ಕಡೆಗೆ ಇರಲಿಕ್ಕೆ ಈ ಮಿಶನರಿಯೇ ಕಾರಣನೆಂದು ಹೇಳಬಹುದು ಈತನ ವಿಷಯಕ್ಕೆ ಅರವಿಂದರಲ್ಲಿ ಪೂಜ್ಯಬುದ್ದಿ ಇರುತ್ತದೆ. ಮ್ಯಾಂಚ ಸ್ವರದಲ್ಲಿ ಕೊಂಚಕಾಲ ಖಾಸಗಿ ಅಭ್ಯಾಸ ಮಾಡಿದರು. ಬಳಿಕ ಲಂಡನದ ಸೆಂರ್ಟಲ ಸ್ಕೂಲಿಗೆ ಹೆಸರು ಹಚ್ಚಿದರು ಈ ಸಾಲೆಯ ಮುಖ್ಯಾಧ್ಯಾಪಕರು ಒಮ್ಮೆ ತಮ್ಮ ವಿದ್ಯಾ ರ್ನಿಯಾದ ಅರವಿಂದನ ವಿಷಯಕ್ಕೆ ಅಂದುದೇನಂದರೆ: ನಾನು ಈಗ ಕೆಲಸ ಮಾಡಹತ್ತಿ ೨-೩೦ ವರುಷಗಳಾದವು. ಈ ಅವಧಿಯೊಳಗೆ ಈ ತನಷ್ಟು, ವಿಲಕ್ಷಣ ಬುದ್ದಿ ಚಾತು ರ್ಯವುಳ್ಳ ವಿದ್ಯಾರ್ಥಿಯನ್ನು ನಾನು ಕಾಣಲಿಲ್ಲ. ಈ ಶಾಲೆಯೊಳಗಿನ ಅಭ್ಯಾಸವು ಮುಗಿದ ನಂತರ ಶ್ರೀ ಅರವಿಂದರು ಕೆಂಬ್ರಿಜ್ ದ ಕಾಲೇಜದಲ್ಲಿ ಹೆಚ್ಚಿನ ಅಭ್ಯಾಸಕ್ಕಾಗಿ ನೇರಿದರು ಅಲ್ಲಿ ಶ್ರೀ ಅರವಿಂದರು ತಂದೆಯ ಸಂಕೇತದಂತೆ !. ( S, ಪರೀಕ್ಷೆಯ ತಯಾರಿ ಯನ್ನು ನಡಿಸಿದರು ಈ ಪರೀಕ್ಷೆಗೆ ಹಿಂದುನ್ನಾನದ ಕರಾವದೊಂದು ಭಾಷೆಯ ಜ್ಞಾನವು ಅವಶ್ಯಕವಿದ್ದುದರಿಂದ ಇತರ ಇಂಗ್ಲಿಶ ವಿದ್ಯಾರ್ಥಿಗಳಂತೆ ಅರವಿಂದರು ಬಂಗಾಲಿಯನ್ನು