ದೇಶ ಸೇವೆ. ೨೫ ದೇಶದಲ್ಲಿ ವಾಶ್ಚಿಮಾತ್ಯ ಶಿಕ್ಷಣವು ಬೆಳೆದಂತೆ ಜನರೂ ಜಾಗ್ರತರಾಗಹತ್ತಿದರು. ಅತಿ ವರಿಚಯದಿಂದ ವಾಶ್ಚಿಮಾತ್ಯರ ಅಂತರಂಗವು ಗೊತ್ತಾಗಹತ್ತಿತು ಆರಂಭಕ್ಕೆ ಯುರೋ ಪಿಯನರೆಂದರೆ ದೇವರು, ಅವರ ಆಚಾರ ವಿಚಾರಗಳನ್ನು ಅನುಕರಿಸಿದರೇ ನಮ್ಮ ಗತಿ ಎಂದು ತಲೆಗೇರಿದ ಮಬ್ಬು ಕ್ರಮ ಕ್ರಮವಾಗಿ ಕಡಿಮೆಯಾಗಹತ್ತಿತು. ಬ್ರಿಟಿಶರ ಬಣ್ಣದ ಮಾತುಗಳ- ಬಣ್ಣದ ಕೃತಿಗಳ ರಹಸ್ಯವು ಜನರ ಲಕ್ಷದಲ್ಲಿ ಚನ್ನಾಗಿ ಬರಹತ್ತಿತು. ಬ್ರಿಟಿಶರು ಇಲ್ಲಿ ಬಂದದ್ದು ಮೋಕ್ಷ ಸಾಧನೆಯ ಉದ್ದೇಶದಿಂದಲ್ಲ, ಅವರು ರಾಜಕಾರಣ ಕುಶಲರಿರುವದರಿಂದ ತಮಗೆ ಬೇಕಾದ ಮಾತನ್ನು ನಮ್ಮ ಕೈಯಿಂದಲೇ ನವಿಮಾತು ಹೇಳಿ ಹೇಗೆ ಮಾಡಿಸಿಕೊಳ್ಳುತ್ತಾರೆಂಬದು ಜನರ ಧ್ಯಾನಕ್ಕೆ ಬಂತು ಆಗ ದೇಶದ ಸುಧಾರಣೆ ಯನ್ನು ಮಾಡಬೇಕೆಂದು ಪ್ರಯತ್ನಪಡುವ ಬೇರೆ ಬೇರೆ ವಾಂತದ ಕೆಲವು ಸುಶಿಕ್ಷಿತರು ಒತ್ತಟ್ಟಿಗೆ ನೆರೆದು ಸಭೆಗೂಡಿಸಿ ವಿಚಾರ ವಿನಿಮಯ ಮಾಡಬೇಕೆಂದು ಗೊತ್ತುಪಡಿಸಿದರು. ೧೮೮೫ನೆಯ ಇಸವಿಯಲ್ಲಿ ಮುಂಬಯಿಯಲ್ಲಿ ಹೀಗೆ ಎಲ್ಲ ಭಾಗಗಳಿಂದ ಜನರು ಕೂಡಿದರು. ವಿಚಾರ ಮಾಡಿ ದೇಶಕ್ಕೆ ಅವಶ್ಯವಿರುವ ಸಂಗತಿಗಳ ರರಾವು ಮಾಡಿದರು, ಇದೇ ಕಾಂಗ್ರೆಸ್ಸು ಇದು ಮುಂದೆ ಪ್ರತಿ ವರುಷ ದೇಶದಲ್ಲಿ ಬೇರೆ ಬೇರೆ ಕಡೆಗೆ ನೆರೆಯುವದು ಗೊತ್ತಾಗಿ ಆ ಕ್ರಮವು ಇಂದಿಗೂ ನಡೆದಿದೆ. ಇಂಗ್ಲಿಶರಂಥ ರಾಜಕಾರಣಿಗಳು ಇಂಗ್ಲಿಶರೇ ತಮ್ಮ ವಿಷಯಕ್ಕೆ ಜನರಲ್ಲಿರುವ ವಿಶ್ವಾಸವು ಹಾರದಿರಲಿಕ್ಕೆ ಅವರು ಮಾಡಿದ ಎನ್ನೊ ಕುಶಲ ಪ್ರಯತ್ನಗಳು ಎಂಧವನ ಬುದ್ದಿಗೂ ದಂಗು ಬಡಿಸುತ್ತವೆ. ಲಿಟನನಂಧ ಉದ್ದಾಮ ಅಧಿಕಾರಿಯನ್ನು ಕಳಿಸಿ ಒಮ್ಮೆ ಕೆಣಕುವದು; ಬಳಿಕ ರಿಪನನಂಧ ಉದಾರ ಮನಷ್ಯನನ್ನು ಕಳಿಸಿ ಸಮಾಧಾನ ಮಾಡುವದು ಅವರ ಪದ್ಧತಿಯಾಗಿದೆ. ಜನರಲ್ಲಿರುವ ಹುಳುಕುಗಳನ್ನು ಶೋಧಿಸಿ ತೆಗೆದು ಅದರ ಮೇಲೆ ರಾಜ್ಯಕರ್ತರು ತಮ್ಮ ಇಮಾರತು ನಿಲ್ಲಿಸುವರು, ಒಂದೂ ಮುಸಲ್ಮಾನರಲ್ಲಿ ಮನಸ್ಸು ನೆಟ್ಟಗಿರದ್ದನ್ನು ಕಂಡು ಅದರ ಲಾಭ ತಕೊಳ್ಳುವದೂ, ಬ್ರಾಹ್ಮಣ-ಬ್ರಾಹ್ಮಣೇತರರಲ್ಲಿ ಅಸಂತೋಷ ವಿದ್ದರೆ ಅದರ ಉಪಯೋಗ ಮಾಡಿಕೊಳ್ಳು ವದೂ ರಾಜಕಾರಣ ಕುಶಲರಾದ ಇಂಗ್ಲಿಶರಿಗೆ ಬಹು ಸುಲಭವಾಗಿದೆ. ದೇಶದ ಸ್ಥಿತಿಯ ವಿಚಾರ ಮಾಡಲಿಕ್ಕೆ ದೇಶದೊಳಗಿನ ಮುಖಂಡರು ಕಾಂಗ್ರೆಸ್ಸು ಸ್ಥಾಪಿಸಿ ಅಲ್ಲಿ ಪ್ರತಿವರುಷ ವಿಚಾರವಿನಿಮಯ ಮಾಡಹತ್ತಿದರು. ಕಾಂಗ್ರೇಸದ ರರಾವಗಳನ್ನು ತೆಗೆದು ಕ್ರಮವಾಗಿ ಅವುಗಳ ಭಾಷೆಯು ಹೇಗೆ ಓಜಸ್ವಿಯಾಗುತ್ತ ಹೋಗಿರುವದೆಂಬುದನ್ನು ನಿರೀಕ್ಷಿಸಿದರೆ ಆ ಸಭೆಯು ದಿನದಿನಕ್ಕೆ ಹೇಗೆ ಕಸುವುಳ್ಳದ್ದಾಗುತ್ತ ನಡೆಯಿತೆಂಬದು ಕಂಡು ಬರುವದು. ಈ ದೇಶಾಭಿಮಾನದ ಗಾಳಿಯು ಆರಂಭಕ್ಕೆ ಇಂಗ್ಲಿಶ ಬಲ್ಲ ಜನರಲ್ಲಿಯೇ ಇತ್ತು. ಕೆಳಗಿನ ವರ್ಗಕ್ಕೆ ದೇಶಾಭಿಮಾನವೆಂದರೆ, ಎಂಥ ವಸ್ತುವಿರುತ್ತದೆಂಬುದರ ಕಲ್ಪನೆಯು ಸಹ ಇದ್ದಿಲ್ಲ. ಸರಕಾರದ ಅಂತರಂಗವು ತಿಳಿಯದ ಕಾರಣ ಸಾಮಾನ್ಯ ಜನರು ಮಣ್ಣಿನಲ್ಲಿಯೇ
ಪುಟ:ಮಹರ್ಷಿ ಅರವಿಂದ ಘೋಷ್.djvu/೪೨
ಗೋಚರ