ವಿಷಯಕ್ಕೆ ಹೋಗು

ಪುಟ:ಮಹರ್ಷಿ ಅರವಿಂದ ಘೋಷ್.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫. ದೇಶಸೇವೆ.

ಯಾವ ಲೆಖದ ಸಲುವಾಗಿ ಖಟ್ಟಿಯಾಗಿತ್ತೋ ಆ ಲೇಖದ ಸಾರಾಂರವು ಕೊಡಲ್ಪಟ್ಟ ತೆಂದೂ, ೨೮ನೆಯ ತಾರೀಖಿನ ಸಂಚಿಕೆಯಲ್ಲಿ ಈ ಹಿಂದುಸ್ತಾನವು ಹಿಂದೂ ಜನರ ಸಲು ವಾಗಿ” ( India for Indians ) ಎಂಬ ಲೇಖವು ಬರೆಯಲ್ಪಟ್ಟಿತ್ತೆಂದೂ ಆರೋಪವಿಟ್ಟು, ಪೋಲಿಸರು ಈ ಪತ್ರದ ಮೇಲೆ ಖಟ್ಟೆಯನ್ನು ಹಾಕಿದರು. ಅಗಸ್ಟ ೬ನೆಯ ತಾರೀಖಿನ ದಿವಸ ಆಫೀಸಿಗೆ ಜಪ್ತಿಯು ಬಂತು, ಪೋಲಿಸರು ಕಾರ್ಯಾಲಯ ( Office) ದ ಸಂದೆ ಗೊಂದಿಗಳನ್ನು ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ತವಾಸ ಮಾಡಿದರು. ಒಂದೆರಡು ಗಾಡಿ ತುಂಬ ಕಾಗದಗಳನ್ನು ಜಪ್ತ ಮಾಡಿ ದರು ! ಮೇಲೆ ಹೇಳಿದ ಆರೋಪಿತ ಲೇಖಗಳನ್ನು ಶ್ರೀ ಅರವಿಂದ ಬಾಬುಗಳೆ ಬರೆದರೆಂಬ ಸಂಶಯದಿಂದ ವಾರಂಟು ಹೊರಡಿತು, ತಾ. ೨೦ನೆಯ ಅಗಸ್ಸಕ್ಕೆ ಶತಿ ಹಿಡಿದರು. ಬಳಿಕ ೨೫೦೦ ರೂಪಾಯಿಗಳ ಜಾಮೀನಿನ ಮೇಲೆ ಬಿಡುಗಡೆಯಾಯಿತು ೨೬ನೆಯ ಅಗತ್ವಕ್ಕೆ ನಯವಿಚಾರಣೆಗೆ ಆರಂಭವಾಯಿತು. ಕೆಲವರ ಸಾಕ್ಷಿಗಳಾದವು, ಆದರೆ ಅವುಗಳಿಂದ ಈ ಲೇಂಗಳನ್ನು ಶ್ರೀ ಅರವಿಂದರೇ ಬರೆದರೆಂದು ಸಿದ್ಧವಾಗಲಿಲ್ಲ. ಕ ರಣ ಬಿಪಿನವಾಲರನ್ನು ಸರಕಾರದವರು ತಮ್ಮ ವತಿಯಿಂದ ಸಾಕ್ಷಿಗೆ ಕರೆದರು. ಆದರೆ ಈ ಲರು ಇಂಧ ಅನ್ಯಾ ಯದ ಬಟ್ಟೆಯಲ್ಲಿ ಸಾಕ್ಷಿ ಹೇಳಲಿಕ್ಕೆ ತಮ್ಮ ಮನೋದೇವತೆಯು ಒಪ್ಪುವದಿಲ್ಲವೆಂದು ಹೇಳಿದರು. ಆಗ ಮ್ಯಾಜಿಸ್ಟ್ರೇಟರು ಸಿಟ್ಟಾಗಿ ಪಾಲರ ಮೇಲೆ ಖಟ್ಟಿ ಮಾಡುವದಕ್ಕೆ ಅಪ್ಪಣೆ ಕೊಟ್ಟರು; ಅದರಲ್ಲಿ ಅವರಿಗೆ ೬ ತಿಂಗಳ ಕೈದಿನ ಶಿಕ್ಷೆಯಾಯಿತು ' ಶ್ರೀ ಅರವಿಂದ ಬಾಬುಗಳ ನ್ಯಾಯ ವಿಚಾರಣೆಯು ಮುಂದೆ ನಾಗಿ ತಾ, ೨೩ನೆಯ ಸವಟಂಬರದ ದಿವಸ ನಿರ್ದೋಷಿ ಗಳೆಂದು ತೀರ್ವ ಸಿಕ್ಕಿತು. ಸರಕಾರದವರ ಅವಕೃಪೆಗೆ ನಾತ್ರರಾದ ಶ್ರೀ ಅರವಿಂದರನ್ನು ರಾಷ್ಟ್ರೀಯ ವಿದ್ಯಾಲಯ ದಲ್ಲಿ ಉಳಿಯಗೊಟ್ಟರೆ ಸಂಸ್ಥೆಗೆ ಬಾಧೆ ಬರುವದೋ ಏನೋ ಎಂಬ ಶಂಕೆಯು ಚಾಲಕ ವರ್ಗ ದಲ್ಲಿ ಸೇರಿತು. ಸ್ವತಂತ್ರ ಪದ್ಧತಿಯಿಂದ ಶಿಕ್ಷಣವನ್ನು ಕೊಡಬೇಕೆಂದು ರಾಷ್ಟ್ರೀಯ ವಿದ್ಯಾ ಲಯವು ಸ್ಥಾಪಿಸಲ್ಪಟ್ಟಿದ್ದರೂ ಕೆಲವು ಶ್ರೀಮಂತ ಆಶ್ರಯದಾತರು ಅರವಿಂದರನ್ನು ಇಟ್ಟು ಕೊಳ್ಳಲಿಕ್ಕೆ ಅನುಮಾನಿಸಹತ್ತಿದರು! ಇಂಧ ವರಿಯಿಂದ ಇಲ್ಲಿ ಇರುವದಕ್ಕಿಂತ ಬಿಟ್ಟು ಹೋಗು ವದು ಲೇಸೆಂದು ಬಗೆದು ಶ್ರೀ ಅರವಿಂದರು ತಮ್ಮ ಸ್ಥಳದ ರಾಜೀನಾಮೆಯನ್ನು ಕೊಟ್ಟರು. - ೭೫೦ ರೂ ಗಳ ಸಂಬಳವನ್ನು ಬಿಟ್ಟು ಕೇವಲ ಹೊಟ್ಟೆಗೆ ಬೇಕಾಗುವಷ್ಟು ಪ್ರತಿತಿಂಗ ಳಿಗೆ ಸಿಗುವ ಫಲವನ್ನು ಮಾತ್ರ ತಕೊಂಡು ಕೆಲಸ ಮಾಡಲಿಕ್ಕೆ ಒಪ್ಪಿದ ಶ್ರೀ ಅರವಿಂದ ಬಾಬುಗಳು ತಿಂಗಳೊಂದಕ್ಕೆ ಸಿಗುವ ತಮಗೆ ಈ ಕಲಸವನ್ನು ಬಿಡಬೇಕಾಯಿತೆಂದು ನಿರುತ್ಸಾ ಹಿಗಳಾಗಲಿಲ್ಲ. ಬಡೋದೆಯ ಬಡೇಜಾವಿನೊಳಗಿಂದ ಅವರನ್ನು ಯಾವ ರಾಷ್ಟ್ರ ಧರ್ಮವು ಎಳೆದುತಂದಿತ್ತೊ ಅದರ ಪ್ರಸಾರವನ್ನು ವಿದ್ಯಾಲಯದಲ್ಲಿ ಆಚಾರ್ಯರಾಗಿಯೇ ಮಾಡಲಿಕ್ಕೆ ಬರುತ್ತದೆಂತಲ್ಲ. ಈ ಧರ್ಮವನ್ನು ಜನರಲ್ಲಿ ಹಲವು ರೀತಿಯಿಂದ ಹರಡಲಿಕ್ಕೆ ಬರುತ್ತದೆ.