ವಿಷಯಕ್ಕೆ ಹೋಗು

ಪುಟ:ಮಹರ್ಷಿ ಅರವಿಂದ ಘೋಷ್.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦

  1. #

}\ ಮಹರ್ಷಿ ಅರವಿಂದ ಘೋಷ ಇವರ ಸಂಕ್ಷಿಪ್ತ ಚರಿತ್ರವು, ಭರತಖಂಡದ ಪ್ರಸ್ತುತಪರಿಸ್ಥಿತಿಯು ೧೯೦೭ – ೮ರಗಿಂತ ತೀರ ಭಿನ್ನವಾಗಿದ್ದು ಮಹರ್ಷಿಗಳ ಆಗಮನವು ಬ್ರಿಟಶ ಹಿಂದುಸ್ತಾನಕ್ಕೆ ಎಂದು ಆಗುವದೊ ಎಂದು ಎಲ್ಲರೂ ತೀರ ಆತುರರಾಗಿದ್ದಾರೆ. ನಾಗಪೂರದ ೧೯೨೦ರ ಕಾಂಗ್ರೆಸ್ಸಿಗೆ ಅಧ್ಯಕ್ಷರಾಗಲಿಕೆ ಸಮ್ಮತಿಯನ್ನು ಕೇಳಿದ್ದರು. ಆದರೆ ಮಹರ್ಷಿಗಳು ೧೨ ವರುಷಗಳವರೆಗೆ ಪೂರ್ಣ ತಪ ಶ್ಚರ್ಯವಾಗದ ವಿನಾ ಹೊರಬೀಳಲಿಕ್ಕೆ ಬರುವದಿಲ್ಲೆಂದು ಹೇಳಿ ಔತಣವನ್ನು ಸ್ವೀಕರಿಸ ಲಿಲ್ಲ ಕೆಲವರಿಗೆ ಮಹಿರ್ಷಿ ಅರವಿಂದರ ಮತಗಳು ಸೇರಲಿಕ್ಕಿಲ್ಲ; ಅಥವಾ ಅವು ಬೇರೆ ಕೆಲವು ಮಹಾ ಪುರುಷರ ಮತಗಳಂತೆ ಇರಲಿಕ್ಕಿಲ್ಲ ಅದರಿಂದ ಶ್ರೀಮದ್ಯೋಗಿಗಳ ಯೋ ಗ್ಯತೆ ಯು ಕಡಿಮೆಯೆಂದು ಅಥವಾ ಆ ಎರಡನೇ ಮಹಾಪುರುಷರು ಕುಲ್ಲಕರೆಂದು ಯಾರೂ ತಿಳಿಯುವ ಕಾರಣವಿಲ್ಲ. ಪ್ರಾಚೀನಕಾಲದಲ್ಲಿ ಸಹ ಸಮಾನ ಯೋಗ್ಯತೆಯ ಮಹಾಪುರುಷರಲ್ಲಿ ಮತಭೇದವು ಕಂಡು ಬರುತ್ತಿತ್ತು. ಭಿನ್ನ ಭಿನ್ನ ಸ್ಮೃತಿಗ್ರಂಥಗಳು ಈ ಮಾತಿಗೆ ಸಾಕ್ಷಿಯಾಗಿವೆ. ಮನು ಮತ್ತು ಯಾಜ್ಞವಲ್ಕರಲ್ಲಿ ಯಾರು ಶ್ರೇಷ್ಠರು', ಮಹಾತ್ಮಾಗಾಂಧಿ ಹಾಗೂ ಲೋಕಮಾನ್ಯರಲ್ಲಿ ಕೆಲವು ಮತಭೇದವಿದ್ದ ಮಾತ್ರಕ್ಕೆ ಅವರಲ್ಲಿ ಒಬ್ಬರು ಮತ್ತೊಬ್ಬರಿಗಿಂತ ಕಡಿಮೆಯೆಂದು ತಿಳಿಯುವದು ತಪ್ಪು, ಹಿಮಾಲಯದ ಶಿಖರಗಳು ಎತ್ತರವಾಗಿದ್ದಷ್ಟೇ, ನಾಸಿಫಿಕ ಮದಾಸಾಗರವು ಆಳವಾಗಿರುವದು. ಇವು ಗಳಲ್ಲಿ ಯಾವುದು ಶ್ರೇಷ್ಠ ಮತ್ತು ಸುಂದರವೆಂದು ವಾದಿಸುತ್ತ ಕೂಡುವದು ಮೂರ್ಖ ತನವು, ಬಾಳೆಯ ಸವಿ ಬೆಳೆಗೆ; ಮಾವಿನ ಸವಿ ಮಾವಿಗೆ, ಮಹರ್ಷಿ ಅರವಿಂದರು ತಮ್ಮ ತೀಕ ಬುದ್ಧಿ ಕೌಶಲ್ಯದಿಂದ ಜಗತ್ತಿನ ವಿಚಾರಕ್ಕೆ ಒಂದು ತರದ ಸ್ವರೂಪಗೊಡುತ್ತಲಿದ್ದಾರೆ. ಅದರಲ್ಲಿ ಮತಭೇದಗಳಾಗುತ್ತಿರಬಹುದು. ಅದರಿಂದ ಅವರ ವಿದ್ಯತೆಗೆ ಅಥವಾ ಯೋಗ್ಯ ತೆಗೆ ಏನೂ ಬಾಧೆಬರುವದಿಲ್ಲ ಇರಲಿ, ಮಹರ್ಷಿ ಅರವಿಂದರು ತಮ್ಮ ದೀರ್ಘ ತಪಶ್ಚರ್ಯ ದಲ್ಲಿ ಶಾಂತಚಿತ್ತದಿಂದ ಕಂಡು ಹಿಡಿದ , ಪರಮೇಶ್ವರೀ ಆದೇಶವನ್ನು ಭಾರತೀಯರಲ್ಲಿ ಪ್ರಸಾರ' ಮಾಡಲಿಕ್ಕೆ ಮತ್ತೆ ಬರಲೆಂದೂ, ಈ ಕಾರ್ಯವನ್ನು ಮಾಡಲಿಕ್ಕೆ ವರಮೇಶನು ಅವರಿಗೆ ದೀರ್ಘಾಯುರಾರೋಗ್ಯವನ್ನು ದಯಪಾಲಿಸಲೆಂದೂ ಅನನ್ಯಭಾವದಿಂದ ಪ್ರತಿ ಯೊಬ್ಬರೂ ಬೇಡಿಕೊಳ್ಳುವ.