ವಿಷಯಕ್ಕೆ ಹೋಗು

ಪುಟ:ಮಹರ್ಷಿ ಅರವಿಂದ ಘೋಷ್.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ಮತಗಳು ೫೩ • • • • • • • • • • • •/v. • • • • • • • • • • • • • • • • • ಅಂತರ್ಜ್ಞಾನವು ಪ್ರಾಪ್ತವಾಗಲಿಕ್ಕೆ ಆತ್ಮಶುದ್ಧಿಯಾಗಲಿಕ್ಕೆ ಬೇಕು, ಆತ್ಮಶುದ್ಧಿಯ ಸಲುವಾಗಿ ಪ್ರಾಚೀನ ಋಷಿಗಳು ಹಲವು ಮಾರ್ಗಗಳನ್ನು ಕಂಡುಹಿಡಿದಿದ್ದಾರೆ. ಅವುಗಳ ನಿಸ್ಸಂದಿಗ್ಧವಾದ ವರ್ಣನವು ಮೇಲೆ ಹೇಳಿದ ನಿಬಂಧದಲ್ಲಿ ಅರವಿಂದ ಯೋಗಿಗಳು ಮಾಡಿ ಟ್ಟಿದ್ದಾರೆ. ಹಠಯೋಗವು ಆತ್ಮಜ್ಞಾನಿಗೆ ಅಷ್ಟೊಂದು ಉಪಯುಕ್ತವಿಲ್ಲವೆಂದು ಅವರ ಮತವಿದೆ. ಯಾಕೆಂದರೆ ಅದರ ಸಾಧನೆಯು ಮಾನಸಿಕ ಶುದ್ದೀಕರಣಕ್ಕಿಂತಲೂ ದೇಹಶುದ್ಧಿ ಕರಣದ ಕಡೆಗೆ ಹೆಚ್ಚು ಸಹಾಯಕವಿದೆ. ರಾಜಯೋಗವು ಮಾತ್ರ ಆತ್ಮಸಾಧನೆಯ ಕೆಲಸದಲ್ಲಿ ಸಾಧಕನಿಗೆ ಉವಯುಕ್ತವಿದೆ ಇದರಂತೆಯೇ ಭಕ್ತಿ, ಜ್ಞಾನ, ಮತ್ತು ಕರ್ಮ ಮಾರ್ಗಗಳೂ ಇವೆ. ಇವುಗಳನ್ನು ಆಚರಿಸುವಾತನು ನಾಲ್ಕು ಸಾಧನಗಳ ಉಪ ಯೋಗವನ್ನು ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ;* ಶಾಸ್ತ್ರ, ಉತ್ಸಾಹ, ಗುರು ಮತ್ತು ಕಾಲ. ಶಾಸ್ತ್ರವೆಂದರೆ ಶಬ್ದ ಪ್ರಮಾಣ, ಶಬ್ದ ಪ್ರಮಾಣವು ವೇದ ಮತ್ತು ಉಪನಿಷತ್ತುಗಳಂಥ ಲಿಖಿತ ಗ್ರಂಥಗಳಲ್ಲಿ ಸಿಕ್ಕಬಹುದು, ಇಲ್ಲವೆ ಅಂತರಂಗದಲ್ಲಿ ಹೊಳೆಯಬಹುದು. ಪೂರ್ಣ ಶುದ್ಧಾವಸ್ಥೆಯು ಪ್ರಾಪ್ತವಾಗದೆ ಇದ್ದುದರಿಂದ ಅಂತಷ್ಟ ಆದೇಶವು ಶುದ್ಧವಿರುವ ಸಂಭ ನವು ಕಡಿಮೆ ಇರುವದರಿಂದ ವೇದಾದಿ ಅನುಭವಿಕ ಗ್ರಂಥಗಳನ್ನು ಅವಲಂಬಿಸಿ ನಡೆಯು ತಕ್ಕದ್ದು. ಯಾಕಂದರೆ ಇವು, ಋಷಿ-ಮುನಿಗಳಿಂದ ಆಚರಿಸಲ್ಪಟ್ಟು ಬಂದ ಅನುಭವ ಗಳಾಗಿವೆ. ಎರಡನೆಯ ಸಾಧನವು ಉತ್ಸಾಹವು. ಸಾಧಕನಲ್ಲಿ ಸಾಧ್ಯದ ವಿಷಯದಲ್ಲಿ ಉತ್ತಂತೆಯು ಬೆಳೆದಂತೆ ಫಲವು ಬೇಗ ಸಿಗುವದು. ಒಂದೇ ಒಂದು ಧೈಯದ ಹುಚ್ಚು ಹಿಡಿದು ಎರಡನೆಯ ಯಾವ ಕಲ್ಪನೆ, ವಿಚಾರಗಳ ಸಂಪರ್ಕವು ಸಹ ಆಗದ ಹಾಗಾಗಹತ್ತು ತಲೇ ಸಿಗ್ನಿಯು ಸಮೀಪಿಸಿತೆಂದು ತಿಳಿಯಬೇಕು. ಸರ್ವಶಕ್ತಿವಂತನ ದರ್ಶನದ ಉತ್ಸುಕ ತೆಯಲ್ಲಿ ತನ್ನ ಅಹಂಕಾರಾದಿಗಳನ್ನು ಮರೆತು ಹೋದಂತೆ ಸಾಧಕನು ಸಿದ್ದಿಯ ಸಮೀ ಪಕ್ಕೆ ಹೋಗುವನು, ಮಹತ್ವದ ಮೂರನೆಯ ಸಾಧನವೆಂದರೆ ಗುರುವು ಜಗತ್ತಿಗೇ ಗುರುವಾದ ಪರಮೇಶನೇ ಮನುಷ್ಯನ ಅಂತರಂಗದಲ್ಲಿ ವಾಸವಾಗಿರುವದರಿಂದ ಅವನಿಗೆ ಸಾಕ್ಷಿಯಾಗಿ ತನ್ನ ಯೋಗವನ್ನು ಸಾಗಿಸುತ್ತಿರಬೇಕು. ಆತನ ದಯೆಯ ವಿಷಯಕ್ಕೆ ಪೂರ್ಣ ನಂಬುಗೆಯನ್ನಿಟ್ಟು ಕಾರ್ಯ ಮಾಡಿದರೆ ಸಿದ್ದಿಯು ಸಿಗಲೇ ಬೇಕು. ಆದರೆ ಇದಕ್ಕೆ ಬಹಳ ಧೈರ್ಯವು ಬೇಕು. ಸಾಮಾನ್ಯ ವಿಚಾರದವರಿಗೆ ಇದು ಅಸಾಧ್ಯವು. ಹಲವು ತರದ ಮಾನವೀ ವೃತ್ತಿಗಳು ಆಗಾಗ್ಗೆ ಮಧ್ಯದಲ್ಲಿ ಬಂದು ಸಾಧಕನನ್ನು ಕಾರ್ಯಚ್ಯುತನಾಗಿ ಮಾಡಲು ಯತ್ನಿಸುವವು. ಆಗ ಸಾಧಕನಿಗೆ ಆ ಸ್ಥಿತಿಯಲ್ಲಿ ಕಲ್ಪನಾಗಮ್ಯನಾದ ಸರ್ವೆಶನ ವಿಷಯಕ್ಕೆ ಅಷ್ಟೊಂದು ವಿಶ್ವಾಸವುಂಟಾಗುವದಿಲ್ಲ. ಆದುದರಿಂದ ಇಂಥ ಸಮಯದಲ್ಲಿ ಆತನು ಸಾಕಾರ ಹಾಗೂ ಸಗುಣನಾದ ಗುರುವನ್ನೆಲ್ಲಿಯಾದರೂ ಗೊತ್ತು ಮಾಡಿಕೊಳ್ಳ ಬೇಕು. ಭಗವಾನ್ ಶ್ರೀ ಕೃಷ್ಣ, ರಾಮಕೃಷ್ಣ ಪರಮಹಂಸರಂಥ ಭೂತಕಾಲೀನ ಯೋಗಿಗಳ ಉಜ್ವಲ ಚರಿತ್ರಗಳನ್ನು ಲಕ್ಷಿಸಿ ಆಚರಿಸಬೇಕು. ಈ ರೀತಿಯಿಂದ ಸಾಧನೆಯಿಡುವದೂ

  • See - The Synthesis of Yoga ?” Arya Vol. I Page 364.