* ಉಪಸಂಹಾರ ೬೧ ಜನೆಯನ್ನು ಮಾಡುತ್ತಿರಲಿಕ್ಕೆ ಬೇಕು. ಯಾಕೆಂದರೆ ಸ್ವಲ್ಪ ವಿಚಾರಿಸಿದರೆ ಈ ಜನರು ಪೂರ್ಣವಾಗಿ ಈಶ ಇಚ್ಛೆಗಳಲ್ಲಿ ವಿಲೀನರಾಗಿರುವದಿಲ್ಲೆಂದು ಕಂಡು ಬರುವದು ಮಹರ್ಷಿ ಅರವಿಂದರು, “ನನಗೆ ಸ್ವಂತದ ಇಚ್ಛೆಗಳಿಲ್ಲ, ನಾನು ಪರಮಾತ್ಮನ ಕೈಯೊಳಗಿನ ಒಂದು ಆಯುಧವಾಗಿದ್ದು ಆತನ ಇಚ್ಛೆಗಳನ್ನು ಈಡೇರಿಸುವದರಲ್ಲಿ ನನ್ನ ಆಯುಷ್ಯದ ಉವಯೊ ಗವಾಗತಕ್ಕದ್ದಿರುತ್ತದೆಂದು ” ಅನ್ನುತ್ತಾರೆ. ಈ ಮಾತನ್ನು ಮಹರ್ಷಿಗಳು ಅನುವದರೊ ಘಗೂ, ಉಳಿದ ವಿಷಯಜಾಲದಲ್ಲಿ ತೊಳಲಾಡುವ ಜನರು ಅನ್ನುವದರೊಳಗೂ ಬಹಳ ಅಭ್ಯಂತರವಿರುತ್ತದೆ. ವಿಶ್ವದಲ್ಲಿ ಬೆರೆತು ತದಾಕಾರವನ್ನು ಹೊಂದಲಿಕ್ಕೆ ಅಡ್ಡ ಬರುವ ಅಹಂ ಕಾರವನ್ನು ಸಟ್ಟು ನಾಶಮಾಡಿ ಕISH ವೃತ್ತಿಯುಳ್ಳವರಾಗಿ ಶ್ರೀ ಅರವಿಂದ ಯೋಗಿ ಗಳು ಅನ್ನುವ ಮಾತಿದು. ಆದರೆ ಅದನ್ನೇ ವಿವರಿತ ಅರ್ಧದಲ್ಲಿ ಹೀನವೃತ್ತಿಗಳ ದಾಸರಾಗಿ ರುವ ಜನರು ಅಜ್ಞಾನದಿಂದ ಅಧವಾ ವಂಚನೆಯಿಂದ ಉಚ್ಚರಿಸಿದರೆ ಹೇಗೆ ಯೋಗ್ಯವಾ ದೀತು? ಅರವಿಂದ ಯೋಗಿಗಳು ದಾ ನರೂ, ನಿಮಿತ್ತ ಮಾತ್ರರೂ ಆಗಿರುವರು; ಮೇಲೆ ಹೇಳಿದಂಧ ಜನರೂ ಗುಲಾಮರೂ ನಿಮಿತ್ತ ಕಾರಣರೂ ಆಗಿರುವರು. ಆದರೆ ಮೊದಲನೆ ಯವರು ಪರಮಾತ್ಮನ ಆದೇಶಗಳನ್ನು ಗ್ರಹಿಸಿ ಆಚರಿಸುವದರಲ್ಲಿ ತತ್ಪರರಾಗಿದ್ದರೆ, ಎರಡ ನೆಯ ವರ್ಗದವರು ತಮ್ಮ ಇಂದ್ರಿಯ ವಿಕಾರಗಳ ಅಪ್ಪಣೆಗಳನ್ನು ಅಮಲಿನಲ್ಲಿ ತರುವದ ರೊಳಗೆ ಮಗ್ನರಾಗಿರುತ್ತಾರೆ. ಯಾರ ಬುದ್ಧಿಯು ಯಾವಾಗಲೂ ತೀರ ಶುದ್ಧ ನಿರ್ಣಯ ವನ್ನೇ ಕೊಡುವದಿಲ್ಲ, ಅಥವಾ ಯಾರ ನೈರ್ತಿಯು ಹಗಲೆಲ್ಲ ನವಿತ್ರವಿಚಾರದ ಕಡೆಗೇ ಇರುವದಿಲ್ಲ, ಇಂಥ ಜನರಿಗೆ, “ ನನಗೆ ಈಗ ದೇವರು ಹೀಗೆ ಮಾಡಲಿಕ್ಕೆ ಬುದ್ದಿಯನ್ನು ಕೊಟ್ಟಿದ್ದಾನೆ, ನಾನು ಮಾಡುತ್ತೇನೆ, ” ಎಂದೆನ್ನಲಿಕ್ಕೆ ಎಳ್ಳಷ್ಟೂ ಅಧಿಕಾರವಿಲ್ಲ. ಒಂದು ವೇಳೆ ಈ ಪ್ರಕಾರದ ಭಾವಯನ್ನು ಉಪಯೋಗಿಸುತ್ತಿದ್ದರೆ ಅವರು ಅಜ್ಞಾನಿಗ ಲಾದರೂ ಇರಬೇಕು; ಅಧವಾ ಮೋಸಗಾರರಾದರೂ ಇರಲಿಕೆ,ಬೇಕು. ಆದುದರಿಂದ ಯಾರಿಗೆ ಮಹರ್ಷಿಗಳ ಸಂದೇಶದಂತೆ ನರಮೇಶನಲ್ಲಿ ತದಾಕಾರ ವೃತ್ತಿಯನ್ನು ಹೊಂದಿ ಆತನ ಇಚ್ಛೆಗಳೇ ತನ್ನ ಇಚ್ಛೆಗಳೆಂದು ಮಾಡಿಕೊಂಡು, ಸರ್ವೆಶನ ಆಜ್ಞಾನುಸಾರವಾಗಿ ನಡೆಯುವ ಇಚ್ಛೆಯಿರುವದೂ ಅವರು ಹಿಂದೆ ಹೇಳಿದಂತೆ ಮುಂಚೆ ಆತ್ಮಶುದ್ಧಿಯನ್ನು ಮಾಡಿಕೊಳ್ಳಲಿಕ್ಕೆ ಬೇಕು ಎಲ್ಲ ಇಂದ್ರಿಯಗಳಲ್ಲಿ ಮನಸ್ಸು ಶ್ರೇಷ್ಠವಾ ದದ್ದು, ಆದ್ದರಿಂದ ಮುಂಚೆ ಮನಸ್ಸಿನಿಂದ ಆರಂಭಿಸಬೇಕು, ಯಮ ನಿಯಮಾದಿಗಳು ಮನಸ್ಸು ಅಂಕಿತವಗಬೇಕೆಂದೇ ಇರುತ್ತವೆ. ಕಾರಣ ಮುಂಚೆ ಮನಸ್ಸಿಗೆ ಕೈಹಾಕ ಬೇಕು. ಇದನ್ನು ಮಾಡುವ ಮುಂಚೆ ಮನಸ್ಸನ್ನು ಉಸುರುಗಟ್ಟುವ ಸಂಕುಚಿತ ವಾತಾ ವರಣದೊಳಗಿಂದ ಹೊರಗೆ ತೆಗೆದು ಅದಕ್ಕೆ ಸ್ವಾತಂತ್ರ್ಯದ ಶುದ್ಧ ಹವೆಯನ್ನು ಉಸು ರಾಡಿಸಕೊಡಬೇಕು. ವ್ಯಕ್ತಿ ವಿಷಯಕ ಸಮಾಜವಿಷಯಕ ಅಥವಾ ಇತರ ಯಾವದೇ ತರದ ಕುಲ್ಲಕ ಕಲ್ಪನಾವಲಯಗಳೊಳಗಿಂದ ಒಳ್ಳೇ ಎದೆಗಾರಿಕೆಯಿಂದ ಮೊದಲು ಹೊರ ಬಿದ್ದು ಹೊಸದೃಷ್ಟಿಯಿಂದ ಜಗತ್ತನ್ನು ನೋಡಲಿಕ್ಕೆ ಕಲಿಯಬೇಕು.
ಪುಟ:ಮಹರ್ಷಿ ಅರವಿಂದ ಘೋಷ್.djvu/೭೮
ಗೋಚರ