ವಿಷಯಕ್ಕೆ ಹೋಗು

ಪುಟ:ಮಹರ್ಷಿ ಅರವಿಂದ ಘೋಷ್.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪ ಮಹರ್ಷಿ ಅರವಿಂದ ಕೈವ ಇವರ ಸಂಕ್ಷಿಪ್ತ ಚರಿತ್ರವು, ಲ್ಪಟ್ಟವು. ಇವುಗಳನ್ನು ಇರಗೊಡುವದು ತರವಲ್ಲವೆಂದು ಮುರಿದರಲ್ಲದೆ, ಈ ಸಂಸ್ಥೆ ಗಳು ದೋಷಿಯೆಂದಲ್ಲ! ಕಾಲವು ಬದಲಾದಂತೆ ರಾಜ್ಯ ಪದ್ಧತಿಯಲ್ಲಿ ಹೆಚ್ಚು ಕಡಿಮೆಯಾಗ ದಿದ್ದರೆ ಹೀಗಾಗತಕ್ಕದ್ದು ಸ್ವಾಭಾವಿಕವಿದೆ. ಅಧಿಕಾರಿಗಳು ಸಮಾಜದ ಹಕ್ಕುಗಳನ್ನು ಸಂಶಯದ ದೃಷ್ಟಿಯಿಂದ ನೋಡಹತ್ತಿದರು. ಭಾಷಾಸ್ವಾತಂತ್ರ, ಮುದ್ರಣ ಸ್ವಾತಂತ್ರ್ಯ ಗಳನ್ನು ಹರಣಮಾಡಹತ್ತಿದರು. ಜನರಲ್ಲಿ ಸದ್ಗುಣಗಳು ಬೆಳೆದು ಸ್ವಾವಲಂಬನದ ಗುಣವು ಬೆಳೆದರೆ ರಾಜ್ಯದಲ್ಲಿ ಜಾಗೃತಿಯಾಗುವದೆಂಬ ಭೀತಿಯಿಂದ ಅಧಿಕಾರಿಗಳು ಸಮಾಜದ ಹಕ್ಕುಗಳನ್ನು ನಷ್ಟ ಮಾಡಿದರು, ಆದರೆ ಇದರಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ. ಪ್ರೆಸ್ಸು ಗಳು ಹೆಸರಿಗೆ ಮಾತ್ರ ಸ್ವತಂತ್ರವಾಗಿವೆ. ತಲೆಯ ಮೇಲೆ ಪ್ರಸ್ ಆಕ್ಕಿನ ಬಿಚ್ಚು ಗತ್ತಿಯು ಜೋತಾಡುತ್ತಲಿದೆ. ಅದರಲ್ಲಿ ಸ್ವಾತಂತ್ರದ ಅಲ್ಪಾಂರವಾದರೂ ಇಲ್ಲ. ರಾಜ ದ್ರೋಹದ ಸುಂದರವಾದ ಕಟ್ಟಳೆಯಿದೆ. ಅದರ ಅನಿಶ್ಚಿತ ಸ್ವರೂಪದೊಳಗಿನ ಶಬ್ದ ಜಾಲ ದೊಳಗೆ ಸಿಗದ ಮನುಷ್ಯನೇ ಇಲ್ಲ, ಮ್ಯಾಜಿಸ್ಟ್ರೇಟನಿಗೆ ಮನಸ್ಸಿಗೆ ಬಂದರೆ ಬೇಕಾದ ವರನ್ನು ಬೇಕಾದಾಗ ಹಿಡಿಯಬಹುದು. ಆತನ ಇಚ್ಛೆಗೆ ಬರುತ್ತಲೆ ಬೇಕಾದ ಒಂದು ಲೇಖವು ರಜದೆ "ಹಿಯಾಗಬಹುದು, ಅಧಿಕಾರಿಯ ಇಚ್ಛೆಗೆ ಬಂದಾಗ ತನ್ನ ಲೆಕ್ಕಣಿ. ಕೆಯ ಗೀನೆಂದಿಗೆ ಸಮಾಜಗಳ ಹಕ್ಕುಗಳನ್ನು ನಷ್ಟವಡಿಸಬಹುದು. ಬ್ರಿಟಿಶಜನರ ಪ್ರವೃತ್ತಿಯು ಸ್ವಭಾವತಃ ಸ್ವಾತಂತ್ರ್ಯದ ಕಡೆಗೆ ಇರುತ್ತದೆ. ಆದುದರಿಂದ ಅವರಿಂದ ಇಲ್ಲಿ ಅಷ್ಟೊಂದು ಊರಿನಿಂದ ಒಲುಮೆಯನ್ನು ಮಾಡಲಿಕ್ಕೆ ಆಗಲೊಲ್ಲದಾಗಿದೆ. ಆದರೆ ಆ ಕಾಲವೂ ಬರಬಹುದುಇಂಥ ಪರಿಸ್ಥಿತಿಯಲ್ಲಿ ನಾವು ಮಾಡತಕ್ಕದ್ದೇನು? ಕೇವಲ ಸಂಶಯದ ಮೇಲೆ ನಮ್ಮನ್ನು ಹಿಡಿಯಬಹುದು; ಪೀಡಿಸಬ ಹುದು; ತಲೆಯಮೇಲೆ ಜೋತಾಡುತ್ತಿರುವ ಪ್ರಸಆಕ್ಸಿನ ವಿಚ್ಚುಗತ್ತಿಯು ಕಳ ಕೆಳಗೆ ಬರಬಹುದು, ನಮ್ಮ ಸಂಸ್ಥೆಗಳು ಬೇಕಾದಾಗ ದೋಷಿಗ ಳೆಂದೂ ನಿಯಮಬಾಹ್ಯಗಳೆಂದೂ ಪ್ರಕಟಿಸಲ್ಲ ಡಬಹುದು. ಆದರೆ ಬೇಕಾದಂಥ ಕೆರದೆಗಳಾಗಲಿ, ಕಠಿಣ ಪ್ರಸಂಗಗಳು ಬರಲಿ ನಮ್ಮ ಮಾರ್ಗ ದ ಆಕ್ರಮಣವನ್ನು ನಾವು ಮುಂದೆ ಹಾಗೇ ಮಾಡಲಿಕ್ಕೆ ಬೇಕು. ಇಂದಿಗಿಂತಲೂ ನಾಳಿನ ಪರಿಸ್ಥಿತಿಯು ಹೆಚ್ಚು ಕಠಿಣವಾಗಬಹುದು. ಆದರೆ ನಮ್ಮ ಕಾರ್ಯವನ್ನು ನಾವು ನಿಲ್ಲಿಸಕೂಡದು. ನಮ್ಮ ದೇಶ ಭಕ್ತಿಯ ಮೇಲೆ ಬೇಕಾದಂಥ ಆರೋಪಗಳು ಮಾಡಲ್ಪಡಲಿ ಎಂಧ ಗಂಡಾಂತರಗಳಿಗೆ ಎದುರಾಗುವ ಪ್ರಸಂಗವು ಬರಲಿ ನಾವು ನಮ್ಮ ಕರ್ತವ್ಯ ಕರ್ಮವನ್ನು ಮಾಡಲಿಕ್ಕೆ ಬೇಕು. ಮುಂದೆ ಸಾಗಲಿಕ್ಕೆಬೇಕು. ಸಮಿತಿಗಳೆಂದರೇನು? ಸಮಿತಿಗಳು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಗಳಿಂದ ಆಗುತ್ತವೆಂತಲ್ಲ, ಅದಕ್ಕೆ ಕೂಡಲಿಕ್ಕೆ ಒಂದು ನಿಶ್ಚಿತಪ್ಪಳವೂ ಬೇಕೆಂತಲ್ಲ. ಚ ಛ