vii ಅವು ಸುಚಿತವಾಗುವಂತೆ ಪ್ರಯೋಗಿಸಬೇಕೆಂದು ಸಂಧಿಪ್ರಕರಣ ಸೂತ್ರಗಳಿಂದ ಸ್ಪಷ್ಟವಾಗುವುದು. ಆದರೆ ಮೇಲೆ ತೋರಿಸಿರುವ ಪದ್ಯ ದಲ್ಲಿ ಜಯನ ” ಜಯ ಜಯತು' ಎಂಬ ಸಂಸ್ಕೃತ ಪದಗಳಿಗೆ ಅವಧಾನದಿಂದ 1 ಎಸೆ' ಧಾತುವನ್ನು ಪ್ರಯೋಗಿಸಿರುವುದಿಲ್ಲ. ಸ್ತುತಿ ವಾಕ್ಷವೆಲ್ಲವೂ ಮುಗಿದ ಬಳಿಕ ( ತಂದೆ ರಕ್ಷಿಸೆನುತ್ತೆ ಚರಣದಂದದಲಿ ” ಎಂಬ ಅದೇ ಸಂಧಿಯ ಹದಿನಾರನೆಯ ಸದ್ರದಲ್ಲಿ ಎನ್ನುತ್ತೆ' ಎಂದು ಈ ಧಾತುವಿನ ಪ್ರಯೋಗವಿದೆ; ಅದರನ್ನೇ (ಜಯನಮೋ' (ಜಯಜಯತು' ಜಯ' ಎಂದಿರುವ ಪ್ರತಿಯೊಂದು ಸ್ಥಳದಲ್ಲಿಯೂ ಆವೃತ್ತಿ ಅಥವಾ ತಂತ್ರ ನ್ಯಾಯದಿಂದ ಅನುಸಂಧಾನಕ್ಕೆ ತಂದುಕೊಂಡರೆ ವ್ಯಾಕರಣವಿರೋ ಧವಿಲ್ಲದೆ ಉಘಪನ್ನವಾಗುವುದು. ಹೀಗೆಯೇ ಅಲ್ಲಲ್ಲಿ ಸರ್ವಥಾ' ಎಂದು ಸಂಸ್ಕೃತ ತದ್ಧಿತಾಂತಾವ್ಯಯ ವನ್ನು < ಪುನರಸಿ' ಎಂದು ನಿಪಾತ ಸಮುದಾಯವನ್ನು “ ತವ' ಎಂದು ಸುಬಂತರೂಪವನ್ನು ಕವಿಯು ಪ್ರಯೋಗಿಸಿರುತ್ತಾನೆ. ಇದು ಅನುಕ ರಣ ಸ್ಥಳಗಳಲ್ಲದ್ದರಿಂದ ಮೇಲೆ ಹೇಳಿದ ಸಮಾಧಾನಕ್ಕೆ ವಿಷಯವಲ್ಲ. ಆದರೂ ಆ ಶಬ್ದಗಳು ಸಂಸ್ಕೃತದಲ್ಲಿ ಹೇಗೆ ಶ್ರುತವಾಗಿರುವುದೋ ಅದೇ ರೀತಿಯಾಗಿ ತತ್ವಮಬುದ್ದಿಯಿಂದ ಪ್ರಯುಕ್ತವಾಗಿದೆ ಯೆಂದು ಸಮಾ ಧಾನವನ್ನು ಊಹಿಸಬಹುದು. ( ಪುನರಪಿ' ಎಂಬುದು ಏಕನಿಸಾತವಲ್ಲ. ನಿಪಾತದಯವು. ಆದಾಗ್ಯೂ ಸಂಸ್ಕೃತದಲ್ಲಿ ಕಿಮುತ' ಇದೇ ಮೊದ ಲಾದವುಗಳಂತೆ ಸಮುದಾಯದಿಂದ ಏಕಾರ್ಥದಲ್ಲಿ ಪ್ರಯೋಗಿಸಲ್ಪಡುತ್ತಾ ದ್ದರಿಂದ ಏಕನಿಪಾತದಂತೆ ಭಾವಿಸಿ ಕವಿಯು ಪ್ರಯೋಗಿಸಿರುತ್ತಾನೆ. ಇದೇರೀತಿಯಾಗಿ ಕವಿಯು ಅಲ್ಲಲ್ಲಿ ಉಪಯೋಗಿಸಿರುವ ತೊಳೆ ವುತ್ತ ' ಎಂಬುದು ಮೊದಲಾದ ಶಬ್ದಗಳಲ್ಲಿ ಯಗಾಗಮಸ್ಥಾನದಲ್ಲಿ ಬಂದಿ ರುವ ವಗಾಗಮವು ಸೂತ್ರದಲ್ಲಿನ ಬಹುಳಗ್ರಹಣದಿಂದ ವ್ಯವಸ್ಥಿತವಿಭಾ ಪಾತ್ಪವನ್ನಾಶ್ರಯಿಸಿ ಸಮಾಧಾನಮಾಡತಕ್ಕದ್ದಾಗಿರುತ್ತದೆ. ಮತ್ತು ಕೆಲವೆಡೆಯಲ್ಲಿ ಸಂಧಿಯನ್ನೇ ಮಾಡಿರುವುದಿಲ್ಲ, ಪದೇ ತು ಸಂಹಿತಾ ನಿತ್ಯಾ ನಿತ್ಯಾ ಧಾತೂಪಸರ್ಗಯೋಃ |
ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೧೪
ಗೋಚರ