115 ಸಂಧಿ ೧೦] ಆಕಪರ್ವ ಝುಡಿತೆಯಲಿ ತಾ ಕಳುಹ ಬಂದನು ಕದ್ರುವಿನ ಮನೆಗೆ || ತಡೆಯದೈದಿದ ಸುಧೆಯ ತೋಯಿಸಿ ಯಡಿಗೆಗಿ ತನ್ನಾತ್ಮ ಜನನಿಯ ಬಿಡಿಸಿದನು ತಾ ಸೆಖೆಯನಾಹ್ಮಣ ಮುನಿಪ ಕೇಳಂದ | ೫೪ ಗರುಡನು ವಿತಳಕ್ಕೆ ಹೋಗಿ ಸರ್ಪಗಳನ್ನು ನುಂಗುವಿಕೆ, ಇನ್ನು ಹೇಷ್ಮೆ ವ್ಯಾಳಜಾತಿಯ ಕುನ್ನಿಗಳಿಗಿನ್ನಿಂತು ಯೆನುತಲಿ ಪನ್ನಗಾರಿಯು ವಿತಳಕಿಕಿದನು ನಿಮಿಷಮಾತ್ರದಲಿ | ಪನ್ನಗರ ಮೊಹರವ ನೆಲ್ಲವ ಮನ್ನಿಸದೆ ಲೇಸಾಗಿ ನುಂಗಿದ ತನ್ನ ಜನನಿಯ ಹುಸಿದು ತೊತ್ತನು ಮಾಡಿ ಕೊಟ್ಟುದಕೆ || ೫೫ ಆಗ ಸರ್ಪಮುಖ್ಯರು ಗರುಡನಿಗೆ ವರ್ಷಕ್ಕೊಮ್ಮೆ ಕಪ್ಪವಂ ಕೊಡಲೊಪ್ಪಲು ಕೊಲೆ ಬಿಡುವಿಕೆ ಉರಗಜಾತಿಯದೆ ನುಂಗಲು ನೆರೆದು ನಾಲ್ವರು ಬಂದು ನಮಗಿ ಇರಿದು ಬದುಕಲು ನಿನ್ನ ಕಯ್ಯಲದೆಂದು ಬಿನ್ನವಿಸೆ | ಗರುಡದೇವರು ಬತಿಕ ನಾಗರ ಹಿರಿಯರೊಳು ಪರಿವಿಡಿಯೆ ನುಡಿ ದರು ಸುರರ ದಿನಕೊಂಮ್ಮೆ ಕೊಡುವುದು ನಮಗೆ 1 ಕಪ್ಪವನು | ಎನಲು ಶ್ರಾವಣ ಶುದ್ಧ ಪಂಚಮಿ ದಿನದಿ ಕೊಡುವೆವು ನಿಮಗೆ ಕಪ್ಪವ ನೆನಲು ಬಿಟ್ಟನು ಕೊಲೆಯನಾಹ್ಮಣ ಗರುಡನಹಿಕುಲದ | ಮನವೊಲಿದು ಕರ್ಕೊಟಕನ ತಾ ವಿನತೆಯಾಜ ಕರೆದು ನುಡಿದನು ಅನುಜ ಕೇಳೆ ನಿನ್ನ ನೆನೆವರು ಧನ್ಯರಹರೆಂದು || 1 ಕೊಡುವವು ನಿಮಗೆ, ಕ, ಖ. ೫೬
ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೧೪೮
ಗೋಚರ