ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮುಟ್ಟುವುದು ಸತಿಯರಿಗೆ ಹೀನವೆ ನಿಮ್ಮವೆನಗಾಯ್ಕೆಂದು ಬೆರಗಾದಳು ಸರೋಜಾಕ್ಷಿ || ಅದೇ ಗ್ರಂಥದಲ್ಲಿ (3-24) ಮುಗೆಯರೊಳತಿ ಹೀನವಹುದೆಂ ದೆದ್ದು ನೋಡುವ ಮರೆದು ಮಲಗಿರೆ ಮಧ್ಯರಾತ್ರಿಯೊಳದು ಕಾಪಾಂಗಾರಸೈವರಿದ || ೨ ಈರೀತಿಯಾಗಿ ಸರ್ವಕವಿಸಾಧಾರಣಗಳಾದ ರೀತಿಯಿಂದಲೇ ಈಗ್ರಂಥವು ರಚಿತವಾಗಿರುತ್ತದೆ. ಆದುದರಿಂದ ಈ ಗ್ರಂಥವು ಇತರಗ್ರಂಥಗಳಂತೆ ಉಪಾದೇಯವೆಂದು ಪ್ರಕಟಿಸಲ್ಪಟ್ಟಿದೆ. ಈಗ್ರಂಥದ ಶೋಧನವು ನಾಲ್ಕು ಪ್ರತಿಗಳ ಆಧಾರದಿಂದ ನಡೆದಿದೆ. ಅದರಲ್ಲಿ ಮೂರು ಪ್ರತಿಗಳು ತಾಳಪತ್ರಾತ್ಯಕಗಳು, ಒಂದುಮಾತ್ರ ಕಾಗದದ್ದು. ತಾಳ ಪತ್ರದ ಪ್ರತಿಬಂದು, ಕಾಗದದ ಪ್ರತಿ ಒಂದು ಸಹ ಒಂದೇ ಮೂಲಪ್ರತಿಯಿಂದ ಒರೆಯಲ್ಪಟ್ಟದ್ದಾಗಿ ಕಾಣುತ್ತಿವೆ. ಉಳಿದ ಪ್ರತಿಗಳಲ್ಲವೂ ಭಿನ್ನ ಭಿನ್ನ ಪಾಠಾದಿಯುಕ್ತವಾಗಿ ಇರುವುವು. ಅದರಲ್ಲಿ ಎರಡುಪ್ರತಿಗಳ ಆಧಾರದಿಂದ ಮುದ್ರಣ ಆರಂಭಿಸಿ ಕೆಲವು ದೂರ ಸಾಗಿದ ಮೇಲೆ ಮತ್ತೆರಡು ಪ್ರತಿಗಳು ದೊರೆತದ್ದರಿಂದ ಮುಂದಿನ ಭಾಗವು ಚನ್ನಾಗಿ ಶೋಧಿತವಾಗವಕಾಶ ಸಿಕ್ಕಿತು. “ತತ್ತೂರ್ವಭಾಗವನ್ನು ಈ ಎರಡು ಪ್ರತಿಗಳ ಸಹಾಯದಿಂದ ಶೋಧಿಸಿ ಶೋಧನಪತ್ರಿಕೆಯಲ್ಲಿ ವ್ಯಕ ಪಡಿಸಿರುವೆವು. ಆದುದರಿಂದಲೇ ಶೋಧನಪತ್ರಿಕೆಯು ಸ್ವಲ್ಪ ಹೆಚಿ ರುವುದು. ಅಲ್ಲಲ್ಲಿ ಪುಸ್ತಕಭೇದದಿಂದ ಕಂಡು ಬಂದ ಪಾಠಭೇದಗಳನ್ನು ಆಯಾ ಪುಟ ಗಳ ಅಡಿಯಲ್ಲಿ ತೋರಿಸಿರುವೆವು. ಅಯುಕ್ತವಾದ ಪಾಠಭೇದಗಳನ್ನು ಬಿಟ್ಟಿರುವೆವು. ಕೆಲವು ಸ್ಥಳಗಳಲ್ಲಿ ಮಾತ್ರ ಸ್ವತಂತ್ರಶೋಧನೆಯ ಆವಶ್ಯಕವಾಗಿ ಮಾಡಬೇಕಾಯಿತು. "ಈ ವಿಷಯಗಳನ್ನು ಅಭಿಜ್ಞರೂ ಮತ್ತು ಗುಣಗ್ರಾಹಿಗಳೂ ಆದ ವರೆಲ್ಲರೂ ಮನಸ್ಸಿಗೆ ತಂದು ಆನಂದಿಸುವರೆಂದು ನಂಬಿರುತ್ತೇವೆ. ೫ . 4೬೫೩A