ವಿಷಯಕ್ಕೆ ಹೋಗು

ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

196 [ಆದಿಪರ್ವ ೯೯ ೧೦೦ ಮಹಾಭಾರತ ಅಂದು ತನ್ನ ಪಗಮಿಸಲಾತನ ಕರೆಸಿ ಭೂವರನು | ಛಂದವರ ಸಮ್ಮತಿಯ ನೀವುತ ಲಂದು ತತ್ಕಾರಣವ ಮನದೊಳೆ ಗಂದು ತಾ ತಿಳಿವು ಬೆಸಗೊಂಡನು ಮುನೀಶ್ವರನ || ಏನು ಬೇಹುದು ನಮ್ಮೆಡೆ ಯೆಲೆಲೆ ಭೂನುತನೆ ಹೇಪನಲುದುಕನು ಮಾನಿಸದೆ ಸಂದೇಹವೆಲ್ಲವನುಟಿದು ನೃಪನೊಡನೆ | ನಾನು ಗುರುಸೇವಾರ್ಥವಾಗಿಯೆ ಮಾನವೇಶ್ವರ ಬಂದೆ ನಿನ್ನ ಈ ಮಾನಿನಿಯ ಘನರತ್ನ ಕುಂಡಾಕಾಂಕ್ಷೆಯಿಂದೆಂದ | ಎನಲು ನಕ್ಕನು ನೃಪತಿ ನಿನ್ನಯ ಮನದಭೀಷ್ಟವನೀವಳನ್ನ ಯ ವನಿತೆಯಲ್ಲಿಗೆ ಹೋಗು ಬೇಡಿದೊಡೇವಳಂದೆನಲು | ಘನಮಹಿಮನೈ ತಂದು ಕಾಣದೆ ವನಜಮುಖಿಯನಿದೇನು ವಿಸ್ಮಯ ವೆನುತ ತನ್ನವನೆಡೆಗೆ ಬಂದಿಂತೆಂದನಾಮುನಿಸ | ಹೋಗೆನಂತಃಪುರಕೆ ಕಾಣೆನು ಮೇದಿನೀಶ್ಚರ ನಿನ್ನ ಸತಿಯನಿ ದಾದ ಕಾರಣವೇನು ಬೆಸಗೊಳಲಾತ ನಸುನಗುತ | ಭೂದಿವಿಜ ನೀನಶುಚಿ ಯೆನಿಸುವೆ ಪಾದಕರಪ್ರಕ್ಷಾಲನಾಚಮ ನಾದಿಪರಿಶುದ್ದಿಯಲಿ ಪೋದರೆ ಕಾಂಬೆ ನೀನೆಂದ || ಮುನಿಪನಾರೀತಿಯಲಿ ಪೋದನು ಘನಪತಿವ್ರತೆಯೆಡೆಗೆ ಮತ್ತಾ ವನಿತೆ ಯಿದಿರೆದ ರ್ಫೈಸತ್ಕಾರಂಗಳನು ರಚಿಸಿ | ೧೦೧ ೧೦೦