ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪಸಿಂಹ www - ಈ ಭೀಷಣಪ್ರದೇಶದಲ್ಲಿ ಮೇವಾಡದ ಜನರು ಕ್ರಮವಾಗಿ ಬಂದು, ವಾಸಮಾಡಹತ್ತಿದರು. ಎಲ್ಲರೂ ಪ್ರತಾಪನ ಆಜ್ಞೆಯನ್ನು ಪಾಲಿಸಬೇಕು; ಇಲ್ಲ ವಾದರೆ ಯಾವ ತರದ ಶಿಕ್ಷೆಯನ್ನನುಭವಿಸಬೇಕಾಗುತ್ತಿದ್ದಿತೆಂಬದನ್ನು ನಾವು ಮೊದಲು ಹೇಳಿದ್ದೇವೆ. ಈ ಮೇರೆಗೆ ಪ್ರತಾಪನ ಆಜ್ಞೆಯನ್ನು ಪಾಲಿಸುವದರಲ್ಲಿ ಪ್ರಜೆಗಳ ಸ್ವಾರ್ಥವಿಲ್ಲದಿರಲಿಲ್ಲ. ಒಂದುವೇಳೆ ರಜಪೂತರು ಪ್ರತಾಪನ ಕಣ್ಣು ತಪ್ಪಿಸಿ, ಎಲ್ಲಿಗಾದರೂ ಹೋಗಬಹುದಾಗಿದ್ದಿತು, ಆದರೆ ಈ ಜನರು ಮೊಗಲರ ಕಣ್ಣು ತಪ್ಪಿಸಲು ಸಮರ್ಥರಾಗುತ್ತಿದ್ದಿಲ್ಲ, ಅಂದರೆ ಮೊಗಲರ ಕೈಯಲ್ಲಿ ಸಿಕ್ಕು, ಅವರ ಅತ್ಯಾಚಾರಕ್ಕೆ ಬಲಿಬೀಳಬೇಕಾಗುತ್ತಿದ್ದಿತು. ಪ್ರತಾಪನಿಗೆ ಯೋಗ್ಯ ಶಿಕ್ಷೆ ಯನ್ನು ವಿಧಿಸುವದಕ್ಕಾಗಿ ಅವನನ್ನು ಪೀಡಿಸುವದಕ್ಕಾಗಿ ಮೊಗಲರ ಸೈನ್ಯವು ನಾಲ್ಕೂ ಕಡೆಯಿಂದ ಬಂದು, ಮೇವಾರದ ಈ ಪರ್ವತಪ್ರದೇಶದ ಹೊರಭಾಗ ದಲ್ಲಿ ಕೂಡತೊಡಗಿತ್ತು. ಗುಜರಾಧ, ಮಾಳವ ಮೊದಲಾದವುಗಳನ್ನು ಜಯಿಸು ವದಕ್ಕಾಗಿ ಕಳಿಸಲ್ಪಟ್ಟ ಬಾದಶಾಹೀ ಸೈನ್ಯವು, ಮೇವಾಡದ ಪಾರ್ಶ್ವದಲ್ಲಿ ಯಾತಾ ಯಾತ ಮಾಡುತ್ತಿದ್ದಿತು. ಈ ಸೈನಿಕರು ಯಾವದೊಂದು ಸ್ಥಳದಲ್ಲಿ ಅತ್ಯಾಚಾರಕ್ಕೆ ಅನುಕೂಲವಾದ ಪ್ರಸಂಗಗಳೊದಗಿದಲ್ಲಿ, ಅವನ್ನು ಎಂದೂ ವ್ಯರ್ಥವಾಗಿ ಕಳೆ ದುಕೊಳ್ಳುತ್ತಿದ್ದಿಲ್ಲ. ಚಿತೋಡ ಮತ್ತು ಮಂಡಲಗಡ ಇವು ಮೊಗಲರ ಆಧೀನ ವಾಗಿದ್ದವು. ಇಲ್ಲಿರತಕ್ಕ ಸೈನ್ಯವು ಮೇವಾಡದ ಪೂರ್ವಕ್ಕಿರುವ ಸಮಸ್ತ ಭಾಗ ವನ್ನು ಹಾಳುಮಾಡುತ್ತಿದ್ದಿತು. ಮಾನಸಿಂಹನು ಒಮ್ಮೆ ಪ್ರತಾಪನ ದರ್ಶನಕ್ಕಾಗಿ ಬಂದು, ಕ್ರುದ್ಧನಾಗಿಹೋದನೆಂಬದನ್ನು ಹಿಂದೆ ಹೇಳಿದ್ದೇವೆ. ಅವನೂ ಸಸೈನ್ಯ ನಾಗಿ ಹೊರಬಿದ್ದನು; ಮತ್ತು ತನ್ನ ಸೈನಿಕರೊಡನೆ ಉದಯಪುರದಿಂದ ಚಿತೋಡನಸಿರಾಬಾದದ ಮಾರ್ಗವಾಗಿ ಹೋದನು. ಈ ಸಮಯದಲ್ಲಿ ಎಡಬಲ ಪ್ರದೇಶ ಗಳಲ್ಲಿ ಅತ್ಯಾಚಾರಕ್ಕೆ ಕೊರತೆಯಿರಲಿಲ್ಲ. ಅಹಮದನಗರದ ಜಯದ ತರುವಾಯ, ಅಕಬರನು ಸೇನಾಪತಿ ಭಗವಾನದಾಸ, ಶಹಾ ಕುಲಿಖಾ ಮೊದಲಾದವರನ್ನು ಸಸೈನ್ಯವಾಗಿ ಇದರದ ಮಾರ್ಗದಿಂದ ಮಹಾರಾಣಾನ ರಾಜ್ಯದಲ್ಲಿ ಕಳುಹಿಸಿದನು. ಬಾದಶಹನ ಉದ್ದೇಶವೇನಂದರೆ:- « ಯಾವದೇ ರೀತಿಯಿಂದಾಗಲಿ, ಪ್ರತಾಪನು ಒಮ್ಮೆ ತನ್ನ ಆಧೀನತ್ವವನ್ನು ಒಪ್ಪಿಕೊಂಡರೆ ಸಾಕು; ಹೀಗಾದಲ್ಲಿ ಅವನನ್ನು ವಿಶೇಷ ಮರ್ಯಾದೆಯಿಂದ ನಡೆಸಿಕೊಳ್ಳುವೆವು;

  • Akbartana ( Beveridge) III P. 89.