ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪಸಿಂಹ ದೃಢಪಡಿಸಬೇಕಾಗಿದ್ದಲ್ಲಿ, ದಿಲೀಶ್ವರನ ಪ್ರತಾಪವನ್ನು ಅಕ್ಷುಣ್ಣವಾಗಿ ಕಾಯ್ದು ಕೊಳ್ಳಬೇಕಾದಲ್ಲಿ, ಪ್ರತಾಪಸಿಂಹನನ್ನು ಅವನತನನ್ನಾಗಿ ಮಾಡಲೇಬೇಕು. ಮೊಗಲ ಸೈನ್ಯವು ನಾಲ್ಕೂ ಕಡೆಯಿಂದ ಬರುತ್ತಲಿತ್ತು; ಆದರೆ ಈ ಸೈನಿ ಕರು ಗುಡ್ಡಗಾಡು ಪ್ರದೇಶದಲ್ಲಿ ಸಂಪೂರ್ಣವಾಗಿ ಅಪರಿಚಿತರಾಗಿದ್ದರು. ಅದರ ಲ್ಲಿಯೂ ಹಾದಿಯಲ್ಲಿಯ ಗ್ರಾಮಗಳೆಲ್ಲವೂ ಜನಶೂನ್ಯವಾದುದರಿಂದ ಈ ಸೈನಿಕ ರಿಗೆ ಆಹಾರದ ಪದಾರ್ಥಗಳ ಅಭಾವವಾಗಹತ್ತಿತು. ಕಾರಣ ಮೊಗಲರು ಸಾಕಷ್ಟು ಸೈನ್ಯವನ್ನೂ, ಯುದ್ಧೋಪಯೋಗೀ ಸಾಮಾನುಗಳನ್ನೂ, ಆಹಾರದ ಪದಾರ್ಧ ಗಳನ್ನೂ ಸಂಗ್ರಹಮಾಡಿಕೊಳ್ಳದೆ, ಈ ಪ್ರದೇಶವನ್ನು ಪ್ರವೇಶಿಸುವಂತಿರಲಿಲ್ಲ. ಈ ಕಡೆಯಲ್ಲಿ ಪ್ರತಾಪನು ತನ್ನ ಅನುಚರವರ್ಗಕ್ಕೆಲ್ಲ, ಗುಡ್ಡಗಾಡುಪ್ರದೇಶದಲ್ಲಿ ವಾಸಮಾಡಹೇಳಿ, ಒಂದು ಗುರುತರ ಭಾರವನ್ನು ಹೊತ್ತುಕೊಂಡಿದ್ದನು. ಈ ಸಸ್ಯ ಹೀನ ದುರಾರೋಹಪ್ರದೇಶದಲ್ಲಿ, ಅನುಚರವರ್ಗದ ಅಬಲ-ವೃದ್ಧ-ವನಿತೆಯರ ಆಹಾರದ ಪದಾರ್ಥಗಳನ್ನೊದಗಿಸಿಕೊಡುವರಾರು ? ಸಂಕಟಕಾಲದಲ್ಲಿ ಮನುಷ್ಯ ನಿಗೆ ಉಪಾಯವು ಗೊತ್ತಾಗುವದು. ಅದರಲ್ಲಿಯೂ ಹೆಚ್ಚು ಹೆಚ್ಚು ಸಂಕಟಗಳೊ ದಗಿದಂತೆ, ಅವುಗಳನ್ನು ತಡೆದುಕೊಳ್ಳುವ ಶಕ್ತಿಯೂ, ಅವುಗಳಿಂದ ಪಾರಾಗುವ ಹಂಚಿಕೆಯೂ ದೊರೆಯುವದು; ಅಂದರೆ ಅವಸ್ಥಾವಿಶೇಷದಲ್ಲಿ ಮನುಷ್ಯನು ತಕ್ಕ ಉಪಾಯವನ್ನು ಹೊಂದುವನು. ಈ ಪ್ರಸಂಗದಲ್ಲಿ ಪ್ರತಾಪನಿಗೆ ಒಂದು ಅನು ಕೂಲತೆಯಿತ್ತು. ಅದೇನಂದರೆ ಅವನ ಅನುಚರರು ಸ್ವದೇಶದ ಘಟ್ಟದ ಮಾರ್ಗ ಗಳನ್ನೂ, ಇತರ ಪ್ರದೇಶವನ್ನೂ ಚನ್ನಾಗಿ ಬಲ್ಲವರಾಗಿದ್ದರು. ಇದರಿಂದವರು ಅಕಸ್ಮಾತ್ತಾಗಿ ಶತ್ರುಸೇನೆಯ ಮೇಲೆ ಬಿದ್ದು, ಅವರ ಸಾಮಾನುಗಳನ್ನೆಲ್ಲ ತೆಗೆದು ಕೊಂಡು, ತೀವ್ರವಾಗಿ ಮಾಯವಾಗುತ್ತಿದ್ದರು. ಉತ್ತರ ಹಿಂದುಸ್ತಾನದಿಂದ ಯುರೋಪಖಂಡಕ್ಕೆ ಹೋಗುವ ಯಾವತ್ತು ವ್ಯಾಪಾರದ ಪದಾರ್ಥಗಳು, ಅರ ವಲೀ ಪರ್ವತದ ಹತ್ತರ ಹಾಯ್ದು ಸುರತಬಂದರಕ್ಕೆ ಹೋಗುತ್ತಿದ್ದವು; ಮುಂದೆ ಅವು ಹಡಗಗಳ ಮಾರ್ಗವಾಗಿ ಯುರೋಪಕ್ಕೆ ಹೋಗುತ್ತಿದ್ದವು. ರಜಪೂತರು ಈ ಯಾವತ್ತು ಪದಾರ್ಥಗಳನ್ನೂ, ವ್ಯಾಪಾರಸ್ಥರಲ್ಲಿರುವ ಧನವನ್ನೂ ಸುಲಿಗೆ ಮಾಡುತ್ತಿದ್ದರು. ಈ ರೀತಿಯಾಗಿ ಆ ಭೀಷಣಪ್ರದೇಶದಲ್ಲಿ ಮಾರ್ಗಸ್ಥರು ಹೋಗ ದಂತಾಯಿತು. ಯಾವದೇ ಜನಾಂಗವಾಗಲಿ, ತಮ್ಮ ಅಲ್ಲ ಬಲದಿಂದ ಬಹು ಸಂಖ್ಯಾಕರಾದ ಶತ್ರುಪಕ್ಷದೊಡನೆ ಯುದ್ಧ ಮಾಡಲು ಸಿದ್ಧರಾದಲ್ಲಿ ಸಮಯ