ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯುದ್ಧದ ಸಿದ್ಧತೆ. ೪೫ ವರಿತು ಈ ತರದ ಮಾರ್ಗವನ್ನವಲಂಬಿಸಬೇಕಾಗುವದು, ಯಾಕಂದರೆ ಈ ತರದ ಮಾರ್ಗವನ್ನವಲಂಬಿಸದಿದ್ದಲ್ಲಿ, ಅವರಿಗೆ ಬೇರೆ ಉಪಾಯವೇ ದೊರೆಯುವದಿಲ್ಲ; ಅದರಿಂದವರು ಶತ್ರುಗಳೊಡನೆ ಯುದ್ಧ ಮಾಡಲು ಅಸಮರ್ಥರಾಗುವರು. ಮುಂದೆ ತುಸು ದಿವಸಗಳಲ್ಲಿ ಮಹಾರಾಷ್ಟ್ರ ರೂ ಈ ಮಾರ್ಗವನ್ನವಲಂಬಿಸಿ, ಮೊಗಲರನ್ನು ಹಣ್ಣಿಗೆತಂದರು. ಹೀಗಿದ್ದರೂ ಮಹಾರಾಷ್ಟ್ರ ಮತ್ತು ರಜಪೂತರಲ್ಲಿ ಭೇದ ವೇನಂದರೆ:- ಮಹಾರಾಷ್ಟ್ರ ರು ಇದೊಂದೇ ಮಾರ್ಗವನ್ನವಲಂಬಿಸಿದ್ದರು; ಅಂದರೆ ಅವರು ಎದುರಿನಲ್ಲಿ ನಿಂತು ಯುದ್ಧ ಮಾಡದೆ, ಯಾವಾಗಲೂ ಈ ಕಪಟ ಯುದ್ಧವನ್ನೇ ಮಾಡುತ್ತಿದ್ದರು; ಆದರೆ ರಾಜಪುತ್ರರು ಮಾತ್ರ ಹೀಗಲ್ಲ. ರಜವೂ ತರು ಎದುರಿನಲ್ಲಿ ನಿಂತು ಯುದ್ಧ ಮಾಡುವದಕ್ಕೆ ಹೆದರುತ್ತಿದ್ದಿಲ್ಲ. ಗುಡ್ಡಗಾಡ ಪ್ರದೇಶದಲ್ಲಿ ರಜಪೂತರಿಗೆ ಇನ್ನೊಂದು ಅನುಕೂಲವಿದ್ದಿತು. ಅದೇನಂದರೆ:-ಅಲ್ಲಿರುವ ಭಿಲ್ಲಜನರು ಇವರಿಗೆ ಸಹಾಯಕರಾಗಿದ್ದರು. ರಾಜಸ್ಥಾ ನದಲ್ಲಿಯ ಭಿಲ್ಲಜನರ ಹಳ್ಳಿಗಳಂತಹ ಸುಂದರ ಸ್ಥಳವು ಜಗತ್ತಿನಲ್ಲಿ ದುರ್ಲಭವೆಂದು ಹೇಳಬಹುದು. ಈ ಭಿಲ್ಲರೇ ರಜಪೂತಸ್ತಾನದ ಮೊದಲಿನ ನಿವಾಸಿಗಳು, ಪ್ರಾಚೀ ನಕಾಲದಲ್ಲಿ ರಜಪೂತರು ಇವರನ್ನು ಗುಡ್ಡಗಾಡು ಪ್ರದೇಶಕ್ಕೋಡಿಸಿ, ಇವರ ಸೀಮೆಯನ್ನು ತೆಗೆದುಕೊಂಡು, ಅಲ್ಲಿ ಅವರು ವಾಸಿಸಹತ್ತಿದರು. ಭಿಲ್ಲರು ಹೆಸರಿಗೆ ಮಾತ್ರ ರಜಪೂತರ ಅಧೀನತ್ವವನ್ನೊಪ್ಪಿಕೊಂಡಿದ್ದರು; ಆದರೆ ನಿಜವಾಗಿ ನೋಡಿ ದರೆ, ಶಾಂತಿಯಿಂದಲೂ, ಸ್ವಾತಂತ್ರದಿಂದಲೂ ಇರುತ್ತಿದ್ದರು. ಹೀಗಿದ್ದರೂ ಈ ಭಿಲ್ಲರು ವಿಪತ್ತಿನ ಸಮಯದಲ್ಲಿ, ಪ್ರಾಣದ ಹಂಗುದೊಂದು ಮಹಾರಾಣಾ ನಿಗೆ ಸಹಾಯ ಮಾಡುತ್ತಿದ್ದರು. ರಜಪೂತರಂತೆ ಭಿಲ್ಲರಾದರೂ ಮಹತ್ವವುಳ್ಳವ ರಾಗಿದ್ದರು. ಭಿಲ್ಲರಾದರೂ ಆಡಿದಂತೆ ಮಾಡುವವರಾಗಿದ್ದರು; ಮತ್ತು ಹಿಡಿದ ಹಟವನ್ನು ಬಿಡತಕ್ಕವರಾಗಿರಲಿಲ್ಲ. ಇವರು ಸ್ವದೇಶದ ಸ್ವಾಧೀನತೆಗಾಗಿ ಪ್ರಾಣ ವನ್ನು ತ್ಯಜಿಸಲಿಕ್ಕೂ ಕೂಡ ಭೀತರಾಗುತ್ತಿರಲಿಲ್ಲ... ಮೇವಾಡದ ಈ ವಿಪತ್ತಿನ ಸಮಯದಲ್ಲಿ ಅಸಂಖ್ಯ ಭಿಲ್ಲಜನರು ಶರಧನುಗಳನ್ನು ತೆಗೆದುಕೊಂಡು, ಪ್ರತಾಪನ ಸಹಾಯಕ್ಕಾಗಿ ಬಂದರು. ಗುಪ್ತಭಾವದಿಂದ ಪರ್ವತಶಿಖದಿಂದ ವಾರಿಧಾರೆಯಂತೆ, ಶರಜಾಲವನ್ನು ವರ್ಷಣಮಾಡಿ, ಇಲ್ಲವೆ ಅಂಸತ್ಯ ಕಲ್ಲುಗಳನ್ನೆಸೆದು, ಭಿಲ್ಲರು $ ರಾಜಸ್ತಾನದ ಸರಕಾರೀ ವಿವರಣೆಯಲ್ಲಿ ಭಿಲ್ಲರ ರೀತಿನೀತಿ ಮೊದಲಾದವುಗಳ ವರ್ಣನೆ ಯದ See Rajputana Gazetteer, Vol III, P. 64-8,