ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೬ ಮಹಾರಾಣಾ ಪ್ರತಾಪಸಿಂಹ, ಸಂಕೀರ್ಣವಾದ ಮಾರ್ಗದಲ್ಲಿ ಶತ್ರುಗಳ ಗತಿಯನ್ನು ತಡೆಯಲಿಕ್ಕೆ ಸಮರ್ಥರಾಗಿ ದ್ದರು. ಇವರು ನಾಲ್ಕೂ ದಿಕ್ಕುಗಳಲ್ಲಡ್ಡಾಡಿ, ಶತ್ರುಗಳ ಸುದ್ದಿಯನ್ನು ತಿಳಿದು ಕೊಂಡು ಮಹಾರಾಣಾನಿಗೆ ತಿಳಿಸುತ್ತಿದ್ದರು. ಈ ಕೆಲಸದಲ್ಲಿ ಇವರು ಬಹು ಪ್ರವೀಣರಿದ್ದುದರಿಂದ, ಮೊಗಲರು ಶತ್ರುಗಳಿಗೆ ಗೊತ್ತಾಗದಂತೆ ಒಂದು ಹೆಜ್ಜೆಯ ನ್ನಿಡುವದಕ್ಕೂ ಸಮರ್ಥರಾಗುತ್ತಿದ್ದಿಲ್ಲ. ಪ್ರತಾಪಸಿಂಹನು ಮಹಾರಾಣಾನಾದ ತರುವಾಯ, ಕಮಲಮೀರ ದುರ್ಗ ವನ್ನೇ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಇವನು ಉದಯಪುರದಲ್ಲಿ ಇನ್ನೂವರೆಗೆ ಅರಮನೆಯನ್ನು ಕಟ್ಟಿಸಿರಲಿಲ್ಲ; ಯಾಕಂದರೆ ಈ ಸ್ಥಳವು ಗುಡ್ಡ ಗಾಡು ಪ್ರದೇಶದ ಒಂದು ತುದಿಯಲ್ಲಿದ್ದಿತು; ಕಾರಣ ಇಲ್ಲಿ ಮೊಗಲರು ಆಕ್ರಮಣ ಮಾಡುವ ಭಯವು ಸದಾ ಇರುತ್ತಿತ್ತು. ಇದರಿಂದ ರಾಣಾನು ಇಲ್ಲಿ ವಾಸಮಾಡ ಲಿಕ್ಕೆ ಮನಸು ಮಾಡಲಿಲ್ಲ. ಕಮಲಮೀರ ಮತ್ತು ಉದಯಪುರಗಳ ನಡುವೆ ಒಂದು ಪ್ರಸಿದ್ಧ ಪಟ್ಟಣವಿದ್ದಿತು. ಇದರ ಹೆಸರು ಗೋಗುಂಡಾ* ಇದು ನಾಲ್ಕೂ ಕಡೆಯಲ್ಲಿ ಪರ್ವತದ ಸಾಲುಗಳಿಂದ ಸುತ್ತುಗಟ್ಟಲ್ಪಟ್ಟಿದ್ದು, ಬಹು ಉಚ್ಚ ಶಿಖರದ ಲ್ಲಿರುವದು. ಕಾರಣ ಮಹಾರಾಣನು ಕೆಲವು ದಿವಸ ಇಲ್ಲಿ ವಾಸಮಾಡುತ್ತಿದ್ದನು. ಇಲ್ಲಿ ಇವನ ಅರಮನೆಯೂ, ಕೆಲವು ದೇವಸ್ಥಾನಗಳೂ ಇದ್ದವು. ಬಹು ಎತ್ತರ ವಾದ ಸ್ಥಳದಲ್ಲಿದೆಯೆಂಬದೊಂದೇ ಅನುಕೂಲತೆಯು ಈ ಪಟ್ಟಣಕ್ಕಿತ್ತು; ಇದ ನ್ನುಳಿದು' ಬೇರೆ ಅನುಕೂಲತೆಗಳು ಈ ಪಟ್ಟಣದಲ್ಲಿರಲಿಲ್ಲ; ಅಂದರೆ ಈ ಪಟ್ಟಣಕ್ಕೆ ಕೋಟೆಯಿರಲಿಲ್ಲ; ಕೋಟೆಯನ್ನು ಕಟ್ಟಿಸಿದಲ್ಲಿ ಮೊಗಲರು ಈ ಪಟ್ಟಣವನ್ನು ಸುಲಭವಾಗಿ ವಶಮಾಡಿಕೊಳ್ಳಲಿಕ್ಕೆ ಬರುವಂತಹದಾಗುತ್ತಿರಲಿಲ್ಲ. ಆದರೆ ಪ್ರತಾ ಪನು ಇಲ್ಲಿ ದುರ್ಗವನ್ನು ನಿರ್ಮಿಸುವ ಅವಕಾಶವನ್ನು ಹೊಂದಲಿಲ್ಲ. ಯಾಕಂದರೆ ಇವನು ರಾಜ್ಯವನ್ನು ದೊರಕಿಸಿದ ಅವಧಿಯಿಂದ-ಮಹಾರಾಣಾನಾದ ಕಾಲ ದಿಂದ ಸಂಕಟಮಧ್ಯದಲ್ಲಿಯೇ ಕಾಲಕಳೆದನು. ಮೊಗಲರು ಇವನ ಸುತ್ತು ಬೆನ್ನು ಹತ್ತಿದ್ದರು. ಅದರಿಂದ ರಾಣಾನು ಪರ್ವತ ಪ್ರದೇಶದಲ್ಲಿ ಅಲೆಯಬೇಕಾಯಿತು, ಇದರಿಂದ ಸಾಕಷ್ಟು ಧನವನ್ನು ಸಂಗ್ರಹಿಸಿ, ಶಾಂತರೀತಿಯಿಂದ ಕೋಟೆಯನ್ನು

  • ನಿಜಾಮುದ್ದೀನ ಮತ್ತು ಬದಾವನಿ ಇವರು ಇದಕ್ಕೆ ಕೋಕಾಂಡಾ ( Kokandah) ಎಂದೂ, ಬ್ಲಾಕವನ್ನನು ಗೋಗಾಂಡಾ ( Gogandah) ಎಂದೂ, ಬಾಡ್ ಸಾಹೇಬರು .ಗೋಗುಂಡಾ ( Gogoondah ) ಎಂದೂ, ಅಂದಿದ್ದಾರೆ.