ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯುದ್ಧದ ಸಿದ್ಧತೆ. ೮೬ ••••••••••• ಕಟ್ಟಿಸಲಿಕ್ಕೆ ಮನಸು ಮಾಡುವ ಸುಯೋಗವನ್ನು ಹೊಂದಲಿಲ್ಲ. ಕಾರಣ ಕಮಲ ಮೀರವೇ ಇವನ ಮುಖ್ಯ ವಾಸಸ್ಥಳವಾಗಿದ್ದು, ಒಂದೊಂದು ಸಮಯದಲ್ಲಿ ಗೋಗುಂಡದಲ್ಲಿ ಇರುತ್ತಿದ್ದನು. ಮೊಗಲರು ಚಿತೋಡವನ್ನು ಗೆದ್ದುಕೊಂಡ ತರುವಾಯ, ಆರೇಳು ವರುಷ ಗಳವರೆಗೆ ರಜಪೂತರೊಡನೆ ಪ್ರಕಾಶವಾಗಿ ಎಂದೂ ಯುದ್ಧ ಮಾಡಲಿಲ್ಲ. ಈ ಅವಧಿಯವರೆಗೆ ಅವರು ರಾಜಸ್ತಾನದಲ್ಲಿ ವಿಶೃಂಖಲರೀತಿಯಿಂದ ಅತ್ತಿತ್ತ ಅಡ್ಡಾ ಡಿದರು; ಕೊಲೆಸುಲಿಗೆಗಳನ್ನು ಮಾಡಿ ಪ್ರಜೆಗಳಿಗೆ ಬಹಳ ಉಪದ್ರವಕೊಟ್ಟರು. ಆದರೆ ದೊಡ್ಡ ಸೈನ್ಯವನ್ನು ಕೂಡಿಹಾಕಿ, ರಜಪೂತರೊಡನೆ ಪುನಃ ಯುದ್ದ ಮಾಡು ವ ಸಿದ್ಧತೆಯನ್ನು ಮಾಡಿರಲಿಲ್ಲ; ಯಾಕಂದರೆ ಈ ಅವಧಿಯಲ್ಲಿ ಅಕಬರನು ಗುಜ ರಾಧ ಮತ್ತು ಬಂಗಾಲಗಳಲ್ಲಿದ್ದ ಬಂಡಾಯವನ್ನು ಮುರಿಯುವದರಲ್ಲಿ ತೊಡ ಗಿದ್ದನು. ಈ ಕೆಲಸಕ್ಕಾಗಿ ತನ್ನ ಮುಖ್ಯ ಸೈನ್ಯವನ್ನೂ, ಆಲೋಚನೆಯನ್ನೂ ವೆಚ್ಚ ಮಾಡಬೇಕಾದ್ದರಿಂದ, ಮೇವಾಡದ ಕಡೆಗೆ ದೃಷ್ಟಿಯನ್ನಿರಿಸಲು ಅವನಿಗೆ ಅವಕಾಶ ದೊರೆಯಲಿಲ್ಲ. ಆದರೂ ಅಕಬರನು ಸನ್ ೧೫೭೦ ರಲ್ಲಿ ಮಾರವಾಡದ ಮೇಲೆ ದಂಡೆತ್ತಿ ಬಂದನು; ಮತ್ತು ಅಲ್ಲಿಯ ರಾಠೋರರನ್ನು ಸೋಲಿಸಿದನು. ಈ ವೇಳೆಯಲ್ಲಿ ಜೋಧವೂರ, ಬಿಕಾನೇರಗಳ ರಜಪೂತ ಅರಸರು, ಅಕಬರನಿಗೆ ಶರ ಣುಬಂದರು. ಸನ್ ೧೫೭೩ ರಲ್ಲಿ ಅಕಬರನು ತಾನೇ ಸೈನ್ಯದೊಡನೆ ಬಂಗಾಲದ ಮೇಲೆ ದಂಡೆತ್ತಿ ಹೋದನು; ಮತ್ತು ಅಲ್ಲಿಯ ಬಂಡುಗಾರನಾದ ದಾಯೂದನನ್ನು ಸೋಲಿಸಿದನು. ಪರಾಜಿತನಾದ ದಾಯದಖಾನನು ಓಡಿಹೋದನು. ಮುಂದೆ ಅಕಬರನು ರಾಜಧಾನಿಗೆ ತಿರುಗಿಬಂದನು. ತರುವಾಯ ಕೆಲವು ದಿವಸಗಳವರೆಗೆ ಅಕಬರನು ಸತ್ಪುರ-ಶಿಕ್ರಿಯಲ್ಲಿ ವಾಸಮಾಡಿದನು; ಮತ್ತು ಇಲ್ಲಿ ಇವನು ತನ್ನ ನೂತನಧರ್ಮವನ್ನು ಪ್ರಸಾರಮಾಡುವದರಲ್ಲಿ ತೊಡಗಿದನು.* ಸನ್ ೧೫೩ರ ಪ್ರಾರಂಭದಲ್ಲಿ ಅಕಬರನು ಅಜಮಿರಕ್ಕೆ ಬಂದನು. ಈ ಸಮಯದಲ್ಲಿ ಇವನು ಪ್ರತಾಪಸಿಂಹನ ಕಠೋರ ವ್ರತಗಳನ್ನೂ, ಕಾರ್ಯಗಳ ವಿವರಣೆಯನ್ನೂ ತಿಳಿ

  • ಅಕಬರನು ಅನೇಕ ಧರ್ಮಗಳ ಸಾರವನ್ನು ತೆಗೆದುಕೊಂಡು, ಇಲಾಹಿಧರ್ಮ ವನ್ನು ಸ್ಥಾಪಿಸಿದನು ಯಾವತ್ತು ಧರ್ಮದವರ ಧರ್ಮವಿಷಯವಾಗಿ ಆಲೋಚನೆಗಳನ್ನು ಮಾಡುವ ದಕ್ಕೆ ಇವನು ಶಿಕ್ರಿಯಲ್ಲಿ ಒಂದು ದೊಡ್ಡ ವಾಡೆಯನ್ನು ಕಟ್ಟಿಸಿದನು. ಇದರ ಹೆಸರು-ಇಬಾ ದಾತಖಾನಾ ಇದು ೧೫೬೫ ರಲ್ಲಿ ನಿರ್ಮಿತವಾಯಿತು.