ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪಸಿಂಹ, ದನು. ಅಕಬರನು ಚಿತೋಡ-ಮಂಡಲಗಡಗಳ ಅಧಿಕಾರಿಗಳಿಂದಲೂ, ನಾನಾ ಸ್ಥಳಗಳಿಂದ ಬಂದ ದೂತರಿಂದಲೂ, ಮಹಾರಾಣಾನು ಸೈನ್ಯವನ್ನು ಕೂಡಹಾಕಿ, ಮೊಗಲರೊಡನೆ ಯುದ್ಧ ಮಾಡುವ ದೊಡ್ಡ ಸಿದ್ಧತೆಯನ್ನು ಮಾಡಿರುವನೆಂಬದನ್ನು ತಿಳಿದನು. ಈ ಸಮಯದಲ್ಲಿ ಅಭಿಮಾನಿಯಾದ ಮಾನಸಿಂಹನು ಬಂದು ಪ್ರತಾಪ ನಿಂದ ತನಗೊದಗಿದ ಅಪಮಾನದ ಕಥೆಯನ್ನು ವರ್ಣಿಸಿ ಹೇಳಿದನು; ಮಾನ ಸಿಂಹನು ತನ್ನ ಅಪಮಾನವೇ ಬಾದಶಹನ ಅಪಮಾನವೆಂಬದನ್ನು ತಿಳಿಸಿಕೊಡ ಲಿಕ್ಕೆ ಮರೆಯಲಿಲ್ಲ. ಈ ಸಮಯದಲ್ಲಿ ಅಕಬರನನ್ನು ಉತ್ತೇಜಿತನನ್ನಾಗಿ ಮಾಡು ವದಕ್ಕೆ ಮಾನಸಿಂಹನು ಹೇಳಿದ್ದೇನಂದರೆ -. ಈ ಪ್ರಕಾರವಾಗಿ ಮೊಗಲಪಕ್ಷದ ರಜಪೂತರು ಮೇಲಿಂದಮೇಲೆ ಪ್ರತಾಪಸಿಂಹನಿಂದ ಅಪಮಾನಿತರಾಗತೊಡಗಿದಲ್ಲಿ, ಪ್ರತಾಪನ ಪ್ರತಿಜ್ಞೆಯು ಕಡೆತನಕ ಸ್ಥಿರವಾಗಿ ಉಳಿದಲ್ಲಿ, ಮೊಗಲರ ಪ್ರಭುತ್ವವು ನಾಶವಾಗುವದು. ಈಗ ಮೊಗಲಪಕ್ಷವನ್ನು ಸೇರಿದ ರಜಪೂತರು ಹೀಗೆಯೇ ಸ್ವಜನಾಂಗದವರಿಂದ ತಿರಸ್ಕಾರವನ್ನು ಹೊಂದತೊಡಗಿದಲ್ಲಿ, ಅವರು ಮೊಗಲರ ಸಂಧಿ-ಸೂತ್ರಗಳನ್ನು ಹರಿದೊಗೆಯುವರು, ಮತ್ತು ಪ್ರತಾಪಸಿಂಹನನ್ನು ಕೂಡು ವರು. ಅದಕ್ಕಾಗಿ ಪ್ರತಾಪನ ಸೊಕ್ಕನ್ನು ಇಲ್ಲದಂತೆ ಮಾಡುವದೂ, ಅದರಿಂದ ಮೊಗಲರನ್ನು ಸೇರಿದ ರಜಪೂತರ ಅಪಮಾನವಾಗದಂತೆ ಮಾಡುವದೂ ಅವ ಶೈವ, ” ಅಜಮೀರದಲ್ಲಿರುವ ಬಾದಶಾಹೀ ದರಬಾರದಲ್ಲಿ ಈ ಯಾವತ್ತು ವಿಷ ಯಗಳ ಸಲುವಾಗಿ ಆಲೋಚನೆಗಳು ನಡೆದವು. ಕಡೆಯಲ್ಲಿ, ಇನ್ನು ಕಾಲವಿಲಂಬಮಾಡುವದು ಯೋಗ್ಯವಲ್ಲೆಂದು ನಿಶ್ಚಯ ವಾಯಿತು. ಮಾನಸಿಂಹನ ಅಪಮಾನದ ಸೇಡನ್ನು ತೀರಿಸಿಕೊಂಡು, ಪ್ರತಾಪನ ಗರ್ವವನ್ನು ಖಂಡಿಸಲೇ ಬೇಕು. ರಾಣಾನಂತಹ ಕ್ಷುದ್ರವ್ಯಕ್ತಿಗಳ ಅನರ್ಧಕ ಪಾದ ಗರ್ವವನ್ನು ನಾಶಮಾಡುವದು ಬಾದಶಹನ ಮುಖ್ಯಕಾರ್ಯವೆಂದು, ಮುಖ ಸ್ತುತಿಮಾಡುವವರು ಸೂಚಿಸಿದರು. + ಹೀಗೆ ಬಹು ಜನರ ಮನಸಿಗೆ ಬಂದ ಈ - + Majestic rules cau8e the stuff-naked way-farers of the lanes of pride to journey to the city of supplication And if the ill fute of the men of this class has been caufirmed great rulers cleanse the earth from the rubbish of their existence " Akbarnama ( Beveridge ) Vol. III, P. 236. ಅಬಲಫಜಲನಂತಹ ಐತಿಹಾಸಿಕರು ಅಕಬರನ ಅತಿ ಪ್ರಶಂಸೆಯನ್ನು ಮಾಡುವದಕ್ಕೆ