ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪಸಿಂಹ, hhhhhhhhh ಅವರ ಈ ಗ್ರಹಿಕೆಯು ತಪ್ಪಾದದ್ದಿತ್ತು; ಯಾಕಂದರೆ ಇವರ ಇಚ್ಛೆಯಂತ ಪ್ರತಾಪಸಿಂಹನು ಬೈಲುಪ್ರದೇಶದಲ್ಲಿ ನಿಂತು ಮೊಗಲರೊಡನೆ ಯುದ್ಧ ಮಾಡಲು ಮನಸುಮಾಡಲಿಲ್ಲ. ಮೊಗಲರ ಸೇನೆಯು ಅಸಂಖ್ಯವಾಗಿದ್ದಿತು; ಈ ದೃಷ್ಟಿ ಯಿಂದ ನೋಡಲು ಪ್ರತಾಪನ ಸೈನಿಕರ ಸಂಖ್ಯೆಯು ಅತ್ಯಲ್ಪವಾಗಿತ್ತು. ಮೇಲಾಗಿ ಯುದ್ಧದ ಸಾಮಗ್ರಿಗಳನ್ನು ಸಾಕಷ್ಟು ಒದಗಿಸಿಕೊಳ್ಳಲು ಅವನಿಗೆ ಧನದ ಅನು ಕೂಲತೆಯಿರಲಿಲ್ಲ. ಕಾರಣ ತನ್ನ ಈ ಸ್ಥಿತಿಯನ್ನು ಶತ್ರುಗಳಿಗೆ ತೋರಿಸುವದು ಪ್ರತಾಪನಿಗೆ ಇಷ್ಟವಾಗಿರಲಿಲ್ಲ; ಮತ್ತು ಹಿತಾವಹವೂ ಆಗಿರಲಿಲ್ಲ, ಅದರಿಂದ ಪ್ರತಾಪನು ಮಾನಸಿಂಹನು ಏರಿಬರುವವರೆಗೆ ಅನುಕೂಲವಾದ ಸ್ಥಳದಲ್ಲಿ ಅಡಗಿ ಯೋಗ್ಯ ಸಮಯವನ್ನು ಕಾಯ್ದುಕೊಂಡಿದ್ದನು ಇವನನ್ನು ಸೋಲಿಸಬೇಕಾಗಿ ದ್ದಲ್ಲಿ-ಪ್ರತಾಪನನ್ನು ಪಿತೃರಾಜ್ಯದಿಂದ ಹೊಡೆದೋಡಿಸಬೇಕಾಗಿದ್ದಲ್ಲಿ ಅವನ ಗರ್ವವನ್ನು ಖಂಡಿಸಬೇಕಾಗಿದ್ದಲ್ಲಿ ಮಾನಸಿಂಹನು, ಆ ಗುಡ್ಡಗಾಡು ಪ್ರದೇಶಕ್ಕೆ ಹೋಗಿ, ಅಲ್ಲಿಯೇ ತನ್ನ ಬಲ-ವಿಕ್ರಮಗಳನ್ನು ತೋರಿಸುವದು ಅವಶ್ಯಕವಾಯಿತು. ಕಾರಣ ಮಾನಸಿಂಹನು ಮಂಡಲಗಡದಿಂದ ನೆಟ್ಟಗೆ ಪೂರ್ವಕ್ಕೆ ಹೊರಟು, ನಾಧ ದ್ವಾರ ಮೊದಲಾದವುಗಳ ಮೇಲೆ ಹಾಯ್ದು, ಬನಾಸನದಿಯ ತೀರದಗುಂಟ ಮುಂದೆ ನಡೆದನು. ಕ್ಷುದ್ರವಾದ ಬನಾಸನದಿಯು ಪರ್ವತ ಪ್ರದೇಶದಿಂದ ಹೊರ ಬೀಳುತ್ತಿರುವ ಸ್ಥಳದಲ್ಲೊಂದು ಸಂಕೀರ್ಣವಾದ ಘಟ್ಟದ ಮಾರ್ಗವಿದ್ದಿತು. -ಈ ಸ್ಥಳದಲ್ಲಿ ಪ್ರತಾಪಸಿಂಹನು ಮಾನಸಿಂಹನನ್ನು ತಡೆದನು. ಅಜಮೀರದಲ್ಲಿಯ ಬಾದಶಹನ ದರಬಾರದಲ್ಲಿ ಚಿತೋಡದ ಮೇಲೆ ದಂಡೆತ್ತಿ ಹೋಗುವ ಬಗ್ಗೆ ಆಲೋಚನೆಯಾಯಿತೆಂದು ನಾವು ಮೇಲೆ ಹೇಳಿದ್ದೇವೆ. ಇದ ಕ್ಕಿಂತ ಬಹುಕಾಲ ಮೊದಲೇ ಪ್ರತಾಪನು ಕಮಲಮೀರ ದುರ್ಗದಲ್ಲಿ ಸೈನಿಕರನ್ನು ಕೂಡಿಸಲು ತೊಡಗಿದ್ದನು. ಶೂರರಾದ ರಜಪೂತರೆಲ್ಲರೂ ಬಂದು, ಪ್ರತಾಪನ ಸೈನ್ಯದಲ್ಲಿ ಸೇರಿದರು; ಕಾಡುಜನರಾದ ಭಿಲ್ಲರು ಧನುಷ್ಮ-ಬಾಣಗಳನ್ನು ತೆಗೆದು ಕೊಂಡು ಬಂದು, ಯುದ್ಧಕ್ಕೆ ಸಿದ್ಧರಾದರು; ಮೊಗಲರನ್ನು ದ್ವೇಷಿಸುವಂತಹ ಕೆಲವು ಪರಾಣರು ಬಂದು, ಪ್ರತಾಪಸಿಂಹನ ಸೈನ್ಯವನ್ನು ಬೆಳೆಸಿದರು. ಈ ಮೇರೆಗೆ ಪ್ರತಾಪಸಿಂಹನು ೨೨ ಸಾವಿರ ಸೈನಿಕರನ್ನು ಕೂಡಿಸಿದನು. ಮೊಗಲರ ಸೈನ್ಯವು ಇದಕ್ಕಿಂತಲೂ ಬಹಳ ಹೆಚ್ಚಾಗಿದ್ದಿತು. ಮಾನಸಿಂಹನು ದಂಡೆತ್ತಿ ಮಂಡಲಗಡಕ್ಕೆ ಬಂದ ಸುದ್ದಿಯು ಪ್ರತಾಪನಿಗೆ ತಿಳಿಯಿತು. ಅವನು ರಾಜಧಾನಿಯನ್ನು ರಕ್ಷಿಸುವ