ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಳದೀಘಟ್ಟದ ಯುದ್ಧ, ೯೫ ದೀನ ಅಸಫಖಾನನನ್ನೂ ನಿಲ್ಲಿಸಿದನು, ಬಲಭಾಗದಲ್ಲಿ ಎಲ್ಲಕ್ಕೂ ಮುಂದೆ ಸೈಯದ ಹಾಸಿಮನನ್ನೂ, ಹಿಂದೆ ಸೈಯದ ಅಹಮ್ಮದನನ್ನೂ, ಸೈಯದ ರಾಜೂನನ್ನೂ ನಿಲ್ಲಿ ಸಿದನು; ಎಡಭಾಗದಲ್ಲಿ ಮುಂದೆ ಗಾಜೀಖಾನನನ್ನೂ, ಹಿಂದೆ ರಜಪೂತ ಸೇನೆಯೊ ಡನೆ ರಾಯಲಂಬಕರ್ಣನನ್ನೂ ಇರಿಸಿದನು. ಮಧ್ಯಭಾಗದಲ್ಲಿ ಸೇನಾಪತಿಯಾದ ಮಾನಸಿಂಹನು ತನ್ನ ಪ್ರಬಲ ರಜಪೂತ ಸೈನ್ಯವನ್ನು ತೆಗೆದುಕೊಂಡು ನಿಂತನು. ಮುಂಭಾಗದಲ್ಲಿಯ ಜಗನ್ನಾಧ ಮತ್ತು ಮಧ್ಯಭಾಗದಲ್ಲಿರುವ ಮಾನಸಿಂಹ ಇವರ ನಡುವೆ ಮಧುಸಿಂಹನೂ, ಇತರ ರಜಪೂತ ಸೇನಾಪತಿಗಳೂ ನಿಂತುಕೊಂಡರು. ಪ್ರತಾಪನ ತಮ್ಮಂದಿರಾದ ಶಕ್ತಸಿಂಹ ಮತ್ತು ಸಾಗರಜಿ ಇವರು ಈ ಭಾಗದಲ್ಲಿ ಯೇ ಇದ್ದರು. ಮಾನಸಿಂಹನ ಹಿಂಭಾಗದಲ್ಲಿ ಹುಸೇನಖಾನನು ಆನೆಗಳ ಅಧಿಪತಿ ಯಾಗಿ ನಿಂತುಕೊಂಡಿದ್ದನು; ಎಲ್ಲಕ್ಕೂ ಹಿಂಭಾಗದಲ್ಲಿ ಮಿಹತರಖಾನನು ರಕ್ಷಿತ ( Reserve )ಸೈನ್ಯದ ಅಧಿನಾಯಕನಾಗಿ ಉಳಿದನು. ಮೊಗಲ-ಸೇನೆಯ ಹಿಂಭಾ ಗದಲ್ಲಿಯೇ ಸಣ್ಣ ಬನಾಸ ನದಿಯು ಹರಿಯುತ್ತಲಿತ್ತು. ಮಾನಸಿಂಹನು ಹಳದಿ ಘಟ್ಟದ ಮುಖದಲ್ಲಾಗಲಿ, ಪರ್ವತದ ಸಾಲುಗಳ ತೀರ ಸಮೀಪದಲ್ಲಾಗಲಿ ಬರ ಲಿಕ್ಕೆ ಮನಸು ಮಾಡಲಿಲ್ಲ; ಯಾಕಂದರೆ ಈ ಸ್ಥಳದಲ್ಲಿ ಬಂದಿದ್ದರೆ, ಅನೇಕ ವಿಪತ್ತುಗಳೊದಗುವ ಸಂಭವವಿದ್ದಿತು. ಪ್ರತಾಪಸಿಂಹನು ಹಳದೀಘಟ್ಟದ ಮುಖದಲ್ಲಿಯೇ ತನ್ನ ಸೈನ್ಯವನ್ನು ನಿಲ್ಲಿಸಿ ದನು. ಈ ಸೈನ್ಯದ ಎರಡೂ ಬದಿಗಳಲ್ಲಿ ದುರಾರೋಹವಾದ ಪರ್ವತದ ಸಾಲು ಗಳು ಆಕಾಶವನ್ನು ಭೇದಿಸುತ್ತಿರುವಂತೆ ನಿಂತುಕೊಂಡಿದ್ದವು. ಈ ಪರ್ವತ-ಮೂ ಲೆಯ ಮೇಲ್ಬಾಗದಲ್ಲಿರುವ ನಾನಾ ಗುಪ್ತಸ್ಥಳಗಳಲ್ಲಿ ಪ್ರತಾಪನ ಭಿಲ್ಲ ಸೈನಿಕರು ಧನುರ್ಬಾಣಗಳನ್ನು ತೆಗೆದುಕೊಂಡು, ಅಡಗಿಕೊಂಡು ನಿಂತರು. ಈ ಭಿಲ್ಲರು ತಾವು ಅಡಗಿದ ಸ್ಥಳದಲ್ಲಿ ಕಲ್ಲುಗಳನ್ನು ರಾಶಿರಾಶಿಯಾಗಿ ಕೂಡಿಹಾಕಿಕೊಂಡಿ ದ್ದರು; ಇದರಿಂದವರು ಮೊಗಲರು ಒಂದು ವೇಳೆ ಘಟ್ಟದ ಮಾರ್ಗವನ್ನು ಪ್ರವೇಶ ಮಾಡುವ ಮನಸು ಮಾಡಿದಲ್ಲಿ ತಡೆಯಬಹುದಾಗಿದ್ದಿತು. ಪ್ರತಾಪನ ಪಕ್ಷವನ್ನು ವಹಿಸಿದ ಪರಾಣ ಸೈನಿಕರು ಹಕಿಮಖಾ ಸೂರನ ಆಧೀನರಾಗಿ ಎಡಭಾಗದಲ್ಲಿ ನಿಂತುಕೊಂಡರು; ಮತ್ತು ಬಲಭಾಗದಲ್ಲಿ ಘಟ್ಟದ ಮುಂಭಾಗದಲ್ಲಿಯೇ ರಜಪೂತ ಸೈನಿಕರು ನಿಲ್ಲಬೇಕೆಂದು ಗೊತ್ತಾಯಿತು. ಈ ರಜಪೂತ ಸೈನ್ಯದ ತೀರ ಮುಂಭಾ ಗದಲ್ಲಿ ಮಹಾವೀರ ಜಯಮಲ್ಲನ ಮಗನಾದ ರಾಮದಾಸನು ನಿಂತುಕೊಂಡನು;