ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪಸಿಂಹ, vvvvvvvvvv vv vv • • •vvv vv I ಇವನ ತಂದೆಯು ಚಿತೋಡದ ರಕ್ಷಣೆಗಾಗಿ ಅಸಾಮಾನ್ಯ ವೀರತ್ವವನ್ನೂ, ಆತ್ಮ ತ್ಯಾಗವನ್ನೂ ತೋರಿಸಿದ್ದನು; ಈ ಗೌರವವರ್ಧನಕ್ಕಾಗಿ ಇಂದು ಮಹಾವೀರ ರಾಮದಾಸನು ರಜಪೂತ ಸೈನಿಕರ ಅಗ್ರಣಿಯಾದನು. ರಾಮದಾಸನ ತುಸು ಹಿಂದೆ ಬಲಭಾಗದಲ್ಲಿ ಗ್ಯಾಲೇರದ ಮೊದಲಿನ ಅರಸ ನಾದ ರಾಮಶಹನು ನಿಂತನು; * ಮತ್ತು ಇವನ ಮೂವರು ಮಕ್ಕಳಾದ ಶಾಲಿವಾ ಹನ, ಭಾನುಸಿಂಹ, ಪ್ರತಾಪಸಿಂಹರು ... ಇವನೊಡನೆ ಇದ್ದರು. ಎಡಭಾಗದಲ್ಲಿ ಝಾಲಾಸಂಸ್ಥಾನದ ಅರಸನಾದ ಮಾನ್ನಾ ನು ನಿಂತುಕೊಂಡನು. ಮಧ್ಯಭಾಗ ದಲ್ಲಿ ಮಹಾರಾಣಾ ಪ್ರತಾಪಸಿಂಹನು ತಾನೇ ನಿಂತುಕೊಂಡನು. ಇವನ ಎಡ-ಬಲ ಭಾಗಗಳಲ್ಲಿ ಚಂದಾಯತ್ 20 ಜಗಾಯತ್‌ ' ಮೊದಲಾದ ಅಸಂಖ್ಯ ರಜಪೂತರು ನಿಂತರು. ರಾಣಾನ ಆನೆಗಳು ಎಲ್ಲಕ್ಕೂ ಹಿಂದೆ ಪರ್ವತದ ಕೆಳಭಾಗದಲ್ಲಿದ್ದವು. ಈ ಮೇರೆಗೆ ಪ್ರತಾಪಸಿಂಹನು ವ್ಯೂಹವನ್ನು ರಚಿಸಿ, ರಣಕ್ರೀಡೆಯ ಮಾರ್ಗಪ್ರತೀ ಕ್ಷೆಯನ್ನು ಮಾಡಹತ್ತಿದನು. ಮೊದಲು ರಜಪೂತರೇ ಯುದ್ಧವನ್ನಾರಂಭಿಸಿದರು. ಪ್ರಾರಂಭದಲ್ಲಿ ಪರಾಣ ವೀರನಾದ ಹಾಕಿಮಖಾನನು ಸೈಯದ ಹಾಸೀಮನನ್ನು ಮುತ್ತಿದನು. ಈ ಯುದ್ಧ ದಲ್ಲಿ ಸೈಯದ ಬಂಧುಗಳು ಪ್ರಾರಂಭದಿಂದಲೂ ತಮ್ಮ ಅಶೇಷ ವೀರತ್ವವನ್ನು ತೋರ್ಪಡಿಸಿ, ಮೊಗಲರ ಗೌರವವನ್ನು ರಕ್ಷಿಸಿದರು. ರಜಪೂತರ ಬಲಭಾಗದಲ್ಲಿ ರುವ ಗ್ವಾರದ ಅರಸನಾಗಿದ್ದ ರಾಮಶಹನು, ಮೊಗಲ ಪಕ್ಷದ ರಾಯಲಂಬಕ ರ್ಣನ್ಯೂ, ಮಹಾರಾಣಾ ಪ್ರತಾಪಸಿಂಹನು ಗಾಜೀಖಾನನನ್ನೂ ಮುತ್ತಿದನು.

  • ಇವನಿಗೆ ಬ್ಲಾಕನನ್ನನು Rain Sah ಎಂದೂ, ಬೆವರಿಜ್, ಲೋ ಮೊದಲಾದವರು Rain Shah ಎಂದೂ ಹೇಳಿದ್ದಾರೆ ಆದರೆ ಇಲಿಯಟನು ತಬ ಕಾತದ ಅನುವಾದದಲ್ಲಿ ಇವ ನಿಗೆ ರಾಮೇಶ್ವರ ಸ್ವಾಮಿ ಎಂದು ಹೇಳಿದ್ದಾನೆ ( Yol, V. P. 399 ) ಇದನ್ನನುಸರಿಸಿಯೇ ವಿಶ್ವಕೋಶದಲ್ಲಿ ರಾಮೇಶ್ವರನೆಂದು ಹೇಳೋಣವಾಗಿದೆ ಇವನ ಹೆಸರು ರಾಮಶಹನೆಂದಾಗಿರದೆ, ರಾಮೇಶ್ವರನೆಂದಿರುವದೇ ಹೆಚ್ಚು ಸಯುಕ್ತಿಕವೆಂದು ತೋರುವದು,

8 A. N ( Bev ) III 246. + ಟಾಡ್ ಸಾಹೇಬರು ತಮ್ಮ ಇತಿಹಾಸದಲ್ಲಿ ಮಾನ್ಯಾನ ವಿಷಯವಾಗಿ ಹೇಳಿದ್ದಾರೆ. ಅಬಲಫಜಲನ ಅನುವಾದದಲ್ಲಿ Bedamata of the Jhala tribe ಎಂದು ಉಲ್ಲಿ ಖ ತವಾಗಿದೆ, A N, III 245.