ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಳದೀಘಟ್ಟದ ಯುದ್ಧ. ಈ ಮೊದಲನೇ ಆಕ್ರಮಣದಲ್ಲಿಯೇ ರಾಯಲಂಬಕರ್ಣನು ತನ್ನ ರಜಪೂತ ಸೈನ್ಯವನ್ನು ತೆಗೆದುಕೊಂಡು, ರಚಿಸಿದ ವ್ಯೂಹವನ್ನು ಭಂಗಮಾಡಿ ಓಡಿಹೋದನು; ಮತ್ತು ಆಶ್ರಯಕ್ಕಾಗಿ ಬಲಭಾಗಕ್ಕೆ ಹೊರಟನು. ಈ ಕಾರಣದಿಂದ ಮೊಗಲರ ಸೈನ್ಯದಲ್ಲಿ ಭಯಂಕರ ಗೊಂದಲವೆದ್ದಿತು. ಹೀಗಾದರೂ ಗಾಜೀಖಾನನು ಓಡಿ ಹೋಗಲು ಮನಸು ಮಾಡಲಿಲ್ಲ; ಕೆಲವು ಹೊತ್ತಿನವರೆಗೆ ವೀರವಿಕ್ರಮದಿಂದ ಯುದ್ಧ ಮಾಡಿದನು; ಆದರೆ ಅದರಿಂದೇನೂ ಲಾಭವಾಗಲಿಲ್ಲ, ರಜಪೂತರ ಬಲವು ಕ್ರಮವಾಗಿ ಹೆಚ್ಚುತ್ತ ನಡೆಯಿತು; ಈ ಪ್ರಸಂಗದಲ್ಲಿ ಗಾಜೀಖಾನನು ಓಡಿ ಹೋಗುವದರ ಹೊರತು ಬೇರೆ ಉಪಾಯವನ್ನು ಕಾಣಲಿಲ್ಲ; ಅದರಿಂದವನು ಓಡಿ ಹೋಗಲು ಸಿದ್ದನಾದನು. ಈ ವೇಳೆಯಲ್ಲಿ ಇವನ ಕೈಗೆ ಶತ್ರುಗಳ ಕತ್ತಿಯ ಹೊಡತವು ಬಿದ್ದಿತು; ಅದರಿಂದವನು ಗಾಯಾಳುವಾಗಿ ಭೂಮಿಯ ಮೇಲೆ ಬಿದ್ದನು. ಮೊಗಲ ಸೈನ್ಯದಲ್ಲಿ ಹಾಹಾಕಾರವೆದ್ದಿತು. ಕೂಡಲೇ ಮೊಗಲ ಸೈನಿ ಕರು ತೀವ್ರವೇಗದಿಂದ ಊರ್ಧ್ವಶ್ವಾಸರಾಗಿ ಓಡತೊಡಗಿದರು. ಇವರು ನದಿ ಯನ್ನು ದಾಟಿ ಐದಾರು ಕ್ರೋಶಗಳನ್ನು ಕ್ರಮಿಸುವವರೆಗೆ ನಿಲ್ಲಲಿಲ್ಲ;+ ಯಾಕಂದರೆ ಹಿಂದೆ ರಜಪೂತರು ಬೆನ್ನು ಹತ್ತಿ ಬಂದು, ತಮ್ಮನ್ನೆಲ್ಲಿ ಕೊಲ್ಲುವರೋ ಎಂಬ ಭೀತಿಯು ಇವರಿಗೆ ಬಹಳವಾಗಿತ್ತು. ರಾಮಶಹನ ಭೀಮಪರಾಕ್ರಮದಿಂದ ಮಧುಸಿಂಹ ಮೊದಲಾದ ಮೊಗಲಪಕ್ಷದ ರಜಪೂತ ಸೇನಾಪತಿಗಳು ಪಲಾಯನ ಹೇಳಿಸಿದರು; ಮತ್ತು ಇದನ್ನು ನೋಡಿ ಅಸಫಖಾನನ ಸೈನಿಕರೂ ರಣಭೂಮಿ ಯಿಂದ ಧಾವಿಸತೊಡಗಿದರು ಐತಿಹಾಸಿಕ ಬದಾವುನಿಯು ಈ ಅಸಸಖಾನನ ಸೈನ್ಯದಲ್ಲಿದ್ದನು. ಅವನು ತನ್ನ ವಿಷಯದ ಯಾವ ಸಂಗತಿಯನ್ನು ಬರೆದಿಲ್ಲ. ಹೀಗಿದ್ದರೂ ಇವನು ಅಸಫಖಾನನ ಸೈನಿಕರೊಡನೆ ಓಡಿಹೋದನೆಂಬದಕ್ಕೆ ಸಂದೇಹವಿಲ್ಲ. ಎರಡೂ ಪಕ್ಷದ ರಜಪೂತ ಸೈನಿಕರು ಒಬ್ಬರೊಳಗೊಬ್ಬರು ಕೂಡಿ ಹೋದರು. ಇದರಿಂದ ಶತ್ರುಗಳಾರು? ಎಂಬದನ್ನು ಗೊತ್ತು ಮಾಡುವದು ಕಠಿಣ ವಾಯಿತು. ಈ ಸಮಯದಲ್ಲಿ ಸೈಯದಬಂಧುಗಳು ಸಂಪೂರ್ಣವಾದ ಪರಾಕ್ರಮ ದಿಂದ ಆತ್ಮರಕ್ಷಣೆಯನ್ನು ಮಾಡಿಕೊಳ್ಳದಿದ್ದಲ್ಲಿ, ಮೊಗಲರು ಪೂರ್ಣ ಪರಾಭವ + Those of the army who had fled on the first attack, did iot draw rein till they had passed five are six · cosses ' beyond the river ” Badaoni (Vowe ) II P. 238. Te 5