ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪ ಸಿಂಹ, ವನ್ನು ಹೊಂದಿದಂತಾಗುತ್ತಿತ್ತು. ಯುದ್ಧದ ಪರಿಣಾಮವು ಗೊತ್ತಾಗಿ, ರಜಪೂ ತರು ಜಯಶಾಲಿಗಳಾಗಿ ಹೋಗುತ್ತಿದ್ದರು. ಸ್ವದೇಶದ ಸಾತಂತ್ರರಕ್ಷಣೆಯ ಸಲುವಾಗಿ ರಜಪೂತರು ಜೀವದ ಹಂಗು ದೊರೆದು, ಕಾದತೊಡಗಿದರು. ತರಂಗದ ಮೇಲೆ ತರಂಗಗಳಪ್ಪಳಿಸುವಂತೆ ರಜ ಪೂತ ಸೈನಿಕರು ಮೊಗಲ-ಸೈನ್ಯದ ಮೇಲೆ ಬೀಳತೊಡಗಿದರು. ಸಾಮಂತ ಸರ ದಾರರು ತಮ್ಮ ಶೂರ ಸೈನಿಕರನ್ನು ತೆಗೆದುಕೊಂಡು, ಶತ್ರುಸೇನೆಯನ್ನು ಮಧನ ಮಾಡುತ್ತ ಮುಂದೆ ಸಾಗತೊಡಗಿದರು. ರಜಪೂತರ ಸಾಹಸವನ್ನೂ, ವೀರತ್ನ ವನ್ನೂ, ಆತ್ಮ ತ್ಯಾಗವನ್ನೂ ನೋಡಿ, ಶತ್ರುಗಳು ವಿಸ್ಮಿತರೂ, ಸ್ತಂಭಿತರೂ ಆದರು. ಬಿಲ್ಲುಬಾಣಗಳನ್ನು ಧರಿಸಿದ ಭಿಲ್ಲರು, ಪರ್ವತದ ತುದಿಯಿಂದಲೂ, ವೃಕ್ಷಾಂತರಾಲ ದಿಂದಲೂ ಬಾಣಗಳ ಮಳೆಗರೆಯುತ್ತಿದ್ದರು. ಒಮ್ಮೊಮ್ಮೆ ಭಿಲ್ಲರು ಕಲ್ಲುಗಳನ್ನೆ ಸೆದು, ನೂರಾರು ಮುಸಲ್ಮಾನರ ಶಿರಗಳನ್ನು ಜಜ್ಜಿ ಬಿಡುತ್ತಿದ್ದರು. ಮೊಗಲ ಸೈನಿ ಕರು ಮುಂದುವರಿಯುವದೇ ಕಠಿಣವಾಯಿತು. ರಜಪೂತರು ಪ್ರಾಣದ ಹಂಗು ದೊರೆದು, ಸ್ವಜನಾಂಗದ ಜೀವರಕ್ಷಣೆಗಾಗಿಯೂ, ಸ್ವದೇಶದ ಉದ್ಧಾರಕ್ಕಾಗಿ ಯೂ, ಸ್ವಜಾತಿಯ ಧರ್ಮರಕ್ಷಣೆಗಾಗಿಯೂ ಯುದ್ಧ ಮಾಡುತ್ತಿದ್ದರು; ಆದರೆ ಮೊಗಲರು ಪ್ರತಿಹಿಂಸೆಯನ್ನು ಮಾಡುವದಕ್ಕಾಗಿಯೂ ರಾಜ್ಯವನ್ನು ವಿಸ್ತರಿಸುವ ದಕ್ಕಾಗಿಯೂ, ಪರರ ಸ್ವತ್ತನ್ನು ತಮ್ಮದನ್ನಾಗಿ ಮಾಡಿಕೊಳ್ಳುವದಕ್ಕಾಗಿಯೂ ಯುದ್ಧ ಮಾಡುತ್ತಿದ್ದರು. ಈ ಮೇರೆಗೆ ಉದಾರಹೃದಯದ ಸ್ವದೇಶಭಕ್ತರೊಡನೆ ಕಾಳಗಮಾಡುವದು, ಪರರಾಜ್ಯವನ್ನ ಸಹರಿಸುವ ಇಚ್ಛೆಯುಳ್ಳವರಿಗೆ ಕಷ್ಟಕರ ವಾದುದರಲ್ಲಿ ಆಶ್ಚರ್ಯವಿಲ್ಲ. ಮೊಗಲರ ವ್ಯೂಹದ ಎಡಬಲ ಭಾಗಗಳಲ್ಲಿಯೂ ಮಧ್ಯದಲ್ಲಿಯೂ ಮಹಾ ಹಾಹಾಕಾರವೆದ್ದಿತು. ಈ ಸಮಯದಲ್ಲಿ ಓರ್ವ ವೀರಪುರುಷನು ಸ್ಟೈರ್ಯದಿಂದ ಆತ್ಮರಕ್ಷಣೆಯನ್ನು ಮಾಡಿಕೊಳ್ಳುತಲಿದ್ದನು; ಇವನು ಬಿಹಾರಿಮಲ್ಲನ ಮಗನಾದ ಜಗನ್ನಾ ಧನು. ಇವನೊಡನೆ ಮಹಾವೀರನಾದ ರಾಮದಾಸನ ಭೀಷಣಯುದ್ಧವು ನಡೆದಿತ್ತು; ಕಡೆಯಲ್ಲಿ ಜಗನ್ನಾ ಧನು ತನ್ನ ಕೈಯಿಂದ ರಾಮದಾಸನ ಶಿರಚ್ಛೇದನ ಮಾಡಿದನು.# ಇವನ ತಂದೆಯು ಚಿತೋಡದ ಯುದ್ಧದಲ್ಲಿ ಮೊಗಲ-ಬಾದಶಹನ Blochmann Ain, P, 387.