ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಳದೀಘಟ್ಟದ ಯುದ್ದ. ಕೈಯಿಂದ ಮರಣಹೊಂದಿದ್ದನು; ಇವನು ಇಂದು ಓರ್ವ ಮೊಗಲಸೇನಾಸ್ಮತಿಯ ಹಸ್ತದಿಂದ ಭವಲೀಲೆಯನ್ನು ಮುಗಿಸಿಕೊಂಡು, ಸ್ವದೇಶಭಕ್ತಿಯ ಉತ್ತಮ ಉದಾಹರಣೆಯಿಂದ ಪುತ್ರೋಚಿತವಾದ ಗೌರವವನ್ನು ಕಾಯ್ದು ಕೊಂಡು ಹೋ ದನು. ಕೇವಲ ರಾಮದಾಸನೊಬ್ಬನೇ ಅಲ್ಲ; ದಕ್ಷಿಣಭಾಗದಲ್ಲಿರುವ ರಾಮ ಶಹನೂ ಮೃತ್ಯುಮುಖದಲ್ಲಿ ಬಿದ್ದನು + ಈ ಇಬ್ಬರು ವೀರಶ್ರೇಷ್ಟರ ಮರಣ ದಿಂದ ಪ್ರತಾಪನ ಎದೆಯೊಡೆಯಿತು; ಆದರೂ ಯುದ್ಧ ಭೂಮಿಯಿಂದ ಓಡಿ ಹೋಗುವ ಮನಸುಮಾಡಲಿಲ್ಲ; ಹೆಚ್ಚು ಆವೇಶವನ್ನು ಹೊಂದಿ, ಯುದ್ಧಕ್ಕಾಗಿ ಮುಂದುವರಿದನು; ತನ್ನ ಚೈತಕವೆಂಬ ನೀಲವರ್ಣದ ಕುದುರೆಯನ್ನೇರಿ ಮತ್ತ ಗಜದಂತೆ ಮಹಾ ಪರಾಕ್ರಮದಿಂದ ಯುದ್ಧ ಮಾಡತೊಡಗಿದನು. ಮಹಾರಾಣಾನ ಈ ವೀರ-ಪ್ರಭಾವವನ್ನು ನೋಡಿ, ವೀರಭೂಮಿಯ ವೀರ ಯೋಧ್ಯಗಳು, ಕ್ರಮವಾಗಿ ಹೆಚ್ಚು ಹೆಚ್ಚು ಉತ್ಸಾಹವನ್ನೂ, ಉಗ್ರಮೂರ್ತಿ ಯನ್ನೂ ತಳೆದರು. ಪ್ರತಾಪನು ರಜಪೂತ ಕುಲಾಂಗಾರನಾದ ಮಾನಸಿಂಹನನ್ನು ಹುಡುಕುತ್ತ, ರಣಭೂಮಿಯಲ್ಲಿ ಅತ್ತಿತ್ತ ಸಂಚರಿಸುತ್ತಿದ್ದನು. ಇವನು ಎರಡು ನಾರೆ ಶತ್ರುಸೇನೆಯ ಮಧ್ಯದಲ್ಲಿ ಪ್ರವೇಶಮಾಡಿದನು, ತನ್ನ ಸುದಕ್ಷವಾದ ಕೈಯ ಲ್ಲಿರುವ ತೀಷ್ಠವಾದ ಆಯುಧದ ಪ್ರಚಂಡ ಆಘಾತಗಳಿಂದ ನೂರಾರು ಶತ್ರುಗ ಇನ್ನು ಯಮಸದನಕ್ಕೆ ಕಳುಹಿಸಿದನು, ಆದರೂ ಇವನು ಮಾನಸಿಂಹನನ್ನು ಕಾಣಲಿಲ್ಲ. ಹಿಂದೊಂದು ಪ್ರಸಂಗದಲ್ಲಿ ಪ್ರತಾಪನು ಮಾನಸಿಂಹನಿಗೆ ನಿನ್ನನ್ನು ಯುದ್ಧಭೂಮಿಯಲ್ಲಿ ನೋಡಿದ್ದಾದರೆ ಸಂತೋಷಿತನಾಗುವೆನೆಂದು ಹೇಳಿದ್ದು ವಾಚಕರ ಸ್ಮರಣೆಯಲ್ಲಿರಬಹುದು, ಆದರೆ ಪ್ರತಾಪನ ಈ ಮನೋರಧವು ಈಡೇ ರಲಿಲ್ಲ. ಇಂದು ಗರ್ವಿತನಾದ ಮಾನಸಿಂಹನು ಪ್ರತಾಪನ ರುದ್ರಮೂರ್ತಿಯಿಂದ + ರಾಮಶಹನ ವೀರತ್ವದ ಕಥೆಯನ್ನು ಭಾಷೆಯಿಂದ ಪ್ರಕಾಶಪಡಿಸಲು ಬರುವಂತಿಲ್ಲ ಬದಾವುನಿಯ ಕೂಡ ಹೇಳಿದ್ದಾನೆ-Ram Shah performed 81uch prodigies of valour against the Rajputs of Mausing as baffle description." ಬದಾವುನಿಯು ಈ ಯುದ್ಧವನ್ನು ಸ್ವತಃ ನೋಡಿದ್ದಾನೆ ಅದರಿಂದ ಇವನ ಮಾತಿನ ಮೇಲೆ ಅವಿಶ್ವಾಸವಿಡುವ ಕಾರಣವಿಲ್ಲ ರಾಮಶಹನೊಡನೆ ಇವನ ಮಗನಾದ ಶಾಲಿವಾಹನನೂ ಅಸಮ. ಸಾಹಸದಿಂದ ಯುದ್ಧ ಮಾಡಿ ಮರಣಹೊಂದಿದನು ( Badaoni II 239 ) ಇವನಿಗೆ ಖಂಡೇ ರಾಮನೆಂಬ ಬೇರೊಂದು ಹೆಸರಿತ್ತು Rajasthan Vol. I. P. 276,