ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

09 ಮಹಾರಾಣಾ ಪ್ರತಾಪಸಿಂಹ, vvvvvvvvvvvvvvv V V V V V V vv VVVVVVVVVVVV ಕYYYYYYYY ಈ ಸಮಯದಲ್ಲಿ ಮೊಗಲ-ಪಕ್ಷದ ಹಸ್ತಿನಾಯಕನಾದ ಹುಸೇನಖಾನನು, ಆನೆಯನ್ನೇರಿ ಯುದ್ಧ ಮಾಡುತ್ತ ಮುಂದೆ ಸಾಗಿದನು. ರಜಪೂತರ ಆನೆಗಳೂ ಯುದ್ಧದಲ್ಲಿ ಕೂಡಿದ್ದವು. ಮಾನಸಿಂಹನು ಒಂದು ಆನೆಯ ಮೇಲೆ ಕುಳಿತು ಕಲ್ಪ ನಾತೀತವಾದ ವೀರವಿಕ್ರಮದಿಂದ ಯುದ್ಧ ಮಾಡುತ್ತಲಿದ್ದನು * ಮೊಗಲರ ಒಂದು ಆನೆಯೊಡನೆ ರಾಣಾನ ಪಕ್ಷದ ( ರಾಮಪ್ರಸಾದ ” ವೆಂಬ ಆನೆಯ ವಿಷಮ ಯುದ್ಧವು ನಡೆಯಿತು; ಕಡೆಯಲ್ಲಿ ರಾಣಾನ ಆನೆಯ ಮಾವುತನು ನಿಹತನಾದನು. ಮೊಗಲರ ರಾವುತನು ರಾಮಪ್ರಸಾದದ ಮೇಲೆ ಕುಳಿತು, ಅದನ್ನು ತನ್ನ ಕೈವಶ ಮಾಡಿಕೊಂಡನು, ಈ ಮೇರೆಗೆ ಆನೆ-ಆನೆಗಳಲ್ಲಿ ಬಹು ಕಾಲದ ವರೆಗೆ ಯುದ್ಧವು ನಡೆದಿತ್ತು ಪ್ರತಾಪನು ತನ್ನ ಅವಿರತ ಅಸಿಸಂಚಾಲನದಿಂದ ಶತ್ರುಗಳನ್ನು ನಾಶ ಮಾಡುತ್ತಲಿದ್ದನು. ರಜಪೂತರ ಕೈಯಿಂದ ಮೊಗಲರೂ, ಮೊಗಲರ ಹಸ್ತದಿಂದ ರಜಪೂತರೂ ಭೂಮಿ-ಶಾಯಿಗಳಾಗುತ್ತಲಿದ್ದರು. ಕ್ರಮವಾಗಿ ಬಾಣಗಳ ಮಳೆ ಯಿಂದ ಆ ಸ್ಥಳವು ಭೀಷಣ ಆಕಾರವನ್ನು ಧರಿಸಿತು. ರಜಪೂತರಿಗೆ ಪ್ರತಾಪನ ಜೀವರಕ್ಷಣೆಯ ಆಶೆಯು ಉಳಿಯಲಿಲ್ಲ. ಪ್ರತಾಪನು ಇಡೀ ದಿವಸ ಯುದ್ಧ ಮಾಡಿ ಬಹಳವಾಗಿ ದಣಿದವನೂ, ಶಕ್ತಿರಹಿತನೂ ಆಗಿದ್ದನು. ಕ್ರಮವಾಗಿ ಅವನು ನಿರ್ವಿಣ್ಣನಾಗುತ್ತ ನಡೆದನು. ಈ ಮೊದಲೇ ಇವನ ಶರೀರದಲ್ಲಿ ಮೂರು ಬರ್ಚಿ ಯ ಗಾಯಗಳೂ, ಮೂರು ಕತ್ತಿಯ ಗಾಯಗಳೂ, ಒಂದು ಬಾಣದ ಗಾಯವೂ ಆಗಿದ್ದವು. ಈ ಏಳೂ ಗಾಯಗಳಿಂದ ರಕ್ತ-ಪ್ರವಾಹವು ಒಂದೇ ಸವನೆ ಹರಿಯು ತಲಿತ್ತು.... ರಜಪೂತಶಲ್ಲಿಯ ಮುಖ್ಯ ವೀರರು ನಿಹತರಾಗಿಹೋಗಿದ್ದರು; ರಜ ಪೂತ ಸೈನಿಕರು ಹೀನಬಲರಾಗಿದ್ದರು. ಈ ಸ್ಥಿತಿಯಲ್ಲಿ ಪ್ರತಾಪನ ಪ್ರಾಣರಕ್ಷಣೆಯ ಆಶೆಯೆಲ್ಲಿ? ದೇಲವಾರದ ಅಧಿಪತಿಯಾದ ವೀರಶ್ರೇಷ್ಠ ಮಾನ್ಸಾನು ದೂರದಿಂದ ಇದನ್ನು ನೋಡಿದನು; ಇವನು ತನ್ನ ಪ್ರಾಣವನ್ನು ಕೊಟ್ಟು, ಮಹಾರಾಣಾನ

  • “ Man Singh springing into the place of the elephant driver, exhibited such intrepidity 88 Turpasses all imagination.” Badaoni II 238.

x There was a market of life-taking and life-surrendering A N III 245. 8 Rajasthan, Vol 1, P. 275 note.