ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಳದೀಘಟ್ಟದ ಯುದ್ದ, ೧೦೩ ಪ್ರಾಣರಕ್ಷಣೆ ಮಾಡುವ ಪ್ರತಿಜ್ಞೆಯನ್ನು ಮಾಡಿದನು; ಮತ್ತು ತೀವ್ರವೇ ತನ್ನ ಝಾಲಾ ಸೈನಿಕರನ್ನು ಕರೆದುಕೊಂಡು ಮುಂದುವರಿದನು. ಪ್ರತಾಪನು ಹಿಂದಕ್ಕೆ ತಿರುಗಿ ನೋಡಿದನು; ರಜಪೂತ ಸೈನಿಕರು ವೀರವಿಕ್ರಮದಿಂದ ಜಯ-ನಿನಾದ ವನ್ನು ಮಾಡುತ್ತ ಮೊಗಲರನ್ನು ಮುತ್ತಿದ್ದರು. ಮುಹೂರ್ತಮಧ್ಯದಲ್ಲಿ ರಾಜಪು ತ್ರರ ರಾಜಛತ್ರವು ಮಾನ್ನಾನ ಮಸ್ತಕವನ್ನಲಂಕರಿಸಿತು; ರಜಪೂತರ ರಕ್ತಸತಾ ಕೆಯು ಝಾಲಾ ಸೈನಿಕರ ಮುಂಭಾಗದಲ್ಲಿ ಕಾಣಹತ್ತಿತು. ಅತ್ಯಲ್ಪ ಕಾಲದಲ್ಲಿ ಈ ಯಾವತ್ತು ಕಾರ್ಯವನ್ನು ಮಾಡಿದ್ದಾಯಿತು ಮೊಗಲರು ಮಾನ್ನಾ ನನ್ನೇ ಮಹಾರಾಣಾನೆಂದು ಭಾವಿಸಿದರು; ಮತ್ತು ಅವನನ್ನು ಕೊಲ್ಲುವದಕ್ಕಾಗಿ ಪ್ರತಾಪ ನನ್ನು ಬಿಟ್ಟ, ಆ ಕಡೆಗೆ ನಡೆದರು. ಮಾನ್ನಾ ನು ರಾಣಾನ ಜೀವವನ್ನುಳಿಸುವದ ಕ್ಕಾಗಿ ತನ್ನ ಪ್ರಾಣವನ್ನು ಬಲಿಯಾಗಿ ಕೊಟ್ಟಿದ್ದನು, ಅವನ ಅನುಚರರಲ್ಲಿ ಒಬ್ಬನೂ ಉಳಿದಿರಲಿಲ್ಲ; ಎಲ್ಲರೂ ರಣ-ಯಜ್ಞಕ್ಕೆ ಆಹುತಿಯಾಗಿದ್ದರು. ಮಾಹಾಪ್ರಾಣನಾದ ಈ ಮಾನ್ಯಾನ ಅದ್ಭುತವಾದ ಆತ್ಮಯಜ್ಞದ ಕಥೆಯು, ರಾಜಸ್ತಾನದ ವೀರಗಾಥೆ ಯಲ್ಲಿ ಚಿರಸ್ಕಣೀಯವಾಗಿ ಉಳಿದಿದೆ.* ಪ್ರತಾಪನು ನೋಡಿದನು-ಮಧ್ಯಾನ್ಹ ಕಾಲವಾಗಿತ್ತುರಜಪೂತರ ಲ್ಲಿಯ ಅಧಿಕಾಂಶ ಜನರು ಮರಣಹೊಂದಿದ್ದರು; ಇನ್ನು ಜಯದ ಯಾವ ಆಶೆಯೂ ಇರಲಿಲ್ಲ. ಪ್ರತಾಪನು ತನ್ನ ಉಳಿದ ಅನುಚರರಿಗೆ ಅವಶ್ಯವಿರುವ ಆಜ್ಞೆ ಯನ್ನಿತ್ತು, ವಿಷಣ್ಣಮುಖನೂ, ಅವಸನ್ನ ದೇಹನೂ ಆಗಿ, ಯುದ್ಧ ಭೂಮಿಯಿಂದ ಹೊರಟು ಹೋದನು. ಹಳದೀಘಟ್ಟದ ಯುದ್ಧವು ಮುಗಿಯಿತು; ಮಾನಸಿಂಹನ ಅಭೀಷ್ಟವು ಪೂರ್ಣವಾಯಿತು; ಮೊಗಲ ಶಿಬಿರದಲ್ಲೆಲ್ಲಿ ನೋಡಿದರೂ ಜಯೋ ಕ್ಲಾಸವು ತುಂಬಿಕೊಂಡಿತು; ಇಂದು ಮೊಗಲರು ಜಯಶಾಲಿಗಳಾಗಿ ಆನಂದ-ಸಾಗ ರದಲ್ಲಿ ಮುಳುಗಿಹೋಗಿದ್ದಾರೆ. ಹೀಗಿದ್ದರೂ ಹಳದೀಘಟ್ಟದ ಯುದ್ಧದಲ್ಲಿ ರಜ

  1. ಪ್ರತಾಪನು ಮಾನ್ನಾನ ಆತ್ಮತ್ಯಾಗದ ಕಥೆಯನ್ನೆಂದೂ ಮರೆಯಲಿಲ್ಲ ಆ ದಿವಸದಿಂದ ಝುವಾಲಾ ಜನರು ಮೇವಾಡದ ರಾಜಪತಾಕೆಯನ್ನು ಹಿಡಿಯುವ ಅಧಿಕಾರವನ್ನು ಹೊಂದಿದರು, ಇವರಿಗೆ ಸದ್ರಿ ಸಂಸ್ಥಾನವು ಇನಾಮಾಗಿ ಕೊಡಲ್ಪಟ್ಟಿತು ಝಾಲಾಸರದಾರನು ರಾಜಧಾನಿಯಿಂದ ಹೊರಡುವ ಕಾಲ, ಅರಮನೆಯ ಬಾಗಿಲದವರೆಗೆ ಇವನೊಡನೆ ನಗಾರಿಯನ್ನು ಬಾರಿಸುವ

ದರ ಮುಂಖಾಂತರವಾಗಿ ಸನ್ಮಾನವನ್ನು ತೋರಿಸುತ್ತಿದ್ದರು, J ಈ ಯುದ್ಧವು ಪ್ರಾತಃಕಾಲದಿಂದ ಮಧ್ಯಾನ್ಹದವರೆಗೆ ಆಯಿತೆಂದು ಬದಾವುನಿಯು ಹೇಹಿದನ Love II, 239