ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ho೪ ಮಹಾರಾಣಾ ಪ್ರತಾಪಸಿಂಹ MMMMMMMMMMMMMMMMMMMMM ಪೂತರು ಸೋತರೋ, ಗೆದ್ದರೋ, ಎಂಬದನ್ನು ಪ್ರಕೃತದಲ್ಲಿ ಹೇಳಲಿಕ್ಕೆ ಬರು ವಂತಿಲ್ಲ. ಗೌರವ-ವೃದ್ಧಿಯೂ, ಅಮರತ್ವ-ಲಾಭವೂ ವಿಜಯದ ಲಕ್ಷಣಗಳಾಗಿದ್ದಲ್ಲಿ, ರಜಪೂತರು ಸೋಲಲಿಲ್ಲವೆಂದು ಹೇಳಬಹುದು. ಗ್ರೀಸದೇಶದಲ್ಲಿ ಧರ್ಮಪಲಿಯ ಸಂಕೀರ್ಣವಾದ ಘಟ್ಟದ ಮಾರ್ಗದಲ್ಲಿ, ಮಹಾವೀರ ಲಿವೋನಿಡಸನು ಅಲ್ಪ ಸಂಖ್ಯಾಕರಾದ ಗ್ರೀಕಿಷ್ಟ್ಯಗಳನ್ನು ತೆಗೆದುಕೊಂಡು, ಇರಾಣದ ಅರಸನ ವಿರಾಟ್ ಸೈನಿಕರೊಡನೆ ಯುದ್ಧ ಮಾಡಿ, ಆತ್ಮಯಜ್ಞದಿಂದ ಜಗತ್ತಿನ ಇತಿಹಾಸ ದಲ್ಲಿ ಅಮರನಾಗಿದ್ದಾನೆ, ಅಂತೆಯೇ ಹಳದೀಘಟ್ಟದ ಸಂಕೀರ್ಣ ಮಾರ್ಗದಲ್ಲಿ ಹದಿನಾಲ್ಕು ಸಾವಿರ ರಜಪೂತವೀರರು ಮತ್ತು ಆತ್ಮಯಜ್ಞದ ಉತ್ತಮ ಉದಾ: ಹರಣೆಯನ್ನು ತೋರಿಸಿ, ಅಮರರಾಗಿ ಉಳಿದಿದ್ದಾರೆ + ತ್ರಯೋದಶ ಪರಿಚ್ಛೇದ. On ಶಕ ಸಿಂಹ, ಕಿಂ ಕರೋತಿ ನರಃ ಪ್ರಜ್ಞಃ ಪ್ರೇರ್ಯಮಾಣ ಸ್ವಕರ್ಮಣಾ | ಪ್ರಾಗೇವ ಹಿ ಮನುಷ್ಯಾಣಾಂ ಬುದ್ದಿ ಕರ್ಮಾನುಸಾರಿಣೀ || ೧ || ಸಮಯೋಚಿತ ಪದ್ಯ ಮಾಲಿಕಾ ಪ್ರತಾಪನು ಯುದ್ಧಭೂಮಿನ್ನು ಬಿಟ್ಟು, ಏಕಾಕಿಯಾಗಿ ದಕ್ಷಿಣಾಭಿಮುಖವಾಗಿ ಹೊರಟನು. ದೂರದಿಂದ ಈರ್ವರು ಮೊಗಲಸೈನಿಕರು ಇವನನ್ನು ನೋಡಿದರು; ಹಿಡಿಯುವದಕ್ಕಾಗಿ ಬೆನ್ನು ಹತ್ತಿದರು, ಯಾಕಂದರೆ ಪ್ರತಾಪನನ್ನು ಹಿಡಿದುಕೊಟ್ಟ + ಹಳದೀಘಟ್ಟದ ಭಯಂಕರ ಯುದ್ಧದಲ್ಲಿ ರಜಪೂತರ ೨೨ ಸಾವಿರ ಜನರಲ್ಲಿ ಸುಮಾರು ೧೪ ಸಾವಿರ ಜನರು ಮಡಿದರೆಂದು ಟಾಡ್ ಸಾಹೇಬರು ಹೇಳಿದ್ದಾರೆ ಇವರಲ್ಲಿ ಪ್ರತಾಪನ ಆತ್ಮೀ 'ಯರ ಸಂಖ್ಯೆಯು ಸುಮಾರು ೫೦೦ ಇತ್ತು ರಾಮಶಹನ ಮೂವರೂ ಮಕ್ಕಳು ಯುದ್ಧದಲ್ಲಿ ಮಡಿದರು ತೋಮರವಂಶದ ೭೫೦ ಜನರು ಸತ್ತರು ರುಲಾ ಸರದಾರನ ೧೫೦ ಜನರು ಮೃತ್ಯು ಮುಖದಲ್ಲಿ ಬಿದ್ದರು ಈ ಯುದ್ಧದಿಂದ ಮೇವಾಡದ ಪ್ರತಿಯೊಂದು ಪರಿವಾರದವರು ಶೋಕಗ್ರ, ಸ್ಪರಾದರು ಈ ಯುದ್ಧದಲ್ಲಿ ಶ್ರೇಷ್ಠವಾದ ೫೦೦ಜನರು ಮಡಿದರೆಂದೂ, ಇವರಲ್ಲಿ ೩೫೦ ಹಿಂದು ಗಳು ೧೫೦ ಮುಸಲ್ಮಾನರು ಇದ್ದರೆಂದೂ ಬದಾವನಿಯು ಹೇಳಿದ್ದಾನೆ.