ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಸಿ೦ಹ, ೧೦೫ ೪ ಇಲ್ಲವೆ ಕೊಂದಲ್ಲಿ ಬಾದಶಹನಿಂದ ಹೇರಳವಾದ ಬಹುಮಾನವು ದೊರೆಯು ತಿತ್ತು. ಪ್ರತಾಪನು ದಣಿದವನೂ, ಗಾಯಾಳುವೂ ಆಗಿದ್ದನು; ಮೇಲಾಗಿ ಯುದ್ಧದ ಫಲವನ್ನೂ ಸ್ವದೇಶದ ಪರಿಣಾಮವನ್ನೂ ಭಾವಿಸಿ, ಚಿಂತೆಯಿಂದಲೂ, ವಿಷಾದದಿಂದಲೂ ಪ್ರಿಯಮಾಣನಾಗಿದ್ದನು. ಕಾರಣ ಅವನಿಗೆ ಶಾರೀರಿಕ, ಮಾನಸಿಕ ವಿಶ್ರಾಂತಿಗಳ ಅವಶ್ಯಕತೆಯು ಬಹಳವಾಗಿತ್ತು. ಯುದ್ಧದಿಂದ ದಣಿದ ಚೈತಕವು ಬಹು ಗಾಯಪಟ್ಟಿದ್ದರೂ, ಸ್ವಾಮಿಯನ್ನು ತೆಗೆದುಕೊಂಡು ಓಡುತ ಲಿತ್ತು. ಇದು ಒಂದೇ ಹಾರಿಕೆಯಿಂದ ಒಂದು ಗಿರಿ-ನದಿಯನ್ನು ದಾಟಿ, ಬೆನ್ನು ಹತ್ತಿ ಬರುವವರ ಕೈಯಿಂದ ಮಹಾರಾಣಾನ ರಕ್ಷಣೆಮಾಡಿತು; ಯಾಕಂದರೆ ರಾಣಾ ನನ್ನು ಹಿಡಿಯಲಿಕ್ಕೆ ಬರುತ್ತಿರುವವರ ಕುದುರೆಗಳು ಹಾರಿ ನದಿಯನ್ನು ದಾಟಲು ಸಮರ್ಥವಾಗಲಿಲ್ಲ. ಪ್ರತಾಪನು ಮತ್ತಿಷ್ಟು ಮುಂದೆ ಹೋದನು. ಹಿಂದಿನಿಂದ ಆರೋ ಒದರುವ ಧ್ವನಿಯು ಕೇಳಬಂದಿತು. ದೂರದಿಂದ ಯಾರೋ ಕೂಗಿ ದರು- ಎಲೈ ನೀಲಿಯ ಕುದುರೆಯ ಸವಾರನೇ, ” ಪ್ರತಾಪನು ಅಲ್ಲಿಯೇ ನಿಂತುಕೊಂಡನು. ಅಶ್ವಾರೋಹಿಯಾದ ಸೈನಿಕನೋರ್ವನು ತೀರವೇಗದಿಂದ ಇವನ ಕಡೆಗೆ ಬರುತ್ತಿದ್ದನು ಪ್ರತಾಪನು ಇವನನ್ನು ಗುರ್ತಿಸಿದನು-ಇವನು ತನ್ನ ತಮ್ಮನಾದ ಶಕ್ತಸಿಂಹನು. - ಶಕ್ತಸಿಂಹನು ಅಣ್ಣನನ್ನು ದ್ವೇಷಿಸಿ, ಮೊಗಲರನ್ನಾಶ್ರಯಿಸಿ, ಸ್ವದೇಶ ದೋಹಿಯಾದನೆಂದು ನಾವು ಹಿಂದೆ ಹೇಳಿದ್ದೇವೆ. ಇವನು ಹಳದೀಘಟ್ಟದ ಯುದ್ಧಭೂಮಿಯಲ್ಲಿ ಮಾನಸಿಂಹನ ಕೈಕೆಳಗೆ ಸೈನಿಕರ ಒಂದು ಗುಂಪಿಗೆ ಅಧಿಪತಿ ಯಾಗಿ, ಯುದ್ದ ಮಾಡಿದನು. ಯುದ್ಧದ ಸಮಯದಲ್ಲಿ ತನ್ನ ಅಣ್ಣನಾದ ಪ್ರತಾಪ ಸಿಂಹನ ಅಸಾಧಾರಣ ವೀರತ್ವವನ್ನು ನೋಡಿ, ಇವನ ಮನಸಿನಲ್ಲಿ ನಿರ್ಮಲವಾದ ಭಕ್ತಿಯು ಹುಟ್ಟಿತು. ಅದರಿಂದ ಇವನು ಪ್ರತಾಪನ ವಿಷಯದಲ್ಲಿರುವ ಹಿಂದಿನ ದ್ವೇಷವನ್ನು ಮರೆತುಬಿಟ್ಟನು. ಇಬ್ಬರು ಮೊಗಲಸೈನಿಕರು ರಣಶ್ರಾಂತನಾದ ತನ್ನ ಅಣ್ಣನ ಬೆನ್ನು ಹತ್ತಿದ್ದನ್ನು ನೋಡಿ ಇವನು ಸುಮ್ಮನಿರದಾದನು. ಈ ವೇಳೆಯಲ್ಲಿ ಸೋದರಪ್ರೇಮವು ಉತ್ಪನ್ನವಾಯಿತು. ಅದರಿಂದ ಅವನು ಯಾವದೇ ರೀತಿ ಯಿಂದಾದರೂ ತನ್ನ ಅಣ್ಣನ ರಕ್ಷಣೆಮಾಡುವ ಮನಸುಮಾಡಿದನು. ಕಾರಣ

  • ಈ ಗಿರಿ.ನದಿಯು ಸಾಬರಮತಿಯ ಒಂದು ಶಾಖೆಯು, ಈ ಶಾಖಾನದಿಯು ಕೋಟಾ ಪಟ್ಟಣದ ವರೆಗೆ ದಕ್ಷಿಣಕ್ಕೆ ಹರಿದು, ಮುಂದೆ ಮೂಲನದಿಯಲ್ಲಿ ಕೂಡಿಹೋಗಿದ.