ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ರಸಿಂಹ, ೧೯೭ ಶಕ್ತಸಿಂಹನು ಈ ಸ್ಥಳದಲ್ಲಿ ಬಹುಕಾಲದವರೆಗೆ ನಿಲ್ಲುವಂತಿರಲಿಲ್ಲ; ಯಾ ಕಂದರೆ ಇದನ್ನು ಮೊಗಲ ಸೇನಾಪತಿಯು ನೋಡಿದನಾದರೆ, ಇಲ್ಲವೆ ಯಾರಿಂದಾ ದರೂ ತಿಳಿದರೆ, ಶಿಕ್ಷೆಗೊಳಗಾಗಬೇಕಾದೀತೆಂಬ ಭಯವಿದ್ದಿತು. ಕಾರಣ ಇವನು ತನ್ನ ಕುದುರೆಯನ್ನು ಪ್ರತಾಪನಿಗೆ ಕೊಟ್ಟು, ಭಕ್ತಿಭಾವದಿಂದ ನಮಸ್ಕಾರಮಾಡಿ, ನಿರೋಪವನ್ನು ಪಡೆದು, ಹೊರಟುಹೋದನು. ಇವನು ಹೋಗುವ ಮುಂದೆ, ಅನುಕೂಲತೆಯೊದಗಿದಲ್ಲಿ ತೀವ್ರವೇ ಪುನಃ ದರ್ಶನ ತೆಗೆದುಕೊಳ್ಳುವೆನೆಂದು ಅಣ್ಣನ ಮುಂದೆ ಹೇಳಿಹೋದನು. ಮುಂದೆ ತುಸು ದಿವಸಗಳಾದ ಮೇಲೆ, ಈ ಸಂಗತಿಯು ಪ್ರಕಾಶವಾಯಿತು. ಇದರಿಂದ ಮೊಗಲಸೇನಾಪತಿಯು ಶಕ್ತಸಿಂಹನ ಮೇಲೆ ಸಿಟ್ಟಾದನು. ಶಕ್ತನು ಇವನ ಅಪ್ಪಣೆಯಂತೆ ಮೊಗಲರ ಶಿಬಿರವನ್ನು ಬಿಟ್ಟು ಹೋಗಬೇಕಾಯಿತು. ಶಕ್ತನು ಈ ಅಪ್ಪಣೆಯನ್ನು ಹೊಂದಿ, ಹರ್ಷೋತ್ಸುಲ್ಲನಾಗಿ ತನ್ನ ಸೈನಿಕರೊಡನೆ ಹೊರಬಿದ್ದನು. ಈ ಸಮಯದಿಂದ ಶಕ್ತನ ಸುದಿನಗಳು ಪುನಃ ತಿರುಗಿದವು. ಅನರ್ಧಕರವಾದ ಭ್ರಾತೃದ್ವೇಷದ ವಶವರ್ತಿಯಾಗಿ ಮಹಾವೀರ ಶಕ್ತನು ಸ್ವದೇಶ ದ್ರೋಹಿಯಾಗಿದ್ದನು. ರಜಪೂತರ ಶಾಸ್ತ್ರದಲ್ಲಿ ಸ್ವದೇಶದ್ರೋಹಿಗಳಂತಹ ಪಾಪಿ ಗಳಾರೂ ಇಲ್ಲ, ಅಂದರೆ ದೇಶದ್ರೋಹವು ಮಹಾ ಪಾತಕವೆಂದೆಣಿಸಲ್ಪಡುತ್ತಿತ್ತು. ಈ ಪಾಪದಿಂದ ಪಾರಾಗುವದಕ್ಕಾಗಿ ಶಕ್ತಸಿಂಹನು ಆನಂದದಿಂದ ಮೊಗಲರ ಪಕ್ಷವನ್ನು ತ್ಯಜಿಸಿದನು. ಪುನರ್ಮಿಲನದ ಸಮಯದಲ್ಲಿ ಮಹಾರಾಣಾನಿಗೆ ಯಾವ ದಾದರೊಂದು ಉಪಯುಕ್ತ ನಜರಾಣಿಯನ್ನು ಕೊಡಬೇಕೆಂದು ಶಕ್ತಸಿಂಹನಿಗೆ ಇಚ್ಛೆಯಾಯಿತು. ಕಾರಣ ಅವನು ಹಾದಿಯಲ್ಲಿರುವ ವಾಯಿನಸ್ರರ ದುರ್ಗ ವನ್ನು ಮುತ್ತಿ, ಅದನ್ನು ವಶಮಾಡಿಕೊಂಡನು; ಮತ್ತು ಅದನ್ನು ಪ್ರತಾಪನಿಗೆ ಕಾಣಿಕೆಯಾಗಿ ಕೊಟ್ಟನು. ಪ್ರತಾಪನು ತಮ್ಮನ ಈ ಕಾರ್ಯದಿಂದ ಸಂತುಷ್ಟ ನಾಗಿ, ಈ ಕೋಟೆಯನ್ನು ವಂಶಪರಂಪರೆಯಾಗಿ ಭೋಗಿಸುವದಕ್ಕಾಗಿ ಶಕ್ತ 8 ವಾಯಿನಸ್ರರ ದುರ್ಗವು ಮೇವಾಡದ ಪೂರ್ವ ಸೀಮಾಂತದಲ್ಲಿ ಬ್ರಾಹ್ಮಣ ಮತ್ತು ಚಂಬಳನದಿಗಳ ಸಂಗಮ ಸ್ಥಳದಲ್ಲಿದೆ. ಈ ಸ್ಥಳದ ಪೌರ್ವಾತ್ಯ ಸೌಂದರ್ಯವು ಅತುಲ ರಮಣೀ ಯವಾಗಿದೆ ಟಾಡ್ ಸಾಹೇಬರು ಇದರ ವಿಶೇಷ ವಿವರಣೆಯನ್ನು ಕೊಟ್ಟಿದ್ದಾರ Rajasthan, Vol. 11 Personal narratives PP. 558-566, ಈ ದುರ್ಗವು ಈಗ ಕೋಟಾ ಎಜೆನ್ಸಿಯಲ್ಲಿದೆ.