ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೮ •• • • ಮಹಾರಾಣಾ ಪ್ರತಾಪಸಿಂಹ , v vv , , • • •v vvv , , V V / > /Y vvvvvvvvvvvvv ಸಿಂಹನಿಗೆ ತಿರುಗಿ ಕೊಟ್ಟನು ಆ ಕಾಲದಿಂದ ಮನಮೋಹನವಾದ ವಾಯಿನ ಸೋರದುರ್ಗವು ಶಕ್ತನ ವಂಶಜರ ಅಧವಾ ಶಕ್ತಾಯತ್ ಜನರ ಆವಾಸಸ್ಥಾನ ವೆಂದು ನಿರ್ದಿಷ್ಟವಾಗಿದೆ. ರಾಜಮಾತೆಯು ತನ್ನ ಮಕ್ಕಳಲ್ಲಿ ಶಕ್ತಸಿಂಹನನ್ನು ವಿಶೇಷವಾಗಿ ಪ್ರೀತಿಸು ತ್ತಿದ್ದಳು ಅದರಿಂದವಳು, ಶಕ್ತನು ವಾಯಿನ್‌ಸ್ಕೋರ ದುರ್ಗದಲ್ಲಿ ವಾಸಮಾಡ ಹತ್ತಿದ ಬಳಿಕ, ಇಲ್ಲಿಗೆ ಬಂದು, ಶಕ್ತನ ಸಂಸಾರದ ವ್ಯವಸ್ಥೆಯನ್ನು ನೋಡಹತ್ತಿ ದಳು. ಮೇವಾಡದ ರಾಜಮಾತೆಗೆ ( ಬಾಯಿಜಿರಾಜ' ಎಂದೆನ್ನುತ್ತಿದ್ದರು. ಅದ ರಿಂದ ಶಕ್ತಾಯತ್ ಕುಲದ ಮಾತೆಯರು ಬಹು ದಿವಸಗಳ ವರೆಗೆ ಈ ಹೆಸರಿನಿಂದ ಪರಿಚಿತರಾಗಿದ್ದರು. ಶಕ್ತನ ಆಗಮನದಿಂದ ಪ್ರತಾಪನ ಬಲವು ಬೆಳೆಯಿತು; < ಚಂದಾಯತ್ ' ರಜಪೂತರಂತೆ “ ಶಕ್ತಾಯತ್ ' ರಜಪೂತರಾದರೂ ವೀರಶ್ರೇಷ್ಠ ರಲ್ಲಿ ಅಗ್ರಣಿಗಳಾದರು. ಶಕ್ತಸಿಂಹನು ಖುರಾಸನ ಮತ್ತು ಮುಲತಾನ ಸೈನಿಕರೀ ರ್ವರನ್ನು ಕೊಂದು, ಅಣ್ಣನನ್ನು ಸಂರಕ್ಷಿಸಿದ್ದರಿಂದ, ಇವನ ವಂಶಜರೆಲ್ಲರು « ಖುರಾಸಾನೀ ಮುಲತಾದೀಕಾ ಅಗ್ಗಲ” (ಅರ್ಗಲ ಅಧವಾ ಪ್ರತಿರೋಧಕಾರಿ) ಎಂಬ ಹೆಸರಿನಿಂದ ಪ್ರಸಿದ್ಧರಾದರು. ಚತುರ್ದಶ ಪರಿಚ್ಛೇದ. - w e + + ,- ಸಮರ-ಲೀಲಾ. ಕುಟಿಲತರ ಯುದ್ಧ ಮಾರ್ಗವು { ದಿಟಮಾದೊಡೆ ಶೂರಜನಕ ಯೋಗ್ಯಂ ಸಲೆ ಸಂ || ಕಟದಲಿ ಚರಿಪುದು ಪೊಡವಿಪ | ರಾಟವು ವಾರಾಂಗನೇವ ಬಹುವಿಧರೂಪಂ || ೧ ಹಳದೀಘಟ್ಟದ ಯುದ್ಧವು ಆಷಾಢಮಾಸದ ಪ್ರಥಮ ಭಾಗದಲ್ಲಾಯಿತು. ಈ ಸಮಯದಲ್ಲಿ ಭೀಷಣವಾದ ಗ್ರೀಷ್ಟ ಕಾಲವಿದ್ದಿತು. 'ಅದರಲ್ಲಿಯೂ ಯುದ್ಧವು ಸಮಾಪ್ತವಾದಾಗ-ಮಧ್ಯಾನ್ಹದ ಎರಡು ಗಂಟೆಯ ಸುಮಾರಕ್ಕೆ ರವಿಯ ತಾಪ ದಿಂದ ಪರ್ವತದ ಪ್ರದೇಶವು ಬೆಂಕಿಯಂತ ಸುಡುತಲಿದ್ದಿತು. ಮಹಾರಾಣಾನ ಸೈನಿಕರಲ್ಲಿ ಜೀವದಿಂದುಳಿದವರು ಅಲ್ಪಕಾಲದಲ್ಲಿ ತಮ್ಮ ಚಿರಪರಿಚಿತವಾದ ಗುಡ್ಡ ಗಾಡು ಪ್ರದೇಶದಲ್ಲಿ ಅಡಿಗಿಹೋದರು; ಮೊಗಲ ಸೈನಿಕರು ಬಹಳವಾಗಿ ದಣಿದ ವರೂ, ಶಕ್ತಿಗುಂದಿದವರೂ ಆದುದರಿಂದವರು ಇಂತಹ ಭೀಷಣಪ್ರಖರತೆಯ ಕಾಲ